Site icon Vistara News

Top Companies: ಅದ್ಭುತ ಕೆರಿಯರ್‌ ನಿಮ್ಮದಾಗಬೇಕೆ? ದೇಶದ ಈ ಟಾಪ್ 25 ಕಂಪನಿ ಟ್ರೈ ಮಾಡಿ

Top Companies

ಕಾಲೇಜು (college) ಮುಗಿಯಿತು, ಇನ್ನು ವೃತ್ತಿ ಜೀವನ (career life) ಪ್ರಾರಂಭಿಸಬೇಕು, ಈಗಾಗಲೇ ಉದ್ಯೋಗ (job) ಸಿಕ್ಕಿದೆ ವೃತ್ತಿ ಜೀವನ ಬೆಳೆಸಲು ಪೂರಕವಾದ ಕೆಲಸಬೇಕು ಎನ್ನುವ ಯೋಚನೆಯಲ್ಲಿ ಇದ್ದೀರಾ.. ಹಾಗಿದ್ದರೆ ಭಾರತದ (india) 25 ಪ್ರಮುಖ ಕಂಪನಿಗಳು (Top Companies) ಮತ್ತು ಅಲ್ಲಿರುವ ಅವಕಾಶಗಳ ಬಗ್ಗೆ ತಿಳಿದುಕೊಳ್ಳಿ.

ಭಾರತದ ಟಾಪ್- 25 ಕಂಪೆನಿಗಳ ಪಟ್ಟಿಯನ್ನು ಸಾಮಾಜಿಕ ಮಾಧ್ಯಮ ಉದ್ಯೋಗಗಳ ಪೋರ್ಟಲ್ ಲಿಂಕ್ಡ್ ಇನ್ ಬಿಡುಗಡೆ (LinkedIn Report) ಮಾಡಿದೆ. ಇದರಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (Tata Consultancy Services ), ಅಕ್ಸೆಂಚರ್ (Accenture) ಮತ್ತು ಕಾಗ್ನಿಜೆಂಟ್ (Cognizant) ಸೇರಿದಂತೆ ಭಾರತದ 25 ಪ್ರಸಿದ್ಧ ಕಂಪನಿಗಳು ವೃತ್ತಿ ಜೀವನವನ್ನು ಬೆಳೆಸಲು ಸೂಕ್ತ ಎಂದು ಹೇಳಿದೆ. ಭಾರತದಲ್ಲಿನ ಲಿಂಕ್ಡ್‌ಇನ್ ಟಾಪ್ ಕಂಪನಿಗಳು-2024 ವರದಿಯ ಪ್ರಕಾರ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಮೊದಲ ಸ್ಥಾನದಲ್ಲಿದೆ.

ಇದನ್ನೂ ಓದಿ: Job Alert: ಉದ್ಯೋಗ ಹುಡುಕುತ್ತಿದ್ದೀರಾ? ಇಲ್ಲಿದೆ ಗುಡ್‌ನ್ಯೂಸ್‌; ಏರ್‌ ಟ್ರಾನ್ಸ್‌ಪೋರ್ಟ್‌ ಸರ್ವೀಸ್ ಹುದ್ದೆಯ ಸಂದರ್ಶನಕ್ಕೆ ನೇರ ಹಾಜರಾಗಿ


ಉದ್ಯೋಗ ವಿಧಾನಗಳು ಮೇಲೆ ನಿರ್ಧಾರ

8ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಲಿಂಕ್ಡ್‌ಇನ್ ಟಾಪ್ ಕಂಪನಿಗಳ ಪಟ್ಟಿಯು ಭಾರತದಲ್ಲಿ ವೃತ್ತಿಜೀವನವನ್ನು ಬೆಳೆಸಲು ಜಾಗತಿಕವಾಗಿ 5,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ 25 ಪ್ರಮುಖ ಕೆಲಸದ ಸ್ಥಳಗಳನ್ನು ಗುರುತಿಸಿದೆ. ಟಾಪ್ 25 ಕಂಪನಿಗಳ ಆಯ್ಕೆ ಪ್ರಕ್ರಿಯೆಯು ಉದ್ಯೋಗಿಗಳು ಹೇಗೆ ಬಡ್ತಿ ಪಡೆಯುತ್ತಿದ್ದಾರೆ, ಹೊಸ ಕೌಶಲ್ಯಗಳನ್ನು ಹೇಗೆ ಅಳವಡಿಸಿಕೊಳ್ಳುತ್ತಿದ್ದಾರೆ, ಹೆಚ್ಚಿನ ಅವಕಾಶಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಮೊದಲಾದವುಗಳು ಸೇರಿ ಉದ್ಯೋಗ ವಿಧಾನಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿದೆ. ನೇಮಕಾತಿ ವೇಳೆ ಈ 25 ಕಂಪನಿಗಳು ಹೆಚ್ಚು ಆಶಾವಾದಿಯಾಗಿ ಕಾಣುತ್ತವೆ ಎಂದು ಹೇಳಿದೆ.

ಟಾಪ್ ಕಂಪನಿಗಳು ಯಾವುದೆಲ್ಲ ?

2024ರಲ್ಲಿ ಲಿಂಕ್ಡ್‌ಇನ್ ಗುರುತಿಸಿರುವ ಟಾಪ್ 25 ಕಂಪನಿಗಳಲ್ಲಿ ಭಾರತದ ಅತಿದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಇದರೊಂದಿಗೆ ಇತರ ಐಟಿ ಕಂಪನಿಗಳಾದ Accenture ಮತ್ತು Cognizants. ಟಾಪ್- 25 ಕಂಪನಿಗಳಲ್ಲಿ ಸೇರಿಕೊಂಡಿದೆ. ಒಂಬತ್ತು ಹಣಕಾಸು ಸೇವಾ ಕಂಪೆನಿಗಳು ಇದರಲ್ಲಿದ್ದು, ಮ್ಯಾಕ್ವಾರಿ ಗ್ರೂಪ್ 4ನೇ ಸ್ಥಾನ, ಮೋರ್ಗಾನ್ ಸ್ಟಾನ್ಲಿ 5 ನೇ ಸ್ಥಾನ ಮತ್ತು ಜೆಪಿ ಮೋರ್ಗಾನ್ ಚೇಸ್ ಮತ್ತು ಕೋ 6ನೇ, ಎಚ್‌ಸಿಎಲ್ ಎಂಟರ್‌ಪ್ರೈಸ್ – 12, ಅಮೆಜಾನ್- 15 ಮತ್ತು ಮಾಸ್ಟರ್‌ಕಾರ್ಡ್-17ನೇ ಸ್ಥಾನದಲ್ಲಿದೆ.

ತಂತ್ರಜ್ಞಾನ ವಲಯದ ಕಂಪನಿಗಳಾದ ಬ್ರಿಸ್ಟಲ್ ಮೈಯರ್ಸ್ ಸ್ಕ್ವಿಬ್- 8, ನೋವೊ ನಾರ್ಡಿಸ್ಕ್- 24 ಮತ್ತು ವಿಯಾಟ್ರಿಸ್- 25ನೇ ಸ್ಥಾನದಲ್ಲಿದೆ. ಇವುಗಳೊಂದಿಗೆ ಫಾರ್ಮಾಸ್ಯುಟಿಕಲ್ ಉದ್ಯಮದ ಕಂಪನಿಗಳು ಸಹ ಉತ್ತಮ ಎಂದು ಪರಿಗಣಿಸಲ್ಪಟ್ಟಿದೆ. ಲಿಂಕ್ಡ್ ಇನ್ ಪಟ್ಟಿಯ ಪ್ರಕಾರ ಲೆಂಟ್ರಾ, ಮೇಕ್‌ಮೈಟ್ರಿಪ್ ಮತ್ತು ರೆಡಿಂಗ್‌ಟನ್ ಲಿಮಿಟೆಡ್ ಭಾರತದಲ್ಲಿ ನ ಚೊಚ್ಚಲ ಉನ್ನತ ಮಧ್ಯಮ ಗಾತ್ರದ ಕಂಪೆಗಳಾಗಿ ಗುರುತಿಸಿಕೊಂಡಿದೆ.

ಮಧ್ಯಮ ಗಾತ್ರದ ಕಂಪನಿಗಳು

2024ರಲ್ಲಿ ಲಿಂಕ್ಡ್ ಇನ್ ಗುರುತಿಸಿರುವ ಅಗ್ರ ಮಧ್ಯಮ ಗಾತ್ರದ 250-500 ಉದ್ಯೋಗಿಗಳನ್ನು ಒಳಗೊಂಡಿರುವ ಕಂಪೆನಿಗಳ ಪಟ್ಟಿಯಲ್ಲಿ SaaS ಪ್ಲಾಟ್‌ಫಾರ್ಮ್ ಲೆಂಟ್ರಾ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಮೇಕ್‌ಮೈಟ್ರಿಪ್ 2ನೇ ಸ್ಥಾನದಲ್ಲಿದೆ. ಪ್ರೊಫೆಷನಲ್ ಅಸಿಸ್ಟೆನ್ಸ್ ಫಾರ್ ಡೆವಲಪ್‌ಮೆಂಟ್ ಆಕ್ಷನ್ 7, ನೈಕಾ 9 ಮತ್ತು ಡ್ರೀಮ್ 11ನೇ ಸ್ಥಾನದಲ್ಲಿದೆ. ಪ್ರಯಾಣ, ಹಣಕಾಸು ಸಾಮಾಜಿಕ ಪರಿಣಾಮ ಮತ್ತು ಫ್ಯಾಂಟಸಿ ಕ್ರೀಡೆಗಳಾದ್ಯಂತ ವ್ಯಾಪಕ ಅವಕಾಶಗಳನ್ನು ಇದು ಎತ್ತಿ ತೋರಿಸಿದೆ.

ಶ್ರೇಯಾಂಕ ನಿರ್ಧಾರ ಹೇಗೆ ?

ಲಿಂಕ್ಡ್‌ಇನ್ ನೀಡಿರುವ ಮಾಹಿತಿ ಪ್ರಕಾರ ಕಂಪೆನಿಗಳಿಗೆ ಶ್ರೇಯಾಂಕವನ್ನು ಎಂಟು ಅಂಶಗಳನ್ನು ಗಮನಿಸಿ ನೀಡಲಾಗಿದೆ. ಕೌಶಲ್ಯಗಳ ಬೆಳವಣಿಗೆ, ಕಂಪೆನಿಯ ಸ್ಥಿರತೆ, ಬಾಹ್ಯ ಅವಕಾಶ, ಕಂಪನಿ ಬಾಂಧವ್ಯ, ಲಿಂಗ ವೈವಿಧ್ಯತೆ, ಶೈಕ್ಷಣಿಕ ಹಿನ್ನೆಲೆ ಮತ್ತು ಉದ್ಯೋಗಿಗಳ ಉಪಸ್ಥಿತಿ ಇದರಲ್ಲಿ ಸೇರಿದೆ.


ಹೆಚ್ಚು ಬೇಡಿಕೆ ಇರುವ ಕ್ಷೇತ್ರಗಳು

ಎಂಜಿನಿಯರಿಂಗ್, ಕನ್ಸಲ್ಟಿಂಗ್, ವಿಶ್ಲೇಷಕ, ಮಾರಾಟ, ಕಾರ್ಯಾಚರಣೆಗಳು ಮತ್ತು ಹಣಕಾಸು, ಹೂಡಿಕೆಯಲ್ಲಿ ಕೆಲಸ ಮಾಡುತ್ತಿರುವ ಕಂಪೆನಿಗಳು ಹೆಚ್ಚು ಉದ್ಯೋಗವನ್ನು ಸೃಷ್ಟಿಸುತ್ತಿದ್ದು, ಈ ಕ್ಷೇತ್ರಗಳಲ್ಲಿ ಹೆಚ್ಚು ಬೇಡಿಕೆ ಇದೆ ಎಂದು ತಿಳಿಸಿದೆ.

ಉದ್ಯೋಗಾವಕಾಶ ಎಲ್ಲಿ ಹೆಚ್ಚಿದೆ ?

ಉದ್ಯೋಗಾವಕಾಶ ನೀಡುವಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, ಹೈದರಾಬಾದ್, ಮುಂಬಯಿ ಮೆಟ್ರೋಪಾಲಿಟನ್ ಪ್ರದೇಶ ಮತ್ತು ಪುಣೆ ಅನಂತರದ ಸ್ಥಾನದಲ್ಲಿದೆ.

Exit mobile version