Site icon Vistara News

Manipur Violence: ಮಣಿಪುರದಲ್ಲಿ ಮತ್ತೆ ಹಿಂಸಾಚಾರ, ಇಬ್ಬರ ಹತ್ಯೆ

two killed in fresh Manipur Violence

ನವದೆಹಲಿ: ಸತತ ಹಿಂಸಾಚಾರದಿಂದ ಬಳಲುತ್ತಿರುವ ಈಶಾನ್ಯ ರಾಜ್ಯ ಮಣಿಪುರದಲ್ಲಿ (Manipur) ಸೋಮವಾರ ಮತ್ತೆ ಹೊಸದಾಗಿ ಹಿಂಸಾಚಾರ (Manipur Violence) ನಡೆದಿದ್ದು, ಇಬ್ಬರು ಮೃತಪಟ್ಟು (Two People Dead) ಐದಕ್ಕೂ ಹೆಚ್ಚುನ ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೈತೈ ಮತ್ತು ಕುಕಿ ಸಮುದಾಯಗಳ ನಡುವಿನ ಸಂಘರ್ಷದಿಂದಾಗಿ ಕಳೆದ ವರ್ಷದಿಂದಲೂ ಮಣಿಪುರ ಹಿಂಸಾಚಾರದಲ್ಲಿ ಬೇಯುತ್ತಿದೆ.

ಇದು ಬ್ರೇಕಿಂಗ್ ಸುದ್ದಿಯಾಗಿದ್ದು… ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ

ಮಯನ್ಮಾರ್ ಬಂಡುಕೋರರು ಶಾಮೀಲು?

ಕಳೆದ ಮೇ ತಿಂಗಳಿನಿಂದ ನಡೆಯುತ್ತಿರುವ ಮಣಿಪುರ ಹಿಂಸಾಚಾರ (Manipur Violence) ಇನ್ನೂ ನಿಲ್ಲುವಂತೆ ಕಾಣುತ್ತಿಲ್ಲ. ಆಗಾಗ, ಹಿಂಸಾಚಾರ ಭುಗಿಲೇಳುತ್ತಿದೆ. ಆದರೆ, ಕುಕಿ ಮತ್ತು ಮೈತೈ ಸಮುದಾಯಗಳ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಮಯನ್ಮಾರ್ ಪಿಡಿಎಫ್ ಬಂಡುಕೋರರು (Myanmar PDF Militants) ಶಾಮೀಲಾಗಿರುವ ಸಾಧ್ಯತೆಗಳಿವೆ ಎಂದು ಮಣಿಪುರ ಭದ್ರತಾ ಸಲಹೆಗಾರ ಕುಲ್ದೀಪ್ ಸಿಂಗ್ ಅವರು ಗುರುವಾರ ಆರೋಪಿಸಿದ್ದಾರೆ(Manipur Security Adviser Kuldiep Singh).

ಮಣಿಪುರದ ಗಡಿಯಲ್ಲಿರುವ ಮೊರೆ ಪಟ್ಟಣದಲ್ಲಿ ಬುಧವಾರ ಪೊಲೀಸ್ ಕಮಾಂಡೋಗಳ ಮೇಲೆ ದಾಳಿ ನಡೆದಿತ್ತು. ಈ ವೇಳೆ ಇಬ್ಬರು ಕಮಾಂಡೋಗಳು ಮೃತಪಟ್ಟಿದ್ದಾರೆ. ಇಂಫಾಲ್‌ನಿಂದ ಸುಮಾರು 110 ಕಿ.ಮೀ ದೂರದಲ್ಲಿರುವ ಜಾಗದಲ್ಲಿ ಈ ದಾಳಿ ನಡೆದಿತ್ತು. ಮಯನ್ಮಾರ್‌ ಬಂಡುಕೋರರು ಈ ದಾಳಿಯಲ್ಲಿ ಶಾಮೀಲಾಗಿರುವ ಸಾಧ್ಯತೆಗಳಿವೆ ಎಂದು ಭದ್ರತಾ ಸಲಹೆಗಾರ ಕುಲ್ದೀಪ್ ಸಿಂಗ್ ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Manipur Violence: ಮಣಿಪುರ ಹಿಂಸಾಚಾರದಲ್ಲಿ ಮಯನ್ಮಾರ್‌ ಬಂಡುಕೋರರು ಶಾಮೀಲು!

Exit mobile version