Site icon Vistara News

ಸಿಲಿಂಡರ್‌ ಮೇಲೆ ಮೋದಿಜಿ Rs 1,105, ಕೇಂದ್ರ ಸಚಿವೆ ತಗಾದೆಗೆ ಟಿಆರ್‌ಎಸ್‌ ಕೊಟ್ಟ ಟಾಂಗ್‌ ಹೇಗಿದೆ ನೋಡಿ

Modi TRS

ಹೈದರಾಬಾದ್:‌ ತೆಲಂಗಾಣದ ರೇಷನ್‌ ಅಂಗಡಿಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊ ಏಕಿಲ್ಲ ಎಂದು ಅಧಿಕಾರಿಗಳ ಜತೆ ವಾಗ್ವಾದ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರಿಗೆ ತೆಲಂಗಾಣ ರಾಷ್ಟ್ರೀಯ ಸಮಿತಿ (TRS)ಯು ಟಾಂಗ್‌ ನೀಡಿದೆ. ಸಿಲಿಂಡರ್‌ಗಳ ಮೇಲೆ ನರೇಂದ್ರ ಮೋದಿ ಅವರ ಫೋಟೊ ಅಂಟಿಸಿ, “ಮೋದಿಜಿ Rs 1,105” ಎಂದು ಬರೆಸುವ ಮೂಲಕ ತಿರುಗೇಟು ನೀಡಿದೆ.

ತೆಲಂಗಾಣಕ್ಕೆ ಮೂರು ದಿನ ಪ್ರವಾಸ ಕೈಗೊಂಡಿರುವ ನಿರ್ಮಲಾ ಸೀತಾರಾಮನ್‌ ಅವರು ಕಾಮಾರೆಡ್ಡಿ ಜಿಲ್ಲೆಯ ಬಿಕ್ನೂರ್‌ನಲ್ಲಿರುವ ನ್ಯಾಯಬೆಲೆ ಅಂಗಡಿಗೆ ತೆರಳಿದ್ದರು. ಆದರೆ, ರೇಷನ್‌ ಅಂಗಡಿಯಲ್ಲಿ ಮೋದಿ ಅವರ ಫೋಟೊ ಏಕಿಲ್ಲ ಎಂದು ಅಲ್ಲಿಯೇ ಇದ್ದ ಜಿಲ್ಲಾಧಿಕಾರಿಗೆ ಸಚಿವೆ ಪ್ರಶ್ನಿಸಿದ್ದರು.

“ಒಂದು ಕೆ.ಜಿ ಅಕ್ಕಿಗೆ ೩೫ ರೂ. ಇದೆ. ಜನರಿಗೆ ಒಂದು ರೂ.ಗೆ ಒಂದು ಕೆ.ಜಿ ಅಕ್ಕಿ ನೀಡಲಾಗುತ್ತಿದೆ. ಇದರಲ್ಲಿ, ಕೆ.ಜಿಗೆ ಕೇಂದ್ರ ಸರಕಾರ ೨೯ ರೂ. ನೀಡುತ್ತದೆ. ಹೀಗಿದ್ದರೂ ನ್ಯಾಯಬೆಲೆ ಅಂಗಡಿಯಲ್ಲಿ ಮೋದಿ ಫೋಟೊ ಏಕೆ ಹಾಕಿಲ್ಲ” ಎಂದು ತರಾಟೆಗೆ ತೆಗೆದುಕೊಂಡಿದ್ದರು. ಸಚಿವೆ ವರ್ತನೆಗೆ ಜಾಲತಾಣದಲ್ಲಿ ಆಕ್ರೋಶವೂ ವ್ಯಕ್ತವಾಗಿತ್ತು.

ಸಚಿವೆಯ ವರ್ತನೆಗೆ ಈಗ ತೆಲಂಗಾಣ ರಾಷ್ಟ್ರೀಯ ಸಮಿತಿಯು ತಿರುಗೇಟು ನೀಡಿದೆ. ಸಿಲಿಂಡರ್‌ಗಳ ಮೇಲೆ ಮೋದಿ ಫೋಟೊ ಅಂಟಿಸಿ, ಅದರ ಬೆಲೆ ಮುದ್ರಿಸಿ ಸಾಗಿಸುತ್ತಿರುವ ವಿಡಿಯೊವನ್ನು ಟಿಆರ್‌ಎಸ್‌ ಮುಖಂಡರು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಅಡುಗೆ ಅನಿಲದ ಬೆಲೆ ಏರಿಕೆಯನ್ನು ವ್ಯಂಗ್ಯ ಮಾಡಿ ತಿರುಗೇಟು ನೀಡಿದೆ.

ಇದನ್ನೂ ಓದಿ | ರೇಷನ್​ ಅಂಗಡಿಯಲ್ಲಿ ಪ್ರಧಾನಿ ಮೋದಿ ಫೋಟೋ ಯಾಕಿಲ್ಲ? ಜಿಲ್ಲಾಧಿಕಾರಿಗೆ ಬೈದು, ಟ್ರೋಲ್​ ಆದ ನಿರ್ಮಲಾ ಸೀತಾರಾಮನ್​​

Exit mobile version