Site icon Vistara News

Train Accident: ಮಥುರಾದಲ್ಲಿ ಹಳಿ ತಪ್ಪಿ ಪ್ಲಾಟ್‌ಫಾರ್ಮ್‌ ಹತ್ತಿದ ರೈಲು; ಹಲವರಿಗೆ ಗಂಭೀರ ಗಾಯ

Mathura Train Accident

Train Climbs Platform At Uttar Pradesh's Mathura Railway Station, People Injured

ಲಖನೌ: ಉತ್ತರ ಪ್ರದೇಶದ ಮಥುರಾ ರೈಲು ನಿಲ್ದಾಣದಲ್ಲಿ ಎಲೆಕ್ಟ್ರಿಕ್‌ ಮಲ್ಟಿಪಲ್‌ ಯುನಿಟ್‌ (Electric Multiple Unit) ರೈಲೊಂದು ಹಳಿ ತಪ್ಪಿ, ಪ್ಲಾಟ್‌ಫಾರ್ಮ್‌ ಹತ್ತಿದ ಘಟನೆ (Train Accident) ನಡೆದಿದೆ. ರೈಲು ಹಳಿ ತಪ್ಪಿ, ಪ್ಲಾಟ್‌ಫಾರ್ಮ್‌ ಹತ್ತುತ್ತಲೇ ನೂರಾರು ಪ್ರಯಾಣಿಕರು ಭಯದಿಂದ ರೈಲಿನಿಂದ ಇಳಿದಿದ್ದಾರೆ. ಆದರೂ, ಕೆಲವು ಜನರಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

“ದೆಹಲಿಯ ಶಕುರ್‌ ಬಸ್ತಿಯಿಂದ ಆಗಮಿಸುತ್ತಿದ್ದ ರೈಲು ಮಂಗಳವಾರ ರಾತ್ರಿ (ಸೆಪ್ಟೆಂಬರ್‌ 26) ಹಳಿ ತಪ್ಪಿದೆ. ಅಷ್ಟೇನೂ ವೇಗವಾಗಿ ಚಲಿಸುತ್ತಿರಲಿಲ್ಲವಾದರೂ ಏಕಾಏಕಿ ಹಳಿ ತಪ್ಪಿ ಪ್ಲಾಟ್‌ಫಾರ್ಮ್‌ಗೆ ನುಗ್ಗಿದೆ. ಆತಂಕಕ್ಕೀಡಾದ ಪ್ರಯಾಣಿಕರು ಏಕಕಾಲಕ್ಕೆ ಇಳಿಯಲು ಮುಂದಾದ ನೂಕುನುಗ್ಗಲು ಉಂಟಾಗಿದೆ. ಇದರಿಂದಾಗಿ ಕೆಲವರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

“ಶಕುರ್‌ ಬಸ್ತಿಯಿಂದ ಆಗಮಿಸುತ್ತಿದ್ದ ರೈಲು ಮಥುರಾ ರೈಲು ನಿಲ್ದಾಣದಲ್ಲಿ ಮಂಗಳವಾರ ರಾತ್ರಿ 10.49ರ ಸುಮಾರಿಗೆ ಹಳಿ ತಪ್ಪಿ ಪ್ಲಾಟ್‌ಫಾರ್ಮ್‌ ಹತ್ತಿದೆ. ಯಾರೀಗೂ ಹೆಚ್ಚಿನ ಪ್ರಮಾಣದ ತೊಂದರೆ ಆಗಿಲ್ಲ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ” ಎಂದು ಮಥುರಾ ರೈಲು ನಿಲ್ದಾಣದ ನಿರ್ದೇಶಕ ಎಸ್‌.ಕೆ. ಶ್ರೀವಾಸ್ತವ ತಿಳಿಸಿದ್ದಾರೆ. ಕೆಲ ತಿಂಗಳ ಹಿಂದೆಯೂ ಒಡಿಶಾ, ಬಿಹಾರ ಸೇರಿ ಕೆಲ ರಾಜ್ಯಗಳಲ್ಲಿ ರೈಲುಗಳು ಹಳಿ ತಪ್ಪಿದ ಘಟನೆಗಳು ನಡೆದಿದ್ದವು.

ಇದನ್ನೂ ಓದಿ: Odisha Train Accident: ಗಾಯದ ಮೇಲೆ ಬರೆ ಎಂದರೆ ಇದೇ; ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು

ಜೂನ್ 2ರಂದು ಒಡಿಶಾ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ 293 ಪ್ರಯಾಣಿಕರು ಮೃತಪಟ್ಟು, 1200ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಬಾಲಸೋರ್ ಜಿಲ್ಲೆಯ ಬಹನಾಗ್ ಜಝಾರ್ ರೈಲು ನಿಲ್ದಾಣ ಸಮೀಪ ಈ ಭೀಕರ ರೈಲು ಅಪಘಾತ ಸಂಭವಿಸಿತ್ತು. ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಸಿಬಿಐ, ಸೀನಿಯರ್ ಸೆಕ್ಷನ್ ಮ್ಯಾನೇಜರ್ (ಸಿಗ್ನಲ್) ಅರುಣ್ ಕುಮಾರ್ ಮಹಂತಾ, ಸೆಕ್ಷನ್ ಎಂಜಿನಿಯರ್ ಮೊಹಮ್ಮದ್ ಆಮೀರ್ ಖಾನ್, ಟೆಕ್ನಿಷಿಯನ್ ಪಪ್ಪು ಕುಮಾರ್ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. ಪ್ರಕರಣವನ್ನು ಕೇಂದ್ರ ಸರ್ಕಾರವು ಸಿಬಿಐ ತನಿಖೆಗೆ ವಹಿಸಿದೆ.

Exit mobile version