Site icon Vistara News

Lashkar Terrorists: ಕಾಶ್ಮೀರದಲ್ಲಿ ಸೇನೆ ಭರ್ಜರಿ ಬೇಟೆ; 5 ಲಷ್ಕರ್‌ ಉಗ್ರರ ಬಂಧನ, ತಪ್ಪಿದ ಮಹಾ ದುರಂತ

Lashkar Terrorists Arrested

Two Terror Modules Busted In Jammu Kashmir; 5 Lashkar Terrorists Arrested

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆಯ ನಾಲ್ವರು ಯೋಧರು ಹುತಾತ್ಮರಾದ ಬೆನ್ನಲ್ಲೇ ಲಷ್ಕರೆ ತಯ್ಬಾ ಉಗ್ರರನ್ನು (Lashkar Terrorists) ಬಗ್ಗುಬಡಿಯುವಲ್ಲಿ ಕಣಿವೆ ಯೋಧರು ಹಾಗೂ ಪೊಲೀಸರು ಯಶಸ್ವಿಯಾಗಿದ್ದಾರೆ. ಕಣಿವೆಯಲ್ಲಿ (Jammu Kashmir) ಎರಡು ಉಗ್ರ ಜಾಲಗಳನ್ನು ಸೇನೆ ಭೇದಿಸಿದ್ದು, ಲಷ್ಕರೆ ತಯ್ಬಾದ ಐವರು ಉಗ್ರರನ್ನು ಬಂಧಿಸಲಾಗಿದೆ. ಇದರೊಂದಿಗೆ ಜಮ್ಮು ಕಾಶ್ಮೀರದಲ್ಲಿ ಭಾರಿ ದುರಂತವೊಂದು ತಪ್ಪಿದಂತಾಗಿದೆ.

ಕುಲ್ಗಾಮ್‌ ಜಿಲ್ಲೆಯಲ್ಲಿ ಕಣಿವೆ ಪೊಲೀಸರು ಎರಡು ಉಗ್ರ ಜಾಲಗಳನ್ನು ಭೇದಿಸಿದ್ದಾರೆ. ಬಂಧಿತ ಉಗ್ರರನ್ನು ಆದಿಲ್‌ ಹುಸೇನ್‌ ವಾನಿ, ಸುಹೇಲ್‌ ಅಹ್ಮದ್‌ ದರ್‌, ಐತ್ಮಾದ್‌ ಅಹ್ಮದ್‌ ಲಾವೇ, ಮೆಹ್ರಜ್‌ ಅಹ್ದದ್‌ ಲೋನ್‌ ಹಾಗೂ ಸಬ್ಜಾರ್‌ ಅಹ್ಮದ್‌ ಖಾರ್‌ ಎಂಬುದಾಗಿ ಗುರುತಿಸಲಾಗಿದೆ. ಇವರು ಲಷ್ಕರೆ ತಯ್ಬಾ ಉಗ್ರ ಸಂಘಟನೆಗೆ ಸೇರಿದ್ದಾರೆ ಎಂಬುದಾಗಿ ಸೇನೆಯ ಮೂಲಗಳು ಮಾಹಿತಿ ನೀಡಿವೆ.

ಬಂಧಿತ ಉಗ್ರರಿಂದ ಎರಡು ಪಿಸ್ತೂಲ್‌, ಮೂರು ಹ್ಯಾಂಡ್‌ ಗ್ರೆನೇಡ್‌ ಸೇರಿ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿಂತೆ ಕೈಮೋ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದೆಯೂ ಪೊಲೀಸರು ಬಂಡಿಪೋರಾದಲ್ಲಿಯೂ ಉಗ್ರರ ಜಾಲವನ್ನು ಭೇದಿಸಿ, ಇಬ್ಬರು ಉಗ್ರರನ್ನು ಬಂಧಿಸಿದ್ದರು. ಹಾಗೆಯೇ, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಂಡಿದ್ದರು.

ದಾಳಿಗೆ ಸಂಚು ರೂಪಿಸಿದ್ದ ಉಗ್ರರು

ಕುಲ್ಗಾಮ್‌ ಜಿಲ್ಲೆಯಲ್ಲಿ ಭಾರಿ ದಾಳಿ ನಡೆಸಲು ಲಷ್ಕರೆ ತಯ್ಬಾ ಉಗ್ರರು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. ಹಾಗಾಗಿ, ಇವರ ಜಾಲ ಭೇದಿಸಿ, ಬಂಧಿಸಿರುವುದರಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ ಎಂದು ಹೇಳಲಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಅನಂತನಾಗ್‌ ಜಿಲ್ಲೆಯಲ್ಲಿ ಉಗ್ರರ ಗುಂಡಿನ ದಾಳಿಗೆ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಇದಾದ ಬಳಿಕ ಒಂದು ವಾರ ಸತತವಾಗಿ ಎನ್‌ಕೌಂಟರ್‌ ನಡೆಸಿದ್ದ ಸೇನೆಯು ಒಬ್ಬ ಲಷ್ಕರೆ ಉಗ್ರನನ್ನು ಹತ್ಯೆಗೈದಿತ್ತು.

Exit mobile version