Site icon Vistara News

Terrorists Killed | ಕಾಶ್ಮೀರದಲ್ಲಿ ಯೋಧನ ಹತ್ಯೆಗೈದಿದ್ದ ಇಬ್ಬರು ಉಗ್ರರ ಎನ್‌ಕೌಂಟರ್!

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಕಳೆದ ವರ್ಷ ಭಾರತದ ಯೋಧರೊಬ್ಬರನ್ನು ಹತ್ಯೆಗೈದಿದ್ದ ಉಗ್ರರ ವಿರುದ್ಧ ಭದ್ರತಾ ಸಿಬ್ಬಂದಿಯು ಸೇಡು ತೀರಿಸಿಕೊಂಡಿದ್ದಾರೆ. ಅನಂತನಾಗ್‌ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಯ ಇಬ್ಬರನ್ನು ಯೋಧರು ಎನ್‌ಕೌಂಟರ್‌‌ (Terrorists Killed) ಮಾಡಿದ್ದಾರೆ.

ಅನಂತನಾಗ್‌ ಜಿಲ್ಲೆಯ ಪೊಶ್‌ಕೀರಿ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿ ಪಡೆದ ಯೋಧರು ಕಾರ್ಯಾಚರಣೆ ಕೈಗೊಂಡಿದ್ದಾರೆ. ಇದೇ ವೇಳೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಹತರನ್ನು ಡ್ಯಾನಿಶ್‌ ಭಟ್‌ ಹಾಗೂ ಬಶಾರತ್‌ ನಬಿ ಎಂದು ಗುರುತಿಸಲಾಗಿದೆ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷದ ಏಪ್ರಿಲ್‌ 9ರಂದು ಇದೇ ಇಬ್ಬರು ಉಗ್ರರು ದಾಳಿ ನಡೆಸಿದ್ದಾಗ ಸಲೀಂ ಎಂಬ ಯೋಧ ಹುತಾತ್ಮರಾಗಿದ್ದರು. ಇದಾದ ಬಳಿಕ ಇಬ್ಬರು ನಾಗರಿಕರ ಹತ್ಯೆಯಲ್ಲೂ ಇದೇ ಉಗ್ರರ ಕೈವಾಡವಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಳೆದ ವಾರವಷ್ಟೇ ಲಷ್ಕರೆ ತಯ್ಬಾದ ಮೂವರು ಉಗ್ರರನ್ನು ಯೋಧರು ಹೊಡೆದುರುಳಿಸಿದ್ದರು.

ಇದನ್ನೂ ಓದಿ | Terrorists Killed | ಕಾಶ್ಮೀರದಲ್ಲಿ ನಾಗರಿಕರ ಹತ್ಯೆಗೆ ಸಂಚು ರೂಪಿಸಿದ್ದ ಇಬ್ಬರು ಉಗ್ರರ ಎನ್‌ಕೌಂಟರ್!

Exit mobile version