Site icon Vistara News

Election Commission | ಫೆಬ್ರವರಿ 16 ತ್ರಿಪುರಾ, ಫೆ.27ಕ್ಕೆ ನಾಗಾಲ್ಯಾಂಡ್, ಮೇಘಾಲಯ ಎಲೆಕ್ಷನ್, ಮಾರ್ಚ್ 2ರಂದು ರಿಸಲ್ಟ್

Election Commission

ನವದೆಹಲಿ: ಈಶಾನ್ಯ ಭಾರತದ ತ್ರಿಪುರಾ ವಿಧಾನಸಭೆಗೆ ಫೆಬ್ರವರಿ 16 ಮತ್ತು ನಾಗಾಲ್ಯಾಂಡ್, ಮೇಘಾಲಯ ರಾಜ್ಯಗಳ ವಿಧಾನಸಭೆಗೆ ಫೆಬ್ರವರಿ 27ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗವು (Election Commission) ತಿಳಿಸಿದೆ. ಮಾರ್ಚ್ 2ರಂದು ಮತ ಏಣಿಕೆ ನಡೆಯಲಿದೆ. ಬುಧವಾರ ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಈ ಮಾಹಿತಿಯನ್ನು ನೀಡಿದರು. ಜನವರಿ 30ಕ್ಕೆ ಚುನಾವಣಾ ಅಧಿಸೂಚನೆ ಹೊರ ಬೀಳಲಿದೆ.

ಮೂರೂ ರಾಜ್ಯದಲ್ಲಿ 62.8 ಲಕ್ಷ ಮತದಾರರು ಇದ್ದಾರೆ. 2.28 ಲಕ್ಷ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಮೂರೂ ರಾಜ್ಯಗಳು ಸೇರಿ 9120 ಬೂತ್‌ಗಳಿವೆ. ಶೇ.82 ಗ್ರಾಮೀಣ ಪ್ರದೇಶದಲ್ಲಿವೆ. 376 ಮಹಿಳಾ ಬೂತ್‌ಗಳಿವೆ. ಎಲ್ಲವೂ ಮಹಿಳೆಯರೇ ನಿರ್ವಹಣೆ ಮಾಡುತ್ತಾರೆ. ಈ ಮೂರು ರಾಜ್ಯಗಳು ತಲಾ 60 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿವೆ.

ನಾಗಾಲ್ಯಾಂಡ್ ವಿಧಾನಸಭೆ ಅವಧಿಯ ಮಾರ್ಚ್ 12ಕ್ಕೆ ಮುಕ್ತಾಯವಾಗಲಿದೆ, ಇದೇ ವೇಳೆ, ಮೇಘಾಲಯ ಮತ್ತು ತ್ರಿಪುರಾ ವಿಧಾನಸಭೆ ಅವಧಿಯು ಕ್ರಮವಾಗಿ ಮಾರ್ಚ್ 15 ಮತ್ತು ಮಾರ್ಚ್ 22ಕ್ಕೆ ಕೊನೆಗೊಳ್ಳಲಿದೆ ಎಂದು ಕೇಂದ್ರ ಚುನಾವಣಾ ಆಯೋಗವು ತಿಳಿಸಿದೆ.

ಪ್ರಸಕ್ತ ಸಾಲಿನಲ್ಲಿ ಒಟ್ಟು 9 ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ನಾಗಾಲ್ಯಾಂಡ್, ಮೇಘಾಲಯ, ತ್ರಿಪುರಾ ಮಾತ್ರವಲ್ಲದೇ, ಕರ್ನಾಟಕ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಿಜೋರಾಮ್, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ.

ಇದನ್ನೂ ಓದಿ | BJP Executive Meeting | ಲೋಕಸಭೆ ಎಲೆಕ್ಷನ್‌ಗೆ 400 ದಿನಗಳಷ್ಟೇ ಉಳಿದಿರೋದು, ಮತದಾರರನ್ನು ತಲುಪಿ ಎಂದ ಪ್ರಧಾನಿ ಮೋದಿ

Exit mobile version