Site icon Vistara News

Tripura Election Result: ತ್ರಿಪುರಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮಾಣಿಕ್ ಸಾಹಾ

Tripura Election Result, Manik Saha Takes Oath As Tripura Chief Minister

ಅಗರ್ತಲಾ, ತ್ರಿಪುರಾ: ಸತತ ಎರಡನೇ ಬಾರಿಗೆ ತ್ರಿಪುರಾ ಮುಖ್ಯಂತ್ರಿಯಾಗಿ ಬಿಜೆಪಿಯ ಮಾಣಿಕ್ ಸಾಹಾ (Manik Saha) ಅವರು ಬುಧವಾರ ಪ್ರಮಾಣವಚನ ಸ್ವೀಕರಿಸಿದರು. ಫೆಬ್ರವರಿ 16ರಂದು ನಡೆದ ಚುನಾವಣೆಯಲ್ಲಿ ಬಿಜೆಪಿಯು ಗೆಲುವು ಸಾಧಿಸಿತ್ತು. ಸಿಎಂ ಮಾಣಿಕ್ ಸಾಹಾ ಅವರ ಜತೆಗೆ 8 ಶಾಸಕರು ಸಚಿವರಾಗಿಯೂ ಇದೇ ವೇಳೆ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಉಪಸ್ಥಿತರಿದ್ದರು(Tripura Election Result).

ಅಸ್ಸಾಮ್‌ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಅವರು ಜತೆಗೆ ಅರುಣಾಚಲ ಪ್ರದೇಶ ಸಿಎ ಪ್ರೇಮ ಖಂಡು, ಮಣಿಪುರ ಸಿಎಂ ಎನ್ ಬಿರೇನ್ ಸಿಂಗ್ ಮತ್ತು ಸಿಕ್ಕಿಮ್ ಸಿಎಂ ಪಿ ಎಸ್ ತಮಂಗ್ ಅವರು ಈ ವೇಳೆ ಹಾಜರಿದ್ದರು. ತ್ರಿಪುರಾ ಮಾಜಿ ಸಿಎಂ ಬಿಪ್ಲಬ್ ದೇಬ್ ಅವರೂ ಈ ವೇಳೆ ಕಾಣಿಸಿಕೊಂಡರು.

ಕೇವಲ ಒಂದು ಸ್ಥಾನ ಗೆದ್ದ ಬಿಜೆಪಿಯ ಮೈತ್ರಿ ಪಕ್ಷವಾಗಿರುವ ಐಪಿಎಫ್‌ಟಿಗೂ ಒಂದು ಸಚಿವ ಸ್ಥಾನ ನೀಡಲಾಗಿದೆ. ಶುಕ್ಲ ಚರಣ್ ನೋಟಿಯಾ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದೇ ವೇಳೆ, ಮೂರು ಸಚಿವ ಸ್ಥಾನಗಳನ್ನು ಖಾಲಿ ಇಡಲಾಗಿದೆ. 13 ಸ್ಥಾನಗಳನ್ನು ಗೆದ್ದಿರುವ ತಿಪ್ರಾ ಮೋಥಾ ಕೂಡ ಸರ್ಕಾರ ಪಾಲುದಾರವಾಗುವ ಸಾಧ್ಯತೆ ಇರುವುದು 3 ಸಚಿವ ಸ್ಥಾನಗಳನ್ನು ಖಾಲಿ ಇಡಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Tripura Election Result: ಅಧಿಕಾರ ಉಳಿಸಿಕೊಂಡ ಬಿಜೆಪಿ, ಕೈಗೂಡದ ‘ಕಿಂಗ್‌’ಮೇಕರ್ ಆಸೆ, ಲೆಫ್ಟ್-ಕೈಗೆ ಮತ್ತೆ ನಿರಾಸೆ

ಇದೇ ವೇಳೆ, ಚುನಾವಣೋತ್ತರ ಹಿಂಸಾಚಾರವನ್ನು ಖಂಡಿಸಿ ಸಿಪಿಎಂ ಮತ್ತು ಕಾಂಗ್ರೆಸ್ ಪಕ್ಷಗಳರೆಡೂ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಬಗಹರಿಸಿವೆ.

Exit mobile version