ನವದೆಹಲಿ: ಇತ್ತೀಚೆಗೆ ಸಂಭವಿಸಿದ ಉದಯಪುರ ರೈಲ್ವೆ ಟ್ರ್ಯಾಕ್ ಸ್ಫೋಟವು (Udaipur Explosion) ಭಯೋತ್ಪಾದನಾ ಕೃತ್ಯವಾಗಿದೆ. ಈ ಸಂಬಂಧ ಎಫ್ಐಆರ್ ದಾಖಲಾಗಿದೆ. ಜನರಲ್ಲಿ ಭಯವನ್ನು ಉಂಟು ಮಾಡುವುದಕ್ಕಾಗಿಯೇ ಉದಯಪುರ ಜಿಲ್ಲೆಯ ಓದಾ ಹಳ್ಳಿಯ ಬಳಿಯಲ್ಲಿ ರೈಲು ಹಳಿಗಳ ಸ್ಫೋಟದ ಸಂಚು ರೂಪಿಸಲಾಗಿತ್ತು ಎಂದು ತನಿಖಾ ಸಂಸ್ಥೆಗಳು ಹೇಳಿವೆ.
ಶನಿವಾರ ಸಂಜೆ ಸುಮಾರು 7.15ಕ್ಕೆ ಓದಾ ಹಳ್ಳಿಗರು ಭಾರೀ ಸ್ಫೋಟದ ಸದ್ದು ಕೇಳಿ, ಸ್ಥಳಕ್ಕೆ ಬಂದು ನೋಡಿದಾಗ ರೈಲ್ವೆ ಟ್ರ್ಯಾಕ್ ಬೆಂಡ್ ಆಗಿದ್ದನ್ನು ಕಂಡಿದ್ದಾರೆ. ಸ್ಥಳದಲ್ಲಿ ಸ್ಫೋಟಕ ಮತ್ತು ಸ್ಟೀಲ್ ಅವಶೇಷಗಳಿರುವುದನ್ನು ಶೋಧಿಸಿದ್ದಾರೆ. ಸ್ಫೋಟ ಸಂಭವಿಸಿದ ಸಮಯದಲ್ಲಿ ನಿತ್ಯ ಅಹ್ಮದಾಬಾದ್-ಉದಯಪುರ್ ಅಸರ್ವಾ ಟ್ರೈನ್ ಸಂಚರಿಸುತ್ತದೆ. ಒಂದೊಮ್ಮೆ, ಈ ವಿಷಯ ಗೊತ್ತಾಗದೇ ಹೋಗಿದ್ದರೆ ಬಹುದೊಡ್ಡ ಅನಾಹುತ ಸಂಭವಿಸುವ ಎಲ್ಲ ಸಾಧ್ಯತೆಗಳಿದ್ದವು.
ರಾಜಸ್ಥಾನ ಪೊಲೀಸರು ಸಲ್ಲಿಸಿರುವ ಎಫ್ಐಆರ್‌ನಲ್ಲಿ ಬಾಂಬ್ ಸ್ಫೋಟ ಎಂದೇ ನಮೂದಿಸಿದ್ದಾರೆ. ಈ ಸ್ಫೋಟಕವನ್ನು ಟ್ರ್ಯಾಕ್ ಗುಂಟ ಇಡಲಾಗಿತ್ತು. ಟ್ರ್ಯಾಕ್ ಉಡಾಯಿಸಿ, ಟ್ರೈನ್ ಅಪಘಾತ ಮಾಡುವುದು ಇದರ ಹಿಂದಿನ ಉದ್ದೇಶವಾಗಿತ್ತು. ಈ ಮೂಲಕ ದೇಶದ ಭದ್ರತೆಗೆ ಸವಾಲು ಹಾಕಲಾಗಿದೆ. ಜನರಲ್ಲಿ ಮನಸ್ಸಿನಲ್ಲಿ ಭಯವನ್ನು ಬಿತ್ತುವ ಕೆಲಸವನ್ನು ಮಾಡಲಾಗಿದೆ ಎಂದು ಎಫ್ಐಆರ್‌ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ | Terrorist Arrest | ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಉಗ್ರ ಕೃತ್ಯ; ದೆಹಲಿಯಲ್ಲಿ ಐಎಸ್ ಭಯೋತ್ಪಾದಕ ಬಂಧನ