ಬೆಂಗಳೂರು: ಕೇಂದ್ರ ಬಜೆಟ್ (Union Budget 2023) ಮಂಡನೆ ಬೆನ್ನಲ್ಲೇ ರೈಲ್ವೆ ಇಲಾಖೆಗೆ ದೊರೆತಿರುವ ಅನುದಾನ ಸೇರಿದಂತೆ ವಿವಿಧ ಮಾಹಿತಿಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (ashwini vaishnaw) ಅವರು ಹಂಚಿಕೊಂಡಿದ್ದಾರೆ. ಜತೆಗೆ, ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಬಜೆಟ್‌ನಲ್ಲಿ ಈ ಬಾರಿ 7561 ಕೋಟಿ ರೂ. ನಿಗದಿ ಮಾಡಿರುವ ಮಾಹಿತಿಯನ್ನೂ ನೀಡಿದ್ದಾರೆ.
ಕೇಂದ್ರ ಬಜೆಟ್ ಮಂಡನೆ ಬೆನ್ನಲ್ಲೇ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕರ್ನಾಟಕದ ವಿವಿಧ ವಿಭಾಗೀಯ ರೈಲ್ವೆ ಅಧಿಕಾರಿಗಳ ಜತೆ ಗುರುವಾರ ವಿಡಿಯೋ ಸಂವಾದ ನಡೆಸಿದರು. ರಾಜ್ಯಕ್ಕೆ ಹಂಚಿಕೆಯಾಗಿರುವ ಅನುದಾನದ ಪೈಕಿ, ರಾಜ್ಯದ 7 ರೈಲ್ವೆ ಮಾರ್ಗಗಳ ವಿದ್ಯುದೀಕರಣ ಅಭಿವೃದ್ಧಿ ಹಾಗೂ ಮಾರ್ಪಾಡು(Electrification) ಕಾರ್ಯಕ್ಕೆ 793 ಕೋಟಿ ರೂ. ಮೀಸಲಿಡಲಾಗಿದೆ.
ರಾಜ್ಯದ ರೈಲ್ವೆ ಮಾರ್ಗಗಳ ವಿದ್ಯುದೀಕರಣಕ್ಕೆ ಅನುದಾನ
- ಗದಗ – ಹೊಟಗಿ: 110 ಕೋಟಿ ರೂ.
- ಚಿಕ್ಕಬಾಣಾವರ – ಹುಬ್ಬಳ್ಳಿ : 128 ಕೋಟಿ ರೂ.
- ಬಿರೂರು – ತಾಳಗುಪ್ಪ: 56 ಕೋಟಿ
- ಹಾಸನ – ಮಂಗಳೂರು: 134 ಕೋಟಿ
- ಮಿರಾಜ್ – ಲೋಂಡಾ: 182 ಕೋಟಿ
- ಹೊಸಪೇಟೆ – ಹುಬ್ಬಳ್ಳಿ – ವಾಸ್ಕೋ ಡ ಗಾಮ: 20 ಕೋಟಿ
- ಚಿಕ್ಕಬಾಣಾವರ – ಹಾಸನ: 77 ಕೋಟಿ
ಇದನ್ನೂ ಓದಿ: Union Budget 2023: ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಈ ಬಾರಿ 7561 ಕೋಟಿ ರೂ.! ಇದು ದಾಖಲೆಯ ಅನುದಾನ
ರಾಜ್ಯದ ಹೊಸ ರೈಲ್ವೇ ಮಾರ್ಗಗಳಿಗೆ ಅನುದಾನ
- ಗದಗ – ವಾಡಿ : 350 ಕೋಟಿ (150 ಕೋಟಿ ರಾಜ್ಯ ಸರ್ಕಾರ)
- ಗಿನಿಗೇರಾ – ರಾಯಚೂರು : 300 ಕೋಟಿ ರೂ.
- ತುಮಕೂರು – ದಾವಣಗೆರೆ (via ಚಿತ್ರದುರ್ಗ) : 420 ಕೋಟಿ (200 ಕೋಟಿ ರಾಜ್ಯ ಸರ್ಕಾರ)
- ತುಮಕೂರು – ರಾಯದುರ್ಗ (via ಕಲ್ಯಾಣದುರ್ಗ) : 350 ಕೋಟಿ
- ಬಾಗಲಕೋಟೆ – ಕುಡಚಿ : 360 ಕೋಟಿ (150 ಕೋಟಿ ರಾಜ್ಯ ಸರ್ಕಾರ)
- ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು : 150 ಕೋಟಿ
- ಬೆಳಗಾವಿ – ಧಾರವಾಡ (via ಕಿತ್ತೂರು) : 10 ಕೋಟಿ
- ಮರಿಕುಪ್ಪಂ – ಕುಪ್ಪಂ : 200 ಕೋಟಿ
- ಕಡೂರು – ಚಿಕ್ಕಮಗಳೂರು – ಹಾಸನ : 145 ಕೋಟಿ
- ಮಲಗೂರು – ಪಾಲಸಮುದ್ರಂ : 20 ಕೋಟಿ