Site icon Vistara News

Train Accident: ಮತ್ತೊಂದು ರೈಲು ದುರಂತ: ಹೌರಾ-ಮುಂಬೈ ಎಕ್ಸ್‌ಪ್ರೆಸ್‌ ಹಳಿ ತಪ್ಪಿ 6 ಮಂದಿಗೆ ಗಾಯ

Train Accident

ರಾಂಚಿ: ದೇಶದಲ್ಲಿ ಮತ್ತೊಂದು ರೈಲು ದುರಂತ ಸಂಭವಿಸಿದೆ (Train Accident). ಜಾರ್ಖಂಡ್‌ನ ಚರಧರ್‌ಪುರ ವಿಭಾಗದ ಸೆರೈಕೆಲಾ-ಖರ್ಸಾವನ್ ಜಿಲ್ಲೆಯ ರಾಜ್ಖರ್ಸ್ವಾನ್ ವೆಸ್ಟ್ ಔಟರ್ ಮತ್ತು ಬಾರಾಬಂಬೂ ನಡುವೆ 12810 ನಂಬರ್‌ನ ಹೌರಾ-ಮುಂಬೈ ಪ್ಯಾಸೆಂಜರ್ ರೈಲು (Howara-CSMT Express train) ಇಂದು (ಜುಲೈ 30) ಮುಂಜಾನೆ 3: 43ರ ವೇಳೆಗೆ ಹಳಿ ತಪ್ಪಿದೆ. ಘಟನೆಯಲ್ಲಿ ಕನಿಷ್ಠ ಐದರಿಂದ ಆರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗಾಯಗೊಂಡ ಎಲ್ಲ ಪ್ರಯಾಣಿಕರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ರೈಲಿನ 14 ಬೋಗಿಗಳು ಹಳಿ ತಪ್ಪಿವೆ. ಈ ಘಟನೆಯ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಘಟನೆಯ ಬಗ್ಗೆ ಮಾತನಾಡಿದ ಭಾರತೀಯ ರೈಲ್ವೆ ಅಧಿಕಾರಿಗಳು, ಎಡಿಆರ್‌ಎಂ ಸಿಕೆಪಿ (ADRM CKP) ಮತ್ತು ಎಆರ್‌ಎಂಇ (ARME) ಸಿಬ್ಬಂದಿ ಮತ್ತು ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿಸಿದ್ದಾರೆ.

ಸಹಾಯವಾಣಿ ಸಂಖ್ಯೆ ಬಿಡುಗಡೆ

ಘಟನೆಯ ನಂತರ ಭಾರತೀಯ ರೈಲ್ವೆ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ- ಟಾಟಾನಗರ: 06572290324, ಚಕ್ರಧರ್ಪುರ: 06587 238072, ರೂರ್ಕೆಲಾ: 06612501072, 06612500244, ಹೌರಾ: 9433357920, 03326382217, ರಾಂಚಿ: 0651-27-87115. ಎಚ್‌ಡಬ್ಲ್ಯುಎಚ್‌ ಸಹಾಯ ಕೇಂದ್ರ: 033-26382217, 9433357920, ಎಸ್ಎಚ್ಎಂ ಸಹಾಯ ಕೇಂದ್ರ: 6295531471, 7595074427 ಕೆಜಿಪಿ ಸಹಾಯ ಕೇಂದ್ರ: 03222-293764, ಸಿಎಸ್ಎಂಟಿ ಸಹಾಯವಾಣಿ ಸಂಖ್ಯೆ 55993, ಪಿ & ಟಿ 022-22694040, ಮುಂಬೈ: 022-22694040, ನಾಗ್ಪುರ: 7757912790.

ಇದನ್ನೂ ಓದಿ: Train Accident : ಎಕ್ಸ್​ಪ್ರೆಸ್​ ರೈಲು ಅಪಘಾತ; ನಾಲ್ವರ ಸಾವು, ಹಲವರಿಗೆ ಗಾಯ

ಎರಡು ವಾರದ ಅಂತರದಲ್ಲಿ ನಡೆಯುತ್ತಿರುವ ಎರಡನೇ ರೈಲು ಅಪಘಾತವಿದು. ಜುಲೈ 18ರಂದು ಉತ್ತರ ಪ್ರದೇಶದ ಗೊಂಡಾದಲ್ಲಿ ಚಂಡೀಗಢ-ದಿಬ್ರುಗಢ ಎಕ್ಸ್​​ಪ್ರೆಸ್​​ ರೈಲು ಅಪಘಾತಕ್ಕೆ ಒಳಗಾಗಿ ನಾಲ್ಕು ಮಂದಿ ಮೃತಪಟ್ಟು ಹಲವಾರು ಮಂದಿ ಗಾಯಗೊಂಡಿದ್ದರು. ಎಕ್ಸ್​ಪ್ರೆಸ್​​ ರೈಲಿನ ಹಲವಾರು ಬೋಗಿಗಳು ಹಳಿ ತಪ್ಪಿದ ಪರಿಣಾಮ ದುರ್ಘಟನೆ ಸಂಭವಿಸಿದೆ. ಉತ್ತರ ಪ್ರದೇಶದ ಗೊಂಡಾ ಮತ್ತು ಜಿಲಾಹಿ ನಡುವೆ ಇರುವ ಪಿಕೌರಾ ಪ್ರದೇಶದಲ್ಲಿ ರೈಲು ಅವಘಡ ಸಂಭವಿಸಿತ್ತು.

ಒಟ್ಟು 12 ಬೋಗಿಗಳೊಂದಿಗೆ ರೈಲು ಸಂಚರಿಸುತ್ತಿತ್ತು. ಆ ಪೈಕಿ ನಾಲ್ಕು ಬೋಗಿಗಳು ಜುಲಾಹಿ ರೈಲ್ವೆ ನಿಲ್ದಾಣದ ಕೆಲವು ಕಿಲೋಮೀಟರ್ ಮೊದಲು ಹಳಿ ತಪ್ಪಿದ್ದವು.

Exit mobile version