ದಿಸ್ಪುರ: ಅಸ್ಸಾಂನಲ್ಲಿ ಉಗ್ರರ ಜಾಲವೊಂದನ್ನು ಭೇದಿಸಲಾಗಿದ್ದು, ಅಲ್‌ಕೈದಾ ಇಂಡಿಯನ್ ಸಬ್‌ಕಾಂಟಿನೆಂಟ್ (ಎಕ್ಯುಐಎಸ್) ಹಾಗೂ ಬಾಂಗ್ಲಾದೇಶ ಮೂಲದ ಅನ್ಸಾರುಲ್ಲಾ ಬಾಂಗ್ಲಾ ಟೀಮ್ (ಎಬಿಟಿ) ಉಗ್ರ ಸಂಘಟನೆಗಳ ಜತೆ ನಂಟು (Al-Qaeda Links) ಹೊಂದಿದ ಹಿನ್ನೆಲೆಯಲ್ಲಿ ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂನ ಗೋವಾಲಪಾರಾ ಜಿಲ್ಲೆಯಲ್ಲಿ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ. ಬಂಧಿತರನ್ನು ಅಬ್ದುಸ್ ಸುಭಾನ್ ಹಾಗೂ ಜಲಾಲುದ್ದೀನ್ ಶೇಖ್ ಎಂದು ಗುರುತಿಸಲಾಗಿದೆ. ಶಂಕಿತ ಉಗ್ರರಿಬ್ಬರೂ ಗೋವಾಲಪಾರಾದ ಇಮಾಮ್‌ಗಳು ಎಂದು ತಿಳಿದುಬಂದಿದೆ. ಅಲ್ಲದೆ, ಇಬ್ಬರೂ ಎಕ್ಯುಐಎಸ್ ಉಗ್ರ ಸಂಘಟನೆ ಜತೆ ಸಂಪರ್ಕವಿರುವುದನ್ನು ಹಾಗೂ ಜಿಲ್ಲೆಯಲ್ಲಿ ಅವರಿಗೆ ನೆರವು ನೀಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ.
“ಬಾಂಗ್ಲಾದೇಶದಿಂದ ಆಗಮಿಸುವ ಉಗ್ರರು ಹಾಗೂ ಜಿಹಾದಿಗಳಿಗೆ ಇಬ್ಬರೂ ಇಮಾಮ್‌ಗಳು ಆಶ್ರಯ ನೀಡುತ್ತಿರುವ ಆರೋಪವಿದೆ. ಹಾಗೆಯೇ, ಉಗ್ರ ಸಂಘಟನೆಗಳಿಗೆ ಯುವಕರ ನೇಮಕದಲ್ಲೂ ಇವರು ತೊಡಗಿದ್ದಾರೆ ಎಂಬ ಶಂಕೆ ಇದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಗೋವಾಲಪಾರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ವಿ.ರಾಕೇಶ್ ರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ | ಬಂಧಿತ ಉಗ್ರರ ಬಳಿಯಿದ್ದ ದಾಖಲೆಯಲ್ಲಿದೆ ಶಾಕಿಂಗ್ ವಿಷಯ; ಪಿಎಫ್‌ಐ ಯೋಜನೆ ಬಹಿರಂಗ !