ಬೆಂಗಳೂರು: 76ನೇ ಸ್ವಾತಂತ್ರ್ಯೋತ್ಸವದ ಹಿನ್ನಲೆಯಲ್ಲಿ ಭಾರತ ಸರಕಾರವು ಹರ್ ಘರ್ ತಿರಂಗಾ (ಮನೆಮನೆಯಲ್ಲೂ ರಾಷ್ಟ್ರಧ್ವಜ) ಎರಡನೇ ಹಂತವನ್ನು ಪ್ರಕಟಿಸಿದೆ. (Har Ghar Tiranga) ಈ ಹಿನ್ನೆಲೆಯಲ್ಲಿ ಅಂಚೆ ಕಚೇರಿಯ ಮೂಲಕ ಗುಣಮಟ್ಟದ ರಾಷ್ಟ್ರಧ್ವಜವನ್ನು ಖರೀದಿ ಮಾಡಬಹುದಾಗಿದೆ. ಈ ಧ್ವಜವನ್ನು ಬುಕ್ ಮಾಡುವುದಕ್ಕೆ ಆಗಸ್ಟ್ 12 ಕೊನೇ ದಿನವಾಗಿದೆ ಎಂದು ಅಂಚೆ ಇಲಾಖೆ ಹೇಳಿದೆ. ರಾತ್ರಿ 11.59 ನಿಮಿಷದ ತನಕ ಬುಕ್ ಮಾಡಬಹುದು. ಅಲ್ಲಿಂದ ಬಳಿಕ ಬುಕಿಂಗ್ ನಿಲ್ಲುತ್ತದೆ ಎಂದು ಅಂಚೆ ಇಲಾಖೆಯ ವೆಬ್ಸೈಟ್ನಲ್ಲಿ ಹೇಳಲಾಗಿದೆ. ಅಂಚೆ ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.
ಆಲ್ಇಂಡಿಯಾ ರೇಡಿಯೊದ ವೆಬ್ಸೈಟ್ ಪ್ರಕಾರ ಭಾರತೀಯ ಅಂಚೆ ಕಚೇರಿಯು ದೇಶಾದ್ಯಂತ ವ್ಯಾಪಿಸಿರುವ 1.60 ಲಕ್ಷ ಅಂಚೆ ಕಚೇರಿಯ ಮೂಲಕ ರಾಷ್ಟ್ರಧ್ವಜವನ್ನು ವಿತರಣೆ ಮಾಡುತ್ತಿದೆ. ಹರ್ ಘರ್ ತಿರಂಗಾ ಕಾರ್ಯಕ್ರಮವು ಆಗಸ್ಟ್ 13ಕ್ಕೆ ಆರಂಭಗೊಂಡು 15ರ ವರೆಗೆ ನಡೆಯಲಿದೆ. ಸಾರ್ವಜನಿಕರು ಅಂಚೆ ಇಲಾಖೆಯ ವೆಬ್ಸೈಟ್ ಮೂಲಕ ತ್ರಿವರ್ಣ ಧ್ವಜವನ್ನು ಖರೀದಿ ಮಾಡಬಹುದು ಎಂದು ಟ್ವೀಟ್ನಲ್ಲಿ ಹೇಳಲಾಗಿದೆ.
ಖರೀದಿ ಮಾಡುವುದು ಹೇಗೆ?
ಹಂತ 1: ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ನೋಂದಾಯಿಸಿ
ಹಂತ 2: ಸರಿಯಾದ ಮಾಹಿತಿ ನೀಡಿ ಲಾಗಿನ್ ಮಾಡಿ
ಹಂತ 3: ‘ಉತ್ಪನ್ನಗಳು’ ಅಡಿಯಲ್ಲಿ ‘ರಾಷ್ಟ್ರಧ್ವಜ’ ಕ್ಲಿಕ್ ಮಾಡಿ ಮತ್ತು ಕಾರ್ಟ್ ಗೆ ಸೇರಿಸಿ
ಹಂತ 4: ‘ಈಗ ಖರೀದಿಸಿ’ ಕ್ಲಿಕ್ ಮಾಡಿ; ಮೊಬೈಲ್ ಸಂಖ್ಯೆಯನ್ನು ಮತ್ತೆ ನಮೂದಿಸಿ; ಮತ್ತು OTP ಪರಿಶೀಲಿಸಿ
ಹಂತ 5: ‘ಪಾವತಿಗೆ ಮುಂದುವರಿಯಿರಿ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 6: ಸೂಕ್ತ ಪಾವತಿ ವಿಧಾನವನ್ನು ಬಳಸಿಕೊಂಡು 25 ರೂ.ಗಳನ್ನು ಪಾವತಿಸಿ.
ತ್ರಿವರ್ಣ ಧ್ವಜದ ಬೆಲೆ ಎಷ್ಟು?
ನೀವು ಹತ್ತಿರದ ಅಂಚೆ ಕಚೇರಿಯಿಂದ ಅಥವಾ ಆನ್ಲೈನ್ನಲ್ಲಿ 25 ರೂ.ಗೆ ರಾಷ್ಟ್ರಧ್ವಜವನ್ನು ಖರೀದಿಸಬಹುದು. ಆಗಸ್ಟ್ 2, 2023ರ ಪಿಐಬಿ ಪತ್ರಿಕಾ ಪ್ರಕಟಣೆಯ ಪ್ರಕಾರ, ಈ ಅಭಿಯಾನದಲ್ಲಿ, ಅಂಚೆ ಇಲಾಖೆ ಸಾರ್ವಜನಿಕರಿಗೆ ಗುಣಮಟ್ಟದ ರಾಷ್ಟ್ರಧ್ವಜಗಳನ್ನು ಮಾರಾಟ ಮತ್ತು ವಿತರಿಸುವ ಏಜೆನ್ಸಿ. ಪ್ರತಿ ಧ್ವಜಕ್ಕೆ 25 ರೂಪಾಯಿ ನಿಗದಿ ಮಾಡಲಾಗಿದೆ.
ಇದನ್ನೂ ಓದಿ : ಹರ್ ಘರ್ ತಿರಂಗಾ ಅಭಿಯಾನದ ಯಶಸ್ಸಿಗೆ ಸಹಕರಿಸಿ; ಸಚಿವ ಪ್ರಭು ಚವ್ಹಾಣ್
ಖರೀದಿದಾರು ಎಷ್ಟು ಧ್ವಜಗಳು ಬೇಕು ಎಂಬುದನ್ನು ಹಾಗೂ ವಿತರಣಾ ವಿಳಾಸವನ್ನು ಸ್ಪಷ್ಟವಾಗಿ ನೀಡಬೇಕು. ಗರಿಷ್ಠ 5 ಧ್ವಜಗಳನ್ನು ಮಾತ್ರ ಖರೀದಿಸಬಹುದು ಎಂಬುದನ್ನು ನೆನಪಿಡ. ಆನ್ ಲೈನ್ ಬುಕಿಂಗ್ಗೆ ಫೋನ್ ಸಂಖ್ಯೆಯೂ ಅಗತ್ಯ. ಆರ್ಡರ್ ಮಾಡಿದ ನಂತರ ಅದನ್ನು ರದ್ದುಗೊಳಿಸಲು ಸಾಧ್ಯವಿದೆ. ರಾಷ್ಟ್ರ ಧ್ವಜ ವಿತರಣೆಗೆ ಡೆಲಿವರಿ ಚಾರ್ಜ್ ಇರುವುದಿಲ್ಲ.