ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ತಾವು ಮಂಡಿಸಿದ ಬಜೆಟ್ನಲ್ಲಿ (Union Budget 2024) ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPFO) ದಾಖಲಾಗುವ ಆಧಾರದ ಮೇಲೆ ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಮೂರು ಉದ್ಯೋಗ ಸಂಬಂಧಿತ ಪ್ರೋತ್ಸಾಹಕ ಯೋಜನೆಗಳನ್ನು ಘೋಷಿಸಿದ್ದಾರೆ. ಸ್ಕೀಮ್ ಎ (ಹೊಸಬರಿಗೆ ಒಂದು ತಿಂಗಳ ವೇತನ), ಸ್ಕೀಮ್ ಬಿ (ಉತ್ಪಾದನಾ ಘಟಕಗಳಲ್ಲಿ ಉದ್ಯೋಗ ಸೃಷ್ಟಿ) ಮತ್ತು ಸ್ಕೀಮ್ ಸಿ (ಉದ್ಯೋಗದಾತರಿಗೆ ಬೆಂಬಲ) ಸೇರಿದಂತೆ ಈ ಮೂರು ಯೋಜನೆಗಳನ್ನು ಪ್ರಕಟಿಸಿದೆ. ಮೊದಲ ಬಾರಿಗೆ ಉದ್ಯೋಗಿಗಳು ಇಪಿಎಫ್ಒಗೆ ನೋಂದಾಯಿಸಿಕೊಳ್ಳುವಾಗ ಈ ಅನುಕೂಲ ನೀಡಲಾಗಿದೆ.
ಪ್ರಧಾನ ಮಂತ್ರಿಗಳ ಪ್ಯಾಕೇಜ್ನ ಭಾಗವಾಗಿ ಉದ್ಯೋಗ-ಸಂಬಂಧಿತ ಪ್ರೋತ್ಸಾಹಕ್ಕಾಗಿ ನಮ್ಮ ಸರ್ಕಾರ ಈ ಕೆಳಗಿನ ಮೂರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇಪಿಎಫ್ಗೆ ದಾಖಲು, ಮೊದಲ ಬಾರಿಗೆ ಉದ್ಯೋಗಿಗಳನ್ನು ಗುರುತಿಸುವತ್ತ ಗಮನ ಹರಿಸುವುದು ಮತ್ತು ಉದ್ಯೋಗಿಗಳು ಮತ್ತು ಉದ್ಯೋಗದಾತರಿಗೆ ಬೆಂಬಲ ಯೋಜನೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮ್ಮ ಬಜೆಟ್ 2024 ಓದುತ್ತಾ ಹೇಳಿದ್ದಾರೆ.
ಇಪಿಎಫ್ಒನಲ್ಲಿ ನೋಂದಾಯಿಸಲ್ಪಟ್ಟಿರುವ ಮೊದಲ ಬಾರಿಗೆ ಉದ್ಯೋಗಿಗಳಿಗೆ ಮೂರು ಕಂತುಗಳಲ್ಲಿ ಒಂದು ತಿಂಗಳ ವೇತನವನ್ನು ನೇರವಾಗಿ ವರ್ಗಾಯಿಸಲಾಗುವುದು. ಗರಿಷ್ಠ ಮಿತಿ 15,000 ರೂ.ಗಳವರೆಗೆ ಇರುತ್ತದೆ. ಗರಿಷ್ಠ ಸಂಬಳ ತಿಂಗಳಿಗೆ 1 ಲಕ್ಷ ರೂಪಾಯಿ ಎಂದು ಅವರು ಹೇಳಿದ್ದಾರೆ.
3 ಹೊಸ ಯೋಜನೆಗಳು ಈ ರೀತಿ ಇವೆ
ಸ್ಕೀಮ್ ಎ: ಈ ಯೋಜನೆಯಡಿ, ಮೊದಲ ಬಾರಿಗೆ ಕೆಲಸ ಸೇರಿದವರಿಗೆ ಒಂದು ತಿಂಗಳ ವೇತನವನ್ನು 15,000 ರೂ.ಗಳವರೆಗೆ ಸಬ್ಸಿಡಿಯಾಗಿ ಪಡೆಯುತ್ತಾರೆ. ಇದು ಎಲ್ಲಾ ವಲಯಗಳಿಗೆ ಮತ್ತು ತಿಂಗಳಿಗೆ 1 ಲಕ್ಷ ರೂ.ಗಿಂತ ಕಡಿಮೆ ವೇತನ ಹೊಂದಿರುವ ವ್ಯಕ್ತಿಗಳಿಗೆ ಅನ್ವಯಿಸುತ್ತದೆ. ಸಬ್ಸಿಡಿಯನ್ನು ಮೂರು ಕಂತುಗಳಲ್ಲಿ ಉದ್ಯೋಗಿಗೆ ಪಾವತಿಸಲಾಗುತ್ತದ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಉದ್ಯೋಗಿಯು ಎರಡನೇ ಕಂತು ಕ್ಲೈಮ್ ಮಾಡುವ ಮೊದಲು ಕಡ್ಡಾಯ ಆನ್ಲೈನ್ ಹಣಕಾಸು ಸಾಕ್ಷರತಾ ಕೋರ್ಸ್ಗೆ ಒಳಪಡಬೇಕು. ನೇಮಕಾತಿಯ 12 ತಿಂಗಳೊಳಗೆ ಉದ್ಯೋಗಿ ಹೊರಕ್ಕೆ ಹೋದರೆ ಕಂಪನಿಯು ಸಬ್ಸಿಡಿಯನ್ನು ಮರುಪಾವತಿಸಬೇಕಾಗುತ್ತದೆ. ಈ ಯೋಜನೆ ಎರಡು ವರ್ಷಗಳವರೆಗೆ ಅನ್ವಯಿಸುತ್ತದೆ.
ಸ್ಕೀಮ್ ಬಿ: ಮೇಲಿನ ಯೋಜನೆಗೆ ಇಪಿಎಫ್ಒ ಅನುಕೂಲದ ಮೂರು ವರ್ಷಗಳ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಎಲ್ಲಾ ಕಾರ್ಪೊರೇಟ್ ಮತ್ತು ಕಾರ್ಪೊರೇಟ್ ಅಲ್ಲದ ಕಂಪನಿಗಳು ಅರ್ಹ. ಉತ್ಪಾದನಾ ವಲಯದಲ್ಲಿ ಮೊದಲ ಬಾರಿಗೆ ಉದ್ಯೋಗಿಗಳನ್ನು ಗಣನೀಯವಾಗಿ ನೇಮಿಸಿಕೊಳ್ಳಲು ಇದು ನೆರವಾಗುತ್ತದೆ. ಉದ್ಯೋಗದಾತರು ಈ ಹಿಂದೆ ಇಪಿಎಫ್ಒ ನೋಂದಣಿಯಾಗದ ಕನಿಷ್ಠ ಸಂಖ್ಯೆಯ ಕಾರ್ಮಿಕರನ್ನು ನೇಮಿಸಿಕೊಳ್ಳಬಹುದು.
ಇದನ್ನೂ ಓದಿ: Union Budget 2024 : ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ‘ಚೊಂಬು’ ಎಂದ ಡಿಸಿಎಂ ಡಿ.ಕೆ. ಶಿವಕುಮಾರ್
ಸ್ಕೀಮ್ ಸಿ: ಈ ಕೆಳಗಿನ ಯೋಜನೆಯು ಕನಿಷ್ಠ ಇಬ್ಬರು ಉದ್ಯೋಗಿಗಳು (50ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವವರಿಗೆ) ಅಥವಾ 5 ಉದ್ಯೋಗಿಗಳಿಗೆ ಅನ್ವಯವಾಗುತ್ತದೆ (50 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವವರಿಗೆ) ಉದ್ಯೋಗವಕಾಶ ಹೆಚ್ಚಿಸುವ ಉದ್ಯೋಗದಾತರಿಗೆ ಮತ್ತು ತಿಂಗಳಿಗೆ 1,00,000 ರೂ.ಗಳನ್ನು ಮೀರದ ಉದ್ಯೋಗಿಗಳಿಗೆ ಅನ್ವಯಿಸುತ್ತದೆ. ಇಲ್ಲಿ ಉದ್ಯೋಗಿಗಳು ಇಪಿಎಫ್ಒಗೆ ಹೊಸದಾಗಿ ದಾಖಲು ಮಾಡಬೇಕಾಗಿಲ್ಲ. ಇದರ ಅಡಿಯಲ್ಲಿ, ಎರಡು ವರ್ಷಗಳವರೆಗೆ, ಹಿಂದಿನ ವರ್ಷದಲ್ಲಿ ನೇಮಕಗೊಂಡ ಹೆಚ್ಚುವರಿ ಉದ್ಯೋಗಿಗಳಿಗೆ ಸರ್ಕಾರವು ಇಪಿಎಫ್ಒ ಕಂಪನಿಯ ಪಾಲನ್ನು ಉದ್ಯೋಗದಾತರಿಗೆ ತಿಂಗಳಿಗೆ 3,000 ರೂ.ವರೆಗೆ ಮರುಪಾವತಿ ಮಾಡುತ್ತದೆ. ಸ್ಕೀಮ್ ಬಿ ಯವರಿಗೆ ಇದು ಅನ್ವಯಿಸುವುದಿಲ್ಲ.