Site icon Vistara News

Video: ಅರ್ಪಿತಾ ಮುಖರ್ಜಿ ಮನೆಯಲ್ಲಿ ಇ.ಡಿಗೆ ಸಿಕ್ಕ ಹಣ ಸಾಗಿಸಲು ಬಂತು ಭಾರಿ ಗಾತ್ರದ ಟ್ರಕ್‌!

Arpita mukharjee

ಕೋಲ್ಕತ್ತ: ಪಶ್ಚಿಮ ಬಂಗಾಳದ ಶಾಲಾ ಸೇವಾ ಆಯೋಗದ ನೇಮಕಾತಿಯಲ್ಲಿ ನಡೆದ ಹಗರಣಕ್ಕೆ ಸಂಬಂಧಪಟ್ಟಂತೆ ನಟಿ-ರೂಪದರ್ಶಿ ಅರ್ಪಿತಾ ಮುಖರ್ಜಿ ಅವರ ಮನೆಯನ್ನು ಜಾರಿ ನಿರ್ದೇಶನಾಲಯ ಶುಕ್ರವಾರ ರೇಡ್‌ ಮಾಡಿತ್ತು. ಅಲ್ಲಿಂದ 21 ಕೋಟಿ ರೂಪಾಯಿಯನ್ನು ಮತ್ತು 20 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದೆ. ಇದೇ ಕೇಸ್‌ನಲ್ಲಿ ಈಗ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿಯವನ್ನೂ ಇ ಡಿ ಬಂಧಿಸಿದೆ.

ತುಂಬಿಕೊಂಡು ಹೋಗಲು ಬಂತು ಟ್ರಕ್‌
ದಕ್ಷಿಣ ಕೋಲ್ಕತ್ತದ ಒಂದು ಐಷಾರಾಮಿ ಏರಿಯಾದಲ್ಲಿ ಅರ್ಪಿತಾ ಮುಖರ್ಜಿ ಮನೆಯಿದೆ. ಅಲ್ಲಿ ಶುಕ್ರವಾರದಿಂದ ಇ ಡಿ ಅಧಿಕಾರಿಗಳು ಶೋಧಿಸಿದ್ದಾರೆ. ಅವರು ವಶಪಡಿಸಿಕೊಂಡ ಹಣವನ್ನು ಎಣಿಕೆ ಮಾಡಲು ಯಂತ್ರ ತಂದಿದ್ದರು. ಆ ಹಣ ತುಂಬಿದ ಬಾಕ್ಸ್‌ನ್ನು ಕೊಂಡೊಯ್ಯಲು ದೊಡ್ಡ ಟ್ರಕ್‌ವೊಂದು ಅವರ ಮನೆಯುದುರು ಬಂದು ನಿಂತಿತ್ತು. ಈ ಟ್ರಕ್‌ ಆರ್‌ಬಿಐ (ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ)ಗೆ ಸೇರಿದ್ದಾಗಿದೆ.

ಪಾರ್ಥ ಚಟರ್ಜಿ ಅವರು ಸದ್ಯ ಟಿಎಂಸಿಯಲ್ಲಿ ಪ್ರಧಾನ ಕಾರ್ಯದರ್ಶಿಯೂ ಹೌದು. ಅವರು ಶಿಕ್ಷಣ ಸಚಿವರಿದ್ದಾಗಲೇ, ಶಿಕ್ಷಕರ ನೇಮಕಾತಿಯಲ್ಲಿ ಹಗರಣ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಡಿ ತನಿಖೆ ಚುರುಕುಗೊಳಿಸಿದೆ. ಪಾರ್ಥ ಚಟರ್ಜಿಯವರಿಗೆ ಅರ್ಪಿತಾ ಮುಖರ್ಜಿ ಆಪ್ತೆಯಾಗಿದ್ದರಿಂದ ಆಕೆಗೆ ಸಂಬಂಧಪಟ್ಟ ಸ್ಥಳಗಳಲ್ಲಿಯೂ ಇಡಿ ರೇಡ್‌ ಮಾಡಿತ್ತು. ಬರಿ ಇವರಷ್ಟೇ ಅಲ್ಲ, ಸಚಿವ ಪರೇಶ್‌ ಅಧಿಕಾರಿ, ಇನ್ನಿತರ ಹಿರಿಯ ಅಧಿಕಾರಿಗಳು, ಮುಖಂಡರಿಗೆ ಸೇರಿದ ಸ್ಥಳದ ಮೇಲೆ ಕೂಡ ದಾಳಿ ನಡೆದಿದೆ.

ಇದನ್ನೂ ಓದಿ: Bengal SSC Scam | ಆಪ್ತೆ ಮನೆಯಲ್ಲಿ 20 ಕೋಟಿ ರೂ. ಪತ್ತೆ; ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಅರೆಸ್ಟ್‌

Exit mobile version