Site icon Vistara News

ಪಶ್ಚಿಮ ಬಂಗಾಳ ಗ್ರಾಮೀಣ ಪಂಚಾಯ್ತಿ ಎಲೆಕ್ಷನ್‌ನಲ್ಲಿ ಭರ್ಜರಿ ಗೆಲುವಿನತ್ತ ತೃಣಮೂಲ ಕಾಂಗ್ರೆಸ್!

Trinamool Congress party flag

ಕೋಲ್ಕೊತಾ, ಪಶ್ಚಿಮ ಬಂಗಾಳ: ಭಾರೀ ಹಿಂಸಾಚಾರಕ್ಕೆ ಕಾರಣವಾಗಿದ್ದ ಪಶ್ಚಿಮ ಬಂಗಾಳ ಪಂಚಾಯ್ತಿ (West Bengal rural polls)ಚುನಾವಣೆಗಳ ಫಲಿತಾಂಶ ಪ್ರಕಟವಾಗುತ್ತಿದ್ದು(West Bengal rural polls Result), ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ (Trinamool Congress) ಬಹುತೇಕ ಭರ್ಜರಿಯ ಸಾಧಿಸುತ್ತಿದೆ. ತನ್ನ ಸಮೀಪ ಪ್ರತಿಸ್ಪರ್ಧಿ ಪಕ್ಷವಾದ ಬಿಜೆಪಿಗಿಂತಲೂ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಳ್ಳುತ್ತಿದೆ. ಈ ಚುನಾವಣೆ ಗೆಲುವು ಮುಂಬರುವ ಲೋಕಸಭೆ ಚುನಾವಣೆಗೆ ಟಿಎಂಸಿಗೆ ಹೆಚ್ಚಿನ ಬೆಂಬಲ ನೀಡುವ ಸಾಧ್ಯತೆಗಳಿವೆ. ಈವರೆಗೆ ಪ್ರಕಟವಾಗಿರುವ ಫಲಿತಾಂಶಗಳ ಪ್ರಕಾರ, ತೃಣಮೂಲ ಕಾಂಗ್ರೆಸ್ ಪಕ್ಷವು 23,198 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ.

ಪ್ರತಿಪಕ್ಷಗಳಾದ ಬಿಜೆಪಿ(BJP), ಎಡಪಕ್ಷಗಳು (Left Parties) ಮತ್ತು ಕಾಂಗ್ರೆಸ್ (Congress Party) ಪಕ್ಷಗಳೂ ಹಲವು ಕಡೆ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸಖತ್ ಫೈಟ್ ನೀಡಿದೆ. ಈಗ ದೊರೆತಿರುವ ಮಾಹಿತಿಗಳ ಪ್ರಕಾರ, ಪ್ರಮುಖ ಪ್ರತಿಪಕ್ಷವಾಗಿರುವ ಬಿಜೆಪಿ ಸದ್ಯ 5,756, ಸಿಪಿಎಂ 2,048 ಮತ್ತು ಕಾಂಗ್ರೆಸ್ ಪಕ್ಷವು 1,439 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಈಗಿನ ಟ್ರೆಂಡ್ ನೋಡಿದರೆ, ತೃಣಮೂಲ ಕಾಂಗ್ರೆಸ್ ಪಕ್ಷವು ಭರ್ಜರಿಯ ಜಯ ಸಾಧಿಸುವುದು ಪಕ್ಕಾ ಆಗಿದೆ.

ಪಶ್ಚಿಮ ಬಂಗಾಳದ ಒಟ್ಟು 74,000 ಪಂಚಾಯ್ತಿ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ತು. ಮತದಾನ ಏಣಿಕೆಯು ಮಂಗಳವಾರ ಬೆಳಗ್ಗೆ ಆರಂಭವಾಗಿತ್ತು. ಈ ಪೈಕಿ 63,229 ಸೀಟುಗಳು, 9,730 ಪಂಚಾಯ್ತಿ ಸಮಿತಿ ಹಾಗೂ 928 ಜಿಲ್ಲಾ ಪರಿಷತ್ ಕ್ಷೇತ್ರಗಳಿವೆ. ಈ ಎಲ್ಲ ಸ್ಥಳೀಯ ಪಂಚಾಯ್ತಿ ಕ್ಷೇತ್ರಗಳಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು ಭರ್ಜರಿಯ ಜಯವನ್ನಾ ದಾಖಲಿಸುವತ್ತ ಮುನ್ನಡೆದಿದೆ.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಪಶ್ಚಿಮ ಬಂಗಾಳದ ಚುನಾವಣಾ ಹಿಂಸೆ ಆತಂಕಕಾರಿ

ಇಂದೂ ಅಲ್ಲಲ್ಲಿ ಗಲಾಟೆ

ಪಶ್ಚಿಮ ಬಂಗಾಳ ಪಂಚಾಯಿತಿ ಚುನಾವಣೆ ಮತ ಎಣಿಕೆ ದಿನವಾದ ಇಂದೂ ಕೂಡ ಹಲವು ಕಡೆಗಳಲ್ಲಿ ಗಲಾಟೆ, ಗಲಭೆ ನಡೆಯುತ್ತಿದೆ. ಡೈಮೆಂಡ್ ಹಾರ್ಬರ್​​ನಲ್ಲಿರುವ ಮತ ಎಣಿಕೆ ಕೇಂದ್ರದ ಹೊರಗೆ ದೊಡ್ಡದಾದ ಗುಂಪೊಂದು ಸೇರಿ ಪ್ರತಿಭಟನೆ ನಡೆಸುತ್ತಿದೆ. ಅಲ್ಲಿ ಯಾವುದೇ ಸರ್ಕಾರಿ ವಾಹನ ಸಂಚಾರ ಮಾಡಲು ಬಿಡುತ್ತಿಲ್ಲ. ಬಂದ ವಾಹನಗಳನ್ನೆಲ್ಲ ಪ್ರತಿಭಟನಾಕಾರರು ತಡೆಯುತ್ತಿದ್ದಾರೆ. ಕಚ್ಚಾ ಬಾಂಬ್​ ಸ್ಫೋಟವಾಗಿದೆ. ಹಾಗೇ, ಕೂಚ್​ ಬೆಹಾರ್​​ನಲ್ಲಿ ಟಿಎಂಸಿ ಅಭ್ಯರ್ಥಿ ರಿಕು ರಾಯ್​ ರಾಜ್​ಭರ್ ಅವರು ಮತಪತ್ರಗಳನ್ನು ಹರಿದಿದ್ದಾರೆ, ಅದರ ಮೇಲೆಲ್ಲ ಮಸಿ ಚೆಲ್ಲಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೂಚ್​ ಬೆಹಾರ್​​ನಲ್ಲಿ ಕೇವಲ ಎರಡು ಪಂಚಾಯಿತಿ ಕ್ಷೇತ್ರಗಳಲ್ಲಿ ಮಾತ್ರ ಟಿಎಂಸಿ ಮುನ್ನಡೆ ಸಾಧಿಸಿದ್ದಕ್ಕೆ ಅವರು ಹೀಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಇಲ್ಲಿ 98 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಸದ್ಯ ರಿಕು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version