Site icon Vistara News

Tomato Price: ರಾಜ್ಯಪಾಲರಿಗೂ ತಟ್ಟಿದ ಟೊಮ್ಯಾಟೊ ಬೆಲೆಯೇರಿಕೆ ಬಿಸಿ; ಅಡುಗೆಯಿಂದ ಟೊಮ್ಯಾಟೊಗೆ ಕೊಕ್‌

Tomato Price Hike

Tomato Price: Punjab Governor Takes Tomatoes Off Raj Bhawan Menu Amid Soaring Prices

ಚಂಡೀಗಢ: ದೇಶಾದ್ಯಂತ ಟೊಮ್ಯಾಟೊ ಬೆಲೆ ಗಗನಕ್ಕೇರಿದೆ. ಬೆಂಗಳೂರಿನಲ್ಲಿ ಒಂದು ಕೆ.ಜಿ ಟೊಮ್ಯಾಟೊ ಬೆಲೆ 100 ರೂ. ದಾಟಿದರೆ, ಇನ್ನೂ ಹಲವು ನಗರಗಳಲ್ಲಿ 300 ರೂ. (Tomato Price) ಆಗಿದೆ. ಇದರಿಂದಾಗಿ ಬಡವರು ಅಡುಗೆಗೆ ಟೊಮ್ಯಾಟೊ ಬದಲು ಹುಣಸೆಹಣ್ಣು ಬಳಸುವಂತಾಗಿದೆ. ಹೀಗೆ, ಟೊಮ್ಯಾಟೊ ಬೆಲೆಯೇರಿಕೆಯಿಂದ ಜನ ಬಳಲುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್‌ ರಾಜ್ಯಪಾಲರು ಮಾದರಿಯ ನಡೆ ಅನುಸರಿಸಿದ್ದಾರೆ. ಇನ್ನು ಮುಂದೆ ರಾಜಭವನದಲ್ಲಿ ಮಾಡುವ ಅಡುಗೆಯಲ್ಲಿ ಟೊಮ್ಯಾಟೊ ಬಳಸಬಾರದು ಎಂದು ಪಂಜಾಬ್‌ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್‌ (Banwarilal Purohit) ಆದೇಶ ಹೊರಡಿಸಿದ್ದಾರೆ.

“ದೇಶದಲ್ಲಿ ಟೊಮ್ಯಾಟೊ ಬೆಲೆ ಜಾಸ್ತಿಯಾಗಿದೆ. ಹವಾಮಾನ ವೈಪರೀತ್ಯ, ಅಗತ್ಯಕ್ಕೆ ತಕ್ಕಂತೆ ಪೂರೈಕೆ ಕೊರತೆ ಸೇರಿ ಹಲವು ಕಾರಣಗಳಿಂದಾಗಿ ಟೊಮ್ಯಾಟೊ ಬೆಲೆ ಜಾಸ್ತಿಯಾದ ಕಾರಣ ಬಡವರು ಟೊಮ್ಯಾಟೊ ಖರೀದಿಸಲು ಪರದಾಡುವಂತಾಗಿದೆ. ಎಷ್ಟೋ ಮನೆಗಳಲ್ಲಿ ಟೊಮ್ಯಾಟೊ ಇಲ್ಲದೆ ಅಡುಗೆ ಮಾಡಲಾಗುತ್ತಿದೆ. ಜನ ಇಂತಹ ಪರಿಸ್ಥಿತಿ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಬೆಂಬಲ ಸೂಚಿಸುವ, ಅವರ ಜತೆ ನಿಲ್ಲುವ ಹಾಗೂ ಮಿತವ್ಯಯದ ದೃಷ್ಟಿಯಿಂದ ರಾಜಭವನದ ಅಡುಗೆಯಲ್ಲಿ ಟೊಮ್ಯಾಟೊ ಬಳಸುತ್ತಿಲ್ಲ” ಎಂದು ಪಂಜಾಬ್‌ ರಾಜಭವನ ಪ್ರಕಟಣೆ ತಿಳಿಸಿದೆ.

ಪಂಜಾಬ್‌ ರಾಜ್ಯಪಾಲ ಬನ್ವಾರಿಲಾಲ್‌ ಪುರೋಹಿತ್.

ಟೊಮ್ಯಾಟೊ ಬಳಕೆ ನಿಲ್ಲಿಸಿದ ಕುರಿತು ರಾಜ್ಯಪಾಲ ಬನ್ವಾರಿಲಾಲ್‌ ಪುರೋಹಿತ್‌ ಅವರು ಪ್ರತಿಕ್ರಿಯಿಸಿದ್ದು, “ದೇಶದ ಮನೆಗಳಲ್ಲಿ ಟೊಮ್ಯಾಟೊ ಬಳಸದಿರುವುದರಿಂದ ಅಥವಾ ಕಡಿಮೆ ಬಳಸುವುದರಿಂದ ಟೊಮ್ಯಾಟೊ ಬೆಲೆಯನ್ನು ತಹಬಂದಿಗೆ ತರಬಹುದಾಗಿದೆ. ಬೇಡಿಕೆ ಕಡಿಮೆಯಾದರೆ ಬೆಲೆ ನಿಯಂತ್ರಣವಾಗುತ್ತದೆ. ಹಾಗಾಗಿ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜನರು ಕೂಡ ಟೊಮ್ಯಾಟೊ ಬೆಲೆ ನಿಯಂತ್ರಣದ ದೃಷ್ಟಿಯಿಂದ ಮನೆಯಲ್ಲಿ ಕಡಿಮೆ ಟೊಮ್ಯಾಟೊ ಬಳಸುತ್ತಾರೆ ಎಂಬ ವಿಶ್ವಾಸವಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Tomato Destroy : ಎರಡು ಎಕರೆಯಲ್ಲಿ ಬೆಳೆದಿದ್ದ ಟೊಮ್ಯಾಟೊ ಹೊಟ್ಟೆಕಿಚ್ಚಿಗೆ ಬಲಿ; ಕಣ್ಣೀರಿಟ್ಟ ರೈತ

ದೇಶದಲ್ಲಿ ಟೊಮ್ಯಾಟೊ ಬೆಳೆದ ರೈತರು ಲಕ್ಷಾಧೀಶರು, ಕೋಟ್ಯಧೀಶರಾದ ಖುಷಿ ಒಂದೆಡೆಯಾದರೆ, ತೀರಾ ಬಡವರು ಟೊಮ್ಯಾಟೊ ಖರೀದಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಂಜಾಬ್‌ನಲ್ಲಿ ಒಂದು ಕೆ.ಜಿ ಟೊಮ್ಯಾಟೊಗೆ 200 ರೂ. ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ಟೊಮ್ಯಾಟೊ ಬೆಲೆ 300 ರೂ. ಆಗಲಿದೆ ಎಂದು ಸಗಟು ವ್ಯಾಪಾರಿಗಳು ಮಾಹಿತಿ ನೀಡಿರುವುದು ಜನರ ಆತಂಕವನ್ನು ಇಮ್ಮಡಿಗೊಳಿಸಿದೆ. ಇಂತಹ ಪರಿಸ್ಥಿತಿಯಲ್ಲಿಯೇ ರಾಜ್ಯಪಾಲರು ಟೊಮ್ಯಾಟೊ ಬಳಕೆಯನ್ನು ನಿಲ್ಲಿಸಿರುವುದು ಮಾದರಿ ನಡೆಯಾಗಿದೆ.

Exit mobile version