ಮುಂಬೈ, ಮಹಾರಾಷ್ಟ್ರ: ಕಾರ್ ಬಾನೆಟ್ ಮೇಲೆ ಟ್ರಾಫಿಕ್ ಪೊಲೀಸ್‌ರೊಬ್ಬರನ್ನು, ಆ ಕಾರಿನ ಚಾಲಕ ಸುಮಾರು 20 ಕಿ.ಮೀ.ವರೆಗೂ ಎಳೆದುಕೊಂಡು ಘಟನೆ ನವಿ ಮುಂಬೈನಲ್ಲಿ ಶನಿವಾರ ನಡೆದಿದೆ. ಡ್ರಗ್ಸ್ ಸೇವಿಸಿ ಚಾಲಕ ಕಾರು ಚಾಲನೆ ಮಾಡುತ್ತಿದ್ದ. ಕಾರ್ ತಡೆಯಲು ಟ್ರಾಫಿಕ್ ಪೊಲೀಸ್ ಹೋದಾಗ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ(Viral Video).
ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ 37 ವರ್ಷದ ಟ್ರಾಫಿಕ್ ಪೊಲೀಸ್ ಸಿದ್ದೇಶ್ವರ್ ಮಾಲಿ ಬಂದೋಬಸ್ತ್ ಕರ್ತವ್ಯದಲ್ಲಿದ್ದರು. ಚಾಲಕನನ್ನು 22 ವರ್ಷದ ಆದಿತ್ಯಾ ಬೆಂಬ್ಡೆ ಎಂದು ಗುರುತಿಸಲಾಗಿದೆ. ಆತನನ್ನು ಬಂಧಿಸಿರುವ ಪೊಲೀಸರು, ಕೊಲೆ ಯತ್ನ, ಮಾದಕ ವಸ್ತು ಸೇವನೆ ತಡೆ ಕಾಯ್ದೆಗಳಡಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಡೀ ಘಟನೆಯು ಪಲ್ಮಾ ಬೀಚ್ ರೋಡ್‌ನಲ್ಲಿ ನಡೆದಿದ್ದು, ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬಾನೆಟ್ ಮೇಲೆ ಪೊಲೀಸ್ ಅವರನ್ನು ಎಳೆದುಕೊಂಡು ಹೋಗುತ್ತಿರುವ ವಿಡಿಯೋ ದೃಶ್ಯಾವಳಿ
ಮಾಲಿ ಹಾಗೂ ಇನ್ನೊಬ್ಬ ಪೊಲೀಸ್ ಅವರು ಕೋಪರಖೈರೆನೆ-ವಾಶಿ ಲೇನ್ ರಸ್ತೆಯಲ್ಲಿ ಕಾರ್ ತಡೆಯಲು ಮುಂದಾಗಿದ್ದಾರೆ. ಆಗ ಕಾರ್ ಚಾಲಕ ಮಾಲಿ ಮೇಲೆ ಕಾರ್ ಹರಿಸಲು ಮುಂದಾಗಿದ್ದಾನೆ. ಆ ಗಳಿಗೆಯಲ್ಲಿ ಬಾನೆಟ್ ಮೇಲೆ ಮಾಲಿ ಬಿದ್ದಿದ್ದಾರೆ. ಆಗವಾಹನವನ್ನು ನಿಲ್ಲಿಸುವು ಬದಲಿಗೆ ಆರೋಪಿ ಚಾಲಕ, ಕಾರನ್ನು ಘಟನಾ ಸ್ಥಳದಿಂದ ಸುಮಾರು 20 ಕಿ.ಮೀ.ದೂರದ ಗವನ್ ಘಾಟ್‌ವರೆಗೂ ಎಳೆದುಕೊಂಡು ಹೋಗಿದ್ದಾನೆ.
ಇದನ್ನೂ ಓದಿ: Road Accident: ಬೈಕ್ ತಡೆಯಲು ಯತ್ನಿಸಿದ ಟ್ರಾಫಿಕ್ ಪೊಲೀಸ್‌ಗೆ ಗುದ್ದಿದ ಬೈಕ್ ಸವಾರ; ಎಗರಿಬಿದ್ದ ಹೆಡ್ ಕಾನ್ಸ್‌ಟೇಬಲ್
20 ಕಿ.ಮೀ ಕ್ರಮಿಸಿದ ಬಳಿಕ ಟಾಪ್ ಮೇಲಿದ್ದ ಚಾಲಕ ಕೆಳಗೆ ಬಿದ್ದಿದ್ದಾನೆ. ಆ ಮಧ್ಯ ಕಾರನ್ನ ಪೊಲೀಸರು ಚೇಜ್ ಮಾಡುತ್ತಿದ್ದರು. ಆ ಬಳಿಕ ಆತನನ್ನು ಅಟ್ಟಿಸಿಕೊಂಡು ಹೋದ ಪೊಲೀಸರು ಬಂಧಿಸಿದ್ದಾರೆ. ಬಳಿಕ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆತ ಡ್ರಗ್ಸ್ ಸೇವಿಸಿರುವುದು ಪತ್ತೆಯಾಗಿದೆ.