Site icon Vistara News

Turbulence: ಟರ್ಬುಲೆನ್ಸ್‌ಗೆ ತುತ್ತಾದ ವಿಮಾನ; ಲಗೇಜ್‌ ಕಂಪಾರ್ಟ್‌ಮೆಂಟ್‌ನಲ್ಲಿ ಸಿಲುಕಿದ ವ್ಯಕ್ತಿ-ವಿಡಿಯೋ ಇದೆ

Turbulence

ಬ್ರೆಜಿಲ್‌: ಅಪಾಯಕಾರಿ ಟರ್ಬುಲೆನ್ಸ್‌(Turbulence)ಗೆ ಸಿಲುಕಿ ಏರ್ ಯುರೋಪ್ ಬೋಯಿಂಗ್ 787-9 ಡ್ರೀಮ್ ಲೈನರ್ ವಿಮಾನವು ಬ್ರೆಜಿಲ್ ನಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಭಾರೀ ದುರಂತವೊಂದು ತಪ್ಪಿದೆ. ಪ್ರಕ್ಷುಬ್ಧತೆಯ ತೀವ್ರತೆಗೆ ಸಿಲುಕಿ ಎಷ್ಟು ಪ್ರಯಾಣಿಕರು ತಮ್ಮ ಆಸನಗಳಿಂದ ಜಿಗಿದರೆ, ಒಬ್ಬ ವ್ಯಕ್ತಿ ಮೇಲಿನ ಕಂಪಾರ್ಟ್ಮೆಂಟ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ.

ವಿಮಾನವು ಸ್ಪೇನ್ ನ ಮ್ಯಾಡ್ರಿಡ್ ನಿಂದ ಉರುಗ್ವೆಯ ರಾಜಧಾನಿ ಮಾಂಟೆವಿಡಿಯೊಗೆ ಹಾರುತ್ತಿತ್ತು ಎಂದು ಸ್ಪ್ಯಾನಿಷ್ ವಿಮಾನಯಾನ ಸಂಸ್ಥೆ ತಿಳಿಸಿದೆ. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಯುಎಕ್ಸ್ 045 ವಿಮಾನವನ್ನು ಪ್ರಕ್ಷುಬ್ಧತೆಯ ನಂತರ ಈಶಾನ್ಯ ಬ್ರೆಜಿಲ್‌ನ ನೇಟಾಲ್ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದೆ. ಘಟನೆಯಲ್ಲಿ 30 ಮಂದಿಗೆ ಗಂಭೀರ ಗಾಯಗಳಾಗಿದ್ದು, ಮೇಲಿನ ಕಂಪಾರ್ಟ್‌ಮೆಂಟ್‌ನಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಹರಸಾಹಸ ಪಟ್ಟು ರಕ್ಷಿಸಲಾಯಿತು.

ಪ್ರಕ್ಷುಬ್ಧತೆಯಿಂದ ಉಂಟಾದ ಹಾನಿ ಮತ್ತು ಅದರ ನಂತರದ ವೀಡಿಯೊಗಳನ್ನು ಪ್ರಯಾಣಿಕರು ಪೋಸ್ಟ್ ಮಾಡಿದ್ದಾರೆ, ಇದರಲ್ಲಿ ಓವರ್ಹೆಡ್ ಡಬ್ಬಿಯಿಂದ ವ್ಯಕ್ತಿ ಹೊರಬರುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.. ಮಗು ಅಳುವ ಶಬ್ದ ಕೇಳಿದಾಗ ಕೆಲವರು ಅವನನ್ನು ಕೆಳಕ್ಕೆ ಎಳೆಯಲು ಜಮಾಯಿಸುತ್ತಿರುವುದು ಕಂಡುಬಂದಿದೆ. 325 ಪ್ರಯಾಣಿಕರನ್ನು ಹೊತ್ತ ವಿಮಾನವು ಪ್ರಕ್ಷುಬ್ಧತೆಯ ಪರಿಣಾಮದಿಂದಾಗಿ ಮೇಲ್ಛಾವಣಿಯ ಫಲಕಗಳನ್ನು ಹರಿದುಹಾಕಿತ್ತು, ಮುರಿದ ಆಸನ ಮತ್ತು ಮೇಲೆ ನೇತಾಡುತ್ತಿದ್ದ ಆಮ್ಲಜನಕದ ಮಾಸ್ಕ್‌ಗಳು ವಿಡಿಯೋದಲ್ಲಿ ಗೋಚರಿಸುತ್ತಿವೆ.

ಕೆಲವು ದಿನಗಳ ಹಿಂದೆ ಇಂತಹದ್ದೇ ಒಂದು ಘಟನೆ ಸಿಂಗಾಪುರ ಏರ್‌ಲೈನ್ಸ್‌ನಲ್ಲೂ ಕಂಡುಬಂದಿತ್ತು. ವಿಮಾನದಲ್ಲಿ ಪ್ರಕ್ಷುಬ್ಧತೆ ಉಂಟಾಗಿದ್ದು, ಒಬ್ಬರು ಮೃತಪಟ್ಟರೆ 30 ಜನ ಗಾಯಗೊಂಡಿದ್ದಾರೆ. ಸಿಂಗಾಪುರ ಏರ್‌ಲೈನ್ಸ್‌ ವಿಮಾನವು (Singapore Airlines) ಹೀಥ್ರೂ ಏರ್‌ಪೋರ್ಟ್‌ನಿಂದ ಸಿಂಗಾಪುರಕ್ಕೆ ಹಾರಾಟ ಆರಂಭಿಸಿತ್ತು. ಆದರೆ, ಹಾರಾಟ ನಡೆಸಿದ ಕೆಲ ಹೊತ್ತಿನಲ್ಲಿಯೇ ಪ್ರಕ್ಷುಬ್ಧತೆ ಉಂಟಾದ ಕಾರಣ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ತೊಂದರೆಯಾಗಿದೆ. ಬ್ಯಾಂಕಾಕ್‌ನ ಸುವರ್ಣಭೂಮಿ ಏರ್‌ಪೋರ್ಟ್‌ನಲ್ಲಿ ತುರ್ತು ಲ್ಯಾಂಡ್‌ ಮಾಡಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಒಬ್ಬರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ಸಿಂಗಾಪುರ ಏರ್‌ಲೈನ್ಸ್‌ನ ಎಸ್‌ಕ್ಯೂ 321 ವಿಮಾನದಲ್ಲಿದ್ದ 30 ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬುದಾಗಿ ಮೂಲಗಳು ತಿಳಿಸಿವೆ. ಆದರೆ, ಗಾಯಾಳುಗಳ ಸಂಖ್ಯೆ ಕುರಿತು ವಿಮಾನಯಾನ ಸಂಸ್ಥೆಯು ಯಾವುದೇ ಮಾಹಿತಿ ನೀಡಿಲ್ಲ. ಒಬ್ಬರು ಮೃತಪಟ್ಟಿರುವುದನ್ನು ಕೂಡ ವಿಮಾನಯಾನ ಸಂಸ್ಥೆಯು ದೃಢಪಡಿಸಿದೆ.

ವಿಮಾನವನ್ನು ಏಕಾಏಕಿ 6 ಸಾವಿರ ಅಡಿ ಕೆಳಗಿಳಿಸಿದ ಪರಿಣಾಮವಾಗಿ ವ್ಯಕ್ತಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ವಿಮಾನವು ಸುಮಾರು 37 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು. ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲಿ ದಿಢೀರನೆ 31 ಸಾವಿರ ಅಡಿಗೆ ಇಳಿಸಿದ ಕಾರಣ ಪ್ರಯಾಣಿಕರಿಗೆ ಭಾರಿ ಪ್ರಮಾಣದಲ್ಲಿ ಗಾಯಗಳಾಗಲು, ಒಬ್ಬ ವ್ಯಕ್ತಿ ಮೃತಪಡಲು ಕಾರಣವಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Shoaib Akhtar: ಭಗವದ್ಗೀತೆಯ ಸಂದೇಶ ಹಂಚಿಕೊಂಡ ಪಾಕ್​ ಆಟಗಾರ ಶೋಯೆಬ್ ಅಖ್ತರ್

Exit mobile version