ಚೆನ್ನೈ: ತಮಿಳುನಾಡು ಬಿಜೆಪಿಯಲ್ಲಿ ಬಂಡಾಯದ ಹೊಗೆ ದಟ್ಟವಾಗಿ ವ್ಯಾಪಿಸುತ್ತಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ವಿರುದ್ಧ ಐಟಿ ಸೆಲ್ ಮುಖ್ಯಸ್ಥರಾಗಿದ್ದ ಸಿ.ಟಿ.ಆರ್. ನಿರ್ಮಲ್ ಕುಮಾರ್ (CTR Nirmal Kumar) ಅವರು ಬಂಡಾಯವೆದ್ದಿದ್ದು, ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ರಾಜೀನಾಮೆ ನೀಡಿದ ದಿನವೇ ಎಐಎಡಿಎಂಕೆ ಸೇರ್ಪಡೆಯಾಗಿದ್ದಾರೆ.
ಪಕ್ಷಕ್ಕೆ ರಾಜೀನಾಮೆ ನೀಡಿರುವ ಕುರಿತು ನಿರ್ಮಲ್ ಕುಮಾರ್ ಅವರು ಟ್ವೀಟ್ ಮಾಡಿದ್ದು, ರಾಜೀನಾಮೆ ಪತ್ರವನ್ನೂ ಪೋಸ್ಟ್ ಮಾಡಿದ್ದಾರೆ. “ಕಳೆದ ಒಂದೂವರೆ ವರ್ಷದಿಂದ ಹತ್ತಾರು ಸಮಸ್ಯೆ, ಹಿನ್ನಡೆಗಳಿದ್ದರೂ ನಾನು ಪಕ್ಷದ ಜತೆ ಸಾಗಿದ್ದೇನೆ. ಆದರೆ, ಇಷ್ಟು ಪರಿಶ್ರಮದ ಹೊರತಾಗಿಯೂ ರಾಜ್ಯದಲ್ಲಿರುವ ಪಕ್ಷದ ನಾಯಕರು ಮನ್ನಣೆ ನೀಡುತ್ತಿಲ್ಲ” ಎಂದು ದೂರಿದ್ದಾರೆ.
ಎಐಎಡಿಎಂಕೆ ಸೇರ್ಪಡೆ
ಕೆ. ಅಣ್ಣಾಮಲೈ ವಿರುದ್ಧ ಆರೋಪಿಸಿರುವ ನಿರ್ಮಲ್ ಕುಮಾರ್, “ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಮೇಲೆಯೇ ಕೆ.ಅಣ್ಣಾಮಲೈ ಅವರು ಕಣ್ಗಾವಲು ಇರಿಸಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಬೆಲೆಯೇ ಇಲ್ಲದಂತಾಗಿದೆ” ಎಂದು ಹೇಳಿದ್ದಾರೆ. ತಮಿಳುನಾಡು ಬಿಜೆಪಿಯಲ್ಲಿ ಇತ್ತೀಚೆಗೆ ಬಂಡಾಯ ಜಾಸ್ತಿಯಾಗಿದೆ. ನಾಯಕಿ, ನಟಿ ಗಾಯತ್ರಿ ರಘುರಾಮ್, ಒಬಿಸಿ ಮೋರ್ಚಾ ರಾಜ್ಯ ನಾಯಕ ತಿರುಚ್ಚಿ ಸೂರ್ಯ ಪಕ್ಷ ತೊರೆದಿದ್ದಾರೆ.
ಇದನ್ನೂ ಓದಿ: Karnataka Election : ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿಯಾಗಿ ಧರ್ಮೇಂದ್ರ ಪ್ರಧಾನ್, ಅಣ್ಣಾಮಲೈ ಸಹ ಪ್ರಭಾರಿ