Site icon Vistara News

Tomato Challenge: ‘ಟೊಮ್ಯಾಟೊ ಬೆಲೆ ಇಳಿಸಲು ಐಡಿಯಾ ಕೊಡಿ’ ಅಭಿಯಾನ; ನೀವೂ ಭಾಗವಹಿಸಿ

Tomato Challenge By Central Government

Tomato Grand Challenge Hackathon: Central Government seeks ideas to curb soaring prices

ನವದೆಹಲಿ: ದೇಶದ ಬಹುತೇಕ ಭಾಗಗಳಲ್ಲಿ ಟೊಮ್ಯಾಟೊ ಬೆಲೆ ಗಗನಕ್ಕೇರಿದೆ. ಹೆಚ್ಚಿನ ಭಾಗಗಳಲ್ಲಿ ಒಂದು ಕೆ.ಜಿ ಟೊಮ್ಯಾಟೊ ಬೆಲೆ ಸೇಬು ಹಣ್ಣಗಿಂತ ಜಾಸ್ತಿ ಅಂದರೆ, 100 ರೂಪಾಯಿ ದಾಟಿದೆ. ಇದರಿಂದ ಜನ ಟೊಮ್ಯಾಟೊ ಖರೀದಿಸಲು ಆಗದೆ, ಅದನ್ನು ಬಿಡಲೂ ಆಗದೆ ಪರದಾಡುತ್ತಿದ್ದಾರೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು ಟೊಮ್ಯಾಟೊ ಬೆಲೆ ಇಳಿಕೆ ಮಾಡಲು ಜನರಿಂದ ಕ್ರಿಯೇಟಿವ್‌ ಉಪಾಯಗಳನ್ನು ಕೊಡಿ ಎಂದು ಅಭಿಯಾನ (Tomato Challenge) ಆರಂಭಿಸಿದೆ.

ಹೌದು, ಕೇಂದ್ರ ಸರ್ಕಾರವು ಟೊಮ್ಯಾಟೊ ಬೆಲೆಯನ್ನು ನಿಯಂತ್ರಿಸಲು ಟೊಮ್ಯಾಟೊ ಗ್ರ್ಯಾಂಡ್‌ ಚಾಲೆಂಜ್‌ ಹ್ಯಾಕಥಾನ್ (Tomato Grand Challenge Hackathon)‌ ಆರಂಭಿಸಿದೆ. ದೇಶದ ಜನರು ಕ್ರಿಯೇಟಿವ್‌ ಆಗಿ ಯೋಚಿಸಿ, ಟೊಮ್ಯಾಟೊ ಬೆಲೆಯನ್ನು ನಿಯಂತ್ರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಕುರಿತು ಹೊಸ ಹೊಸ ಐಡಿಯಾಗಳನ್ನು ಕೇಂದ್ರ ಸರ್ಕಾರಕ್ಕೆ ಕೊಡಬಹುದು. ಈ ಐಡಿಯಾಗಳನ್ನು ಅಳವಡಿಸಿಕೊಂಡು ಟೊಮ್ಯಾಟೊ ಬೆಲೆ ನಿಯಂತ್ರಿಸುವುದು ಕೇಂದ್ರದ ಉದ್ದೇಶವಾಗಿದೆ.

ಯಾರು ಭಾಗವಹಿಸಬಹುದು?

ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕರು, ಸಣ್ಣ ಉದ್ಯಮಿಗಳು, ವೃತ್ತಿ ಜೀವನದಲ್ಲಿ ತೊಡಗಿಸಿಕೊಂಡವರು, ಶಿಕ್ಷಕರು, ನವೋದ್ಯಮ ಆರಂಭಿಸಿದವರು ಸೇರಿ ಹಲವರು ಕೇಂದ್ರ ಸರ್ಕಾರದ ಅಭಿಯಾನದಲ್ಲಿ ಭಾಗವಹಿಸಬಹುದಾಗಿದೆ. ಎರಡು ವಿಭಾಗಗಳಲ್ಲಿ ಜನರು ಸ್ಪರ್ಧಿಸಬಹುದಾಗಿದ್ದು, ವಿದ್ಯಾರ್ಥಿಗಳು, ವೃತ್ತಿಪರರು ಒಂದು ವಿಭಾಗದಲ್ಲಿದ್ದರೆ, ಉದ್ಯಮಿಗಳು, ನವೋದ್ಯಮಿಗಳು ಮತ್ತೊಂದು ವಿಭಾಗದಲ್ಲಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ https://doca.gov.in/gtc/index.php

ಇದನ್ನೂ ಓದಿ: Viral Video: ಪ್ರಾಣಕ್ಕಿಂತ ಪ್ರಯಾಣವೇ ಮುಖ್ಯ, ಚಲಿಸುವ ರೈಲಿಗೆ ನೇತಾಡಿದ ಯುವಕನ ವಿಡಿಯೊ ವೈರಲ್

“ದೇಶದಲ್ಲಿ ಟೊಮ್ಯಾಟೊ ನಾಟಿ ಹಾಗೂ ಕೊಯ್ಲು ಋತುಮಾನ ಆಧರಿಸಿ ಅದರ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಆದರೆ, ಈ ಬಾರಿ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಟೊಮ್ಯಾಟೊ ಬೆಲೆಯೇರಿಕೆಯಾಗಿದೆ. ಹಾಗಾಗಿ, ಕೇಂದ್ರ ಸರ್ಕಾರವು ಜನರಿಂದ ಬೆಲೆ ನಿಯಂತ್ರಣ ಕುರಿತು ಅಭಿಪ್ರಾಯ ಸಂಗ್ರಹಿಸುತ್ತಿದೆ. ಈಗಾಗಲೇ 13 ಉಪಾಯಗಳು ಬಂದಿವೆ” ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್‌ ಕುಮಾರ್‌ ಸಿಂಗ್‌ ಮಾಹಿತಿ ನೀಡಿದರು.

Exit mobile version