ನವದೆಹಲಿ: ಹೋಳಿ ಹಬ್ಬದ ಆಚರಣೆ ದಿಸೆಯಲ್ಲಿ ವಧು-ವರರ ವೇದಿಕೆ, ʼಭಾರತ್ ಮ್ಯಾಟ್ರಿಮೋನಿʼ (Bharat Matrimony) ಬಿಡುಗಡೆ ಮಾಡಿದ ನೂತನ ಜಾಹೀರಾತು ವಿಡಿಯೊ ಈಗ ವಿವಾದಕ್ಕೆ ಕಾರಣವಾಗಿದೆ. ಹೆಣ್ಣುಮಕ್ಕಳ ಮೇಲೆ ಹೋಳಿ ಆಚರಣೆ ಹೆಸರಿನಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂಬಂತೆ ಭಾರತ್ ಮ್ಯಾಟ್ರಿಮೋನಿ ಜಾಹೀರಾತು ಟ್ವೀಟ್ ಮಾಡಿದ್ದು, ಮ್ಯಾಟ್ರಿಮೋನಿಯನ್ನು ನಿಷೇಧಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
ಮಹಿಳೆಯೊಬ್ಬರು ಹೋಳಿ ಆಡಿ, ಮುಖದ ತುಂಬ ಮೆತ್ತಿರುವ ಬಣ್ಣವನ್ನು ಮನೆಯಲ್ಲಿ ತೊಳೆಯುತ್ತಾರೆ. ಆಗ ಅವರ ಮುಖದ ಮೇಲೆ ಹಲ್ಲೆ ನಡೆಸಿದ ಗಾಯಗಳು ಕಾಣಿಸುತ್ತವೆ. ಹೋಳಿ ಆಚರಣೆ ವೇಳೆ ಹೀಗೆಲ್ಲ ಮಹಿಳೆಯರ ಮೇಲೆ ಹಲ್ಲೆ, ದೌರ್ಜನ್ಯ ನಡೆಸಲಾಗುತ್ತದೆ ಎಂಬಂತೆ ಬಿಂಬಿಸಲಾಗಿದೆ.
ಇದನ್ನೂ ಓದಿ: ಜಾಹೀರಾತು ವಿವಾದ | ಚಿತ್ರದಲ್ಲಿ ನೆಹರು ಇದ್ದಾರೆ, ಗಾಬರಿಯಾಗಬೇಡಿ ಎಂದ ಸಿಎಂ ಬಸವರಾಜ ಬೊಮ್ಮಾಯಿ
ಇಲ್ಲಿದೆ ಜಾಹೀರಾತು ವಿಡಿಯೊ
75 ಸೆಕೆಂಡ್‌ಗಳ ವಿಡಿಯೊ ಬಿಡುಗಡೆ ಮಾಡಿರುವ ಭಾರತ್ ಮ್ಯಾಟ್ರಿಮೋನಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತ್ ಮ್ಯಾಟ್ರಿಮೋನಿ ಹಿಂದು ವಿರೋಧಿಯಾಗಿದ್ದು, ಅದನ್ನು ಬಾಯ್ಕಾಟ್ ಮಾಡಬೇಕು ಎಂದು ಟ್ವಿಟರ್ ಬಳಕೆದಾರರು ಖಂಡಿಸಿದ್ದಾರೆ. ಹಾಗೆಯೇ, ಕೂಡಲೇ ಜಾಹೀರಾತನ್ನು ಟ್ವಿಟರ್‌ನಿಂದ ಡಿಲೀಟ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.