Site icon Vistara News

Udhayanidhi Stalin: ಉದಯನಿಧಿ ರಾವಣನ ವಂಶಸ್ಥ! ಬಾಗೇಶ್ವರ ಬಾಬಾ ವಾಗ್ದಾಳಿ

Bageshwar Baba

ನವದೆಹಲಿ: ಸನಾತನ ಧರ್ಮವನ್ನು (Sanatana Dharma) ಅವಹೇಳನ ಮಾಡಿದ್ದ ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ ಅವರ ಪುತ್ರರೂ ಆಗಿರುವ ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ವಿರುದ್ದ ಬಾಗೇಶ್ವರ್ ಧಾಮ್‌ನ ಮುಖ್ಯಸ್ಥ (Bageshwar Dham Head) ಧೀರೇಂದ್ರ ಶಾಸ್ತ್ರಿ(ಬಾಗೇಶ್ವರ್ ಬಾಬಾ) ತೀವ್ರ ವಾಗ್ದಾಳಿ ನಡೆಸಿದ್ದಾರೆ(Bageshwar Baba). ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ರಾವಣನನ ವಂಶಸ್ಥ ಎಂದು ಜರಿದಿದ್ದಾರೆ.

ಯಾರು ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂದು ಕನಸು ಕಾಣುತ್ತಿದ್ದಾರೋ ಅವರು ಒಂದು ಸಂಗತಿಯನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕಿದೆ. ಏನೆಂದರೆ, ಇದು ನಿಮ್ಮಿಂದ ಆಗದ ಕೆಲಸವಾಗಿದೆ ಮತ್ತು ಸನಾತನ ಧರ್ಮವನ್ನು ಯಾರೂ ನಾಶಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ರಾಹುಲ್, ನಿತೀಶ್ ಮೌನವೇಕೆ? ಕೆಣಕಿದೆ ಬಿಜೆಪಿ

ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇಂಡಿಯಾ ಕೂಟಕ್ಕೆ ಕಾರಣವಾಗಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಮೌನವನ್ನು ಪ್ರಶ್ನಿಸಿದೆ. ಸನಾತನ ಧರ್ಮವನ್ನು ಅವಹೇಳನ ಮಾಡಿರುವ, ಇಂಡಿಯಾ ಕೂಟದ ಪಾಲುದಾರ ಪಕ್ಷ ಡಿಎಂಕೆ ನಾಯಕನ ವಿರುದ್ಧ ರಾಹುಲ್ ಗಾಂಧಿ ಮತ್ತು ನಿತೀಶ್ ಕುಮಾರ್ ಏಕೆ ಮೌನ ವಹಿಸಿದ್ದಾರೆಂದು ಪ್ರಶ್ನಿಸಿದೆ.

ಉದಯನಿಧಿ ಸ್ಟಾಲಿನ್ ಹೇಳಿದ್ದೇನು?

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಪುತ್ರ, ಸಚಿವರೂ ಆದ ಉದಯನಿಧಿ ಸ್ಟಾಲಿನ್‌ ಅವರು ಸನಾತನ ಧರ್ಮದ (Sanatan Dharma) ಕುರಿತು ನೀಡಿದ ಹೇಳಿಕೆ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. “ಸನಾತನ ಧರ್ಮವು ಮಲೇರಿಯಾ, ಕೊರೊನಾ ಹಾಗೂ ಡೆಂಗ್ಯೂ ಇದ್ದಂತೆ” ಎಂದು ಉದಯನಿಧಿ (Udhayanidhi Stalin) ಸ್ಟಾಲಿನ್‌ ಹೇಳಿದ್ದು, ಅವರ ಹೇಳಿಕೆಗೆ ತೀವ್ರ ವಿರೋಧ, ಟೀಕೆ ವ್ಯಕ್ತವಾಗಿವೆ.

ತಮಿಳುನಾಡಿನ ಚೆನ್ನೈನಲ್ಲಿ ಪ್ರಗತಿಪರ ಲೇಖಕರು, ಕಲಾವಿದರ ಸಂಘದಿಂದ ಆಯೋಜಿಸಿದ್ದ “ಸನಾತನ ನಿರ್ಮೂಲನಾ ಸಮಾವೇಶ”ದಲ್ಲಿ ಉದಯನಿಧಿ ಸ್ಟಾಲಿನ್‌ ಮಾತನಾಡಿದರು. “ಇಂತಹ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನೀವು “ಸನಾತನ ವಿರೋಧಿ ಸಮ್ಮೇಳನ” ಎಂಬುದಾಗಿ ಆಯೋಜಿಸುವ ಬದಲು “ಸನಾತನ ನಿರ್ಮೂಲನಾ ಸಮ್ಮೇಳನ” ಎಂಬುದಾಗಿ ಕಾರ್ಯಕ್ರಮ ಆಯೋಜಿಸಿದ್ದು ನನಗೆ ಇಷ್ಟವಾಯಿತು” ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ :Udhayanidhi Stalin: ಉದಯನಿಧಿ ಹೇಳಿಕೆ ದುರದೃಷ್ಟಕರ ಎಂದ ಇಂಡಿಯಾ ಕೂಟದ ಪ್ರಮುಖ ಪಕ್ಷ ಟಿಎಂಸಿ

“ಕೆಲವು ವಿಷಯಗಳನ್ನು ವಿರೋಧಿಸುವ ಬದಲು ಅವುಗಳನ್ನು ನಿರ್ಮೂಲನೆ ಮಾಡುವುದೇ ಒಳ್ಳೆಯದು. ನಾವು ಡೆಂಗ್ಯೂ, ಸೊಳ್ಳೆ, ಮಲೇರಿಯಾ ಅಥವಾ ಕೊರೊನಾದಂತಹ ಸೋಂಕನ್ನು ವಿರೋಧಿಸಬಾರದು. ಅವುಗಳನ್ನು ನಿರ್ಮೂಲನೆ ಮಾಡಬೇಕು. ಹಾಗೆಯೇ ಸನಾತನ ಧರ್ಮವನ್ನೂ ನಾವು ವಿರೋಧಿಸುವ ಬದಲು ನಿರ್ಮೂಲನೆ ಮಾಡಬೇಕು” ಎಂದು ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮದ ವಿರುದ್ಧ ಭಾಷಣ ಮಾಡಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version