ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ (Ram Mandir) ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಮಂದಿರದ ಕೆಲವು ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.
ಟ್ರಸ್ಟ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ರಾಮ ಮಂದಿರ ನಿರ್ಮಾಣ ಹಂತದಲ್ಲಿರುವ ಚಿತ್ರಗಳನ್ನು “ಲಕ್ಷಾಂತರ ಶ್ರೀರಾಮ ಭಕ್ತರ ಶ್ರಮವು ಅಂತಿಮವಾಗಿ ಫಲಕೊಡುತ್ತಿದೆ, ಅದು ದೈವಿಕ ದೇವಾಲಯದ ರೂಪದಲ್ಲಿ ರೂಪುಗೊಳ್ಳುತ್ತಿದೆ. ಜೈ ಶ್ರೀ ರಾಮ್!” ಎಂಬ ಶೀರ್ಷಿಕೆಯಡಿ ಫೋಟೋಗಳನ್ನು ಷೇರ್ ಮಾಡಲಾಗಿದೆ.
ರಾಮ ಮಂದಿರ ನಿರ್ಮಾಣದ ಸಂಪೂರ್ಣ ದೃಶ್ಯವನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ. ದೇವಾಲಯದ ಹೊರ ಗೋಡೆಯ ಕಂಬಗಳನ್ನು ನಿರ್ಮಾಣ ಮಾಡಲಾಗಿದೆ. ಇಡೀ ಫ್ಲೋರ್ ಪ್ಲ್ಯಾನ್ ಫೋಟೋಗಳಲ್ಲಿ ಎದ್ದು ಕಾಣುತ್ತದೆ. ರಾಮ್ ಮಂದಿರ ಟ್ರಸ್ಟ್ ಕಾಲಕಾಲಕ್ಕೆ ದೇವಾಲಯದ ನಿರ್ಮಾಣದ ಚಿತ್ರಗಳನ್ನು ಬಿಡುಗಡೆ ಮಾಡಿ, ಕಾಮಗಾರಿ ಪ್ರಗತಿಯ ಬಗ್ಗೆ ಜನರಿಗೆ ತಿಳಿಸುತ್ತದೆ. ಅಸಂಖ್ಯಾತ ರಾಮನ ಭಕ್ತರು ಭವ್ಯ ಮಂದಿರದ ನಿರ್ಮಾಣವನ್ನು ವೀಕ್ಷಿಸಲು ಅನುವು ಮಾಡಿಕೊಡುವುದು ಇದರ ಹಿಂದಿನ ಉದ್ದೇಶವಾಗಿದೆ. ನೆಲದ ಮೇಲಿನ ಕಂಬಗಳು ಮತ್ತು ಗೋಡೆಗಳಿಂದ ಮಾಡಿದ ದೇವಾಲಯದ ಗಾತ್ರ ಮತ್ತು ಆಕಾರವನ್ನು ಮೇಲಿನಿಂದ ನೋಡಬಹುದಾಗಿದೆ.
ಇದನ್ನೂ ಓದಿ: Ayodhya Rama Mandir : ಆಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಕಾರ್ಕಳದಿಂದ ಹೊರಟಿದೆ ನೆಲ್ಲಿಕಾರು ಶಿಲೆ
ಗ್ರೌಂಡ್ ಫ್ಲೋರ್ ಚಾವಣಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ನಿರ್ಮಾಣದ ಸ್ಥಳದಲ್ಲಿ ಜನರು ಕೆಲಸ ಮಾಡುವುದನ್ನು ನೋಡಬಹುದಾಗಿದೆ. ಗ್ರೌಂಡ್ ಫ್ಲೋರ್ ಕಂಬಗಳ ಮೇಲೆ ತೊಲೆಗಳನ್ನು ಇಟ್ಟಿರುವುದನ್ನು ಕಾಣಬಹುದಾಗಿದೆ.