Site icon Vistara News

Viral News: ಈಕೆಗೆ ಆಕೆಯ ಗಂಡ ಇಷ್ಟ, ಆಕೆಗೆ ಈಕೆಯ ಗಂಡನ ಮೇಲೆ ಪ್ರೀತಿ, ಕೊನೆಗೆ ಗಂಡಂದಿರೇ ಎಕ್ಸ್‌ಚೇಂಜ್‌

Marriage

Marriage

ಪಟನಾ: ಯಾವ ಹೆಂಡತಿಯೂ ತನ್ನ ಗಂಡನ ಮೇಲೆ ಇನ್ನೊಬ್ಬ ಮಹಿಳೆಯ ಕಣ್ಣು ಬೀಳಲು ಬಿಡುವುದಿಲ್ಲ. ಗಂಡನೂ ಬೇರೆ ಹೆಣ್ಣುಮಕ್ಕಳನ್ನು ಕಣ್ಣೆತ್ತಿ ನೋಡಿದರೆ ಪತ್ನಿಗೆ ಇಷ್ಟವಾಗುವುದಿಲ್ಲ. ಆದರೆ, ಬಿಹಾರದಲ್ಲಿ ಮಾತ್ರ ಇಬ್ಬರು ಮಹಿಳೆಯರು ಇಂತಹ ಮಾತಿಗೆ ವಿರುದ್ಧವಾಗಿದ್ದಾರೆ. ಹೌದು, ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರು ತಮ್ಮ ಗಂಡಂದಿರನ್ನೇ ಎಕ್ಸ್‌ಚೇಂಜ್‌ ಮಾಡಿಕೊಂಡು ಎಲ್ಲರೂ ನಿಬ್ಬೆರಗಾಗುವಂತೆ (Viral News) ಮಾಡಿದ್ದಾರೆ.

ಪಸ್ರಾಹ ಎಂಬ ಗ್ರಾಮದಲ್ಲಿ ರೂಬಿ ದೇವಿ ಎಂಬ ಹೆಸರಿನ ಇಬ್ಬರು ಮಹಿಳೆಯರಿದ್ದಾರೆ. ಇವರಲ್ಲಿ ಒಬ್ಬ ರೂಬಿ ದೇವಿಯು 2009ರಲ್ಲಿ ನೀರಜ್‌ ಕುಮಾರ್‌ ಎಂಬುವರ ಜತೆ ಮದುವೆಯಾಗಿದ್ದು, ನಾಲ್ವರು ಮಕ್ಕಳಿದ್ದಾರೆ. ಮತ್ತೊಬ್ಬ ರೂಬಿ ದೇವಿಯು ಇದೇ ಗ್ರಾಮದ ಮುಕೇಶ್‌ ಕುಮಾರ್‌ ಸಿಂಗ್‌ ಎಂಬುವರನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

ಆದರೆ, ಇತ್ತೀಚೆಗೆ ಒಬ್ಬ ರೂಬಿಯು ನಾಲ್ವರಲ್ಲಿ ಮೂವರು ಮಕ್ಕಳೊಂದಿಗೆ ಮುಕೇಶ್‌ ಜತೆ ಓಡಿಹೋಗಿದ್ದಾರೆ. ನೀರಜ್‌ ಎಂಬುವರು ಮುಕೇಶ್‌ ವಿರುದ್ಧ ಕಿಡ್ನ್ಯಾಪ್‌ ಕೇಸ್‌ ದಾಖಲಿಸಿದ್ದಾರೆ. ಇದರ ಮಧ್ಯೆಯೇ ಮುಕೇಶ್‌ ಪತ್ನಿ ರೂಬಿಯ ನಂಬರ್‌ ನೀರಜ್‌ಗೆ ಸಿಕ್ಕಿದೆ. ಇಬ್ಬರೂ ಫೋನಿನಲ್ಲಿ ಮಾತನಾಡುತ್ತ, ಕೊನೆಗೆ ಮದುವೆಯಾಗಲು ತೀರ್ಮಾನಿಸಿ, ಫೆಬ್ರವರಿ 18ರಂದು ಮದುವೆಯಾಗಿದ್ದಾರೆ. ಅಲ್ಲಿಗೆ, ಪ್ರಕರಣವೊಂದು ತಾತ್ಕಾಲಿಕವಾಗಿ ಸುಖಾಂತ್ಯವಾಗಿದೆ.

ಇದನ್ನೂ ಓದಿ: Naga Shaurya: ಗೆಳತಿಗೆ ಕಪಾಳಮೋಕ್ಷ ಮಾಡಿದ ಯುವಕನಿಗೆ ಸಖತ್‌ ಕ್ಲಾಸ್‌ ತೆಗೆದುಕೊಂಡ ನಟ ನಾಗ ಶೌರ್ಯ: ವಿಡಿಯೊ ವೈರಲ್‌!

Exit mobile version