ನವದೆಹಲಿ: ಉತ್ತರ ಪ್ರದೇಶದ ಉಮೇಶ್ ಪಾಲ್ ಮರ್ಡರ್ (Umesh Pal Murder) ಪ್ರಕರಣದ ಪ್ರಮುಖ ಆರೋಪಿ ಅತೀಖ್ ಅಹ್ಮದ್ ಅವರ ಸಹವರ್ತಿಗಳ ಮನೆಗಳನ್ನು ಪ್ರಯಾಗ್‌ರಾಜ್ ಪೊಲೀಸರು ಜೆಸಿಬಿ ಬಳಸಿ ನೆಲಸಮ ಮಾಡಿದ್ದಾರೆ. ಸಮಾಜವಾದಿ ಪಕ್ಷದ ಮಾಜಿ ನಾಯಕನಾಗಿರುವ ಆತೀಕ್ ಸದ್ಯ ಗುಜರಾತ್‌ನ ಅಹ್ಮದಾಬಾದ್ ಜೈಲಿನಲ್ಲಿದ್ದಾನೆ. ಅಲ್ಲಿದ್ದುಕೊಂಡೇ ಈ ಕೊಲೆಗೆ ಪ್ಲ್ಯಾನ್ ಮಾಡಿದ್ದ ಎನ್ನಲಾಗಿದೆ. ಇದಕ್ಕೆ ನೆರವು ನೀಡಿದ್ದು ಜಾಫರ್ ಅಹ್ಮದ್. ಈಗ ಪೊಲೀಸರು ಜಾಫರ್ ಮನೆಯನ್ನು ನೆಲಸಮ ಮಾಡಿದ್ದಾರೆ. ಪ್ರಯಾಗ್‌ರಾಜ್ ಪೊಲೀಸ್ ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆಯ ಬೆಂಗಾವಲಿನಲ್ಲಿ ಈ ಬುಲ್ಡೋಜರ್ ಮಾಡಲಾಗಿದೆ.
ಉಮೇಶ್ ಪಾಲ್ ಮರ್ಡರ್ ಪ್ರಕರಣದ ಪ್ರಮುಖ ಆರೋಪಿ ಆತೀಖ್ ಅಹ್ಮದ್‌ನ ಸುಮಾರು 20 ಸಹವರ್ತಿಗಳನ್ನು ಪ್ರಯಾಗ್‌ರಾಜ್ ಡೆವಲಪ್‌ಮೆಂಟ್ ಪ್ರಾಧಿಕಾರ(ಪಿಡಿಎ) ಫೆ.28ರಂದು ಗುರುತಿಸಿತ್ತು. ಈ ವಿಷಯವನ್ನು ಖಚಿತಪಡಿಸಿದ್ದ ಅವರು ತಮ್ಮ ಆಸ್ತಿಗಳನ್ನು ನೆಲಸಮ ಮಾಡಲಾಗುತ್ತದೆ ಎಂದು ಹೇಳಿದ್ದರೆ. ಎಣಿಕೆಯಂತೆ ಆತೀಕ್ ಅಹ್ಮದ್ ಮನೆಯ ಬಳಿಯೇ ಇರುವ ಜಾಫರ್ ಅಹ್ಮದ್ ಮನೆಯನ್ನು ಪೊಲೀಸರು ಉರುಳಿಸಿದ್ದಾರೆ. ಇದೇ ಮನೆಯಲ್ಲಿ ಉಮೇಲ್ ಪಾಲ್ ಕೊಲೆ ಪ್ಲ್ಯಾನ್ ಮಾಡಲಾಗಿತ್ತು ಎನ್ನಲಾಗುತ್ತಿದೆ.
ಇದನ್ನೂ ಓದಿ: Prayagraj Encounter: ಉತ್ತರ ಪ್ರದೇಶದಲ್ಲಿ ಉಮೇಶ್ ಪಾಲ್ ಹತ್ಯೆ ಆರೋಪಿ ಅರ್ಬಾಜ್ ಖಾನ್ ಎನ್‌ಕೌಂಟರ್
ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಆತೀಕ್ ಅಹ್ಮದ್‌ನ ಪುತ್ರ ತಲೆಗೆ ಪೊಲೀಸರು 50 ಸಾವಿರ ಬಹುಮಾನ ಘೋಷಿಸಿದ್ದಾರೆ. 2005ರಲ್ಲಿ ನಡೆದ ಬಿಎಸ್‌ಪಿ ಶಾಸಕ ರಾಜು ಪಾಲ್ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಅವರನ್ನು ಆರೋಪಿಗಳು ಫೆಬ್ರವರಿ 24ರಂದು ಅವರ ಮನೆ ಎದುರಿ ಗುಂಡು ಹಾರಿಸಿ ಕೊಂದು ಹಾಕಿದ್ದರು. ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅತೀಕ್ ಅಹ್ಮದ್, ಆತನ ಇಬ್ಬರು ಪುತ್ರರು, ಆತನ ಪತ್ನಿ ಮತ್ತು ಆಪ್ತ ಸಹಚರರನ್ನು ಆರೋಪಿಗಳೆಂದು ಉತ್ತರ ಪೊಲೀಸರು ಹೆಸರಿಸಿದ್ದಾರೆ.