Site icon Vistara News

Union Budget 2024: ಬಜೆಟ್‌ನಲ್ಲಿ ಬಿಹಾರ, ಆಂಧ್ರಪ್ರದೇಶಕ್ಕೆ ಬಂಪರ್‌ ಕೊಡುಗೆ: ಇಲ್ಲಿದೆ ನಗೆಯುಕ್ಕಿಸುವ ಮೀಮ್ಸ್‌

Union Budget 2024

Union Budget 2024

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಜುಲೈ 23ರಂದು ಮಂಡಿಸಿದ 2024ರ ಬಜೆಟ್​​ನಲ್ಲಿ (Union Budget 2024) ಎನ್​​ಡಿಎ ಪಾಲುದಾರರಾದ ಟಿಡಿಪಿಯ ಸರ್ಕಾರ ಇರುವ ಆಂಧ್ರಪ್ರದೇಶ ಹಾಗೂ ಜೆಡಿಯು ಸರ್ಕಾರ ಇರುವ ಬಿಹಾರಕ್ಕೆ ಭರ್ಜರಿ ಕೊಡುಗೆಗಳನ್ನು ಪ್ರಕಟಿಸಿದ್ದಾರೆ. ಈ ವಿಚಾರ ಮುಂದಿಟ್ಟುಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಮೀಮ್‌ಗಳ ಸುರಿಮಳೆಯೇ ಆಗುತ್ತಿದ್ದು, ನೋಡುಗರ ತುಟಿಯಂಚಲ್ಲಿ ನಗು ಮೂಡಿಸುತ್ತಿವೆ.

ಕೇಂದ್ರ ಬಜೆಟ್‌ನಲ್ಲಿ ಬಿಹಾರಕ್ಕೆ ಮಹತ್ವದ ಯೋಜನೆಗಳನ್ನು ಘೋಷಿಸಲಾಗಿದೆ. ಇದರಲ್ಲಿ ವಿವಿಧ ರಸ್ತೆ ಅಭಿವೃದ್ಧಿಗೆ 26,000 ಕೋಟಿ ರೂ.ಗಳ ಹಂಚಿಕೆ ಮತ್ತು ಹೊಸ ವಿಮಾನ ನಿಲ್ದಾಣ ಮತ್ತು ಕ್ರೀಡಾ ಮೂಲಸೌಕರ್ಯಗಳ ಯೋಜನೆಗಳು ಸೇರಿವೆ. ಇದಲ್ಲದೆ ಪ್ರವಾಹ ತಗ್ಗಿಸುವ ಪ್ರಯತ್ನಗಳಿಗಾಗಿ ಸರ್ಕಾರವು ರಾಜ್ಯಕ್ಕೆ 11,500 ಕೋಟಿ ರೂ.ಗಳ ಅನುದಾನ ಘೋಷಿಸಿದೆ.

ಅಲ್ಲದೆ ಬಿಹಾರಕ್ಕೆ ಪಾಟ್ನಾ-ಪೂರ್ಣಿಯಾ ಎಕ್ಸ್‌ಪ್ರೆಸ್‌ವೇ ಮತ್ತು ಬಕ್ಸಾರ್-ಭಾಗಲ್ಪುರ್ ಎಕ್ಸ್‌ಪ್ರೆಸ್‌ವೇ ಎಂಬ ಎರಡು ಪ್ರಮುಖ ಎಕ್ಸ್‌ಪ್ರೆಸ್‌ವೇಗಳನ್ನು ಹಣಕಾಸು ಸಚಿವರು ಘೋಷಿಸಿದರು. ಬಿಹಾರದ ಬಕ್ಸಾರ್ ಜಿಲ್ಲೆಯಲ್ಲಿ ಗಂಗಾ ನದಿಗೆ ಅಡ್ಡಲಾಗಿ ಎರಡು ಸೇತುವೆಗಳನ್ನು ನಿರ್ಮಿಸಲಾಗುತ್ತದೆ.

ಆಂಧ್ರಪ್ರದೇಶಕ್ಕೆ ಸಿಕ್ಕಿದ್ದೇನು?

ಆಂಧ್ರಪ್ರದೇಶ ರಾಜಧಾನಿ ಅಮರಾವತಿ ಅಭಿವೃದ್ಧಿಗಾಗಿ ಆಂಧ್ರಪ್ರದೇಶಕ್ಕೆ ಕೇಂದ್ರ ಸರ್ಕಾರ 15,000 ಕೋಟಿ ರೂ.ಗಳ ಆರ್ಥಿಕ ನೆರವು ನೀಡಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು. “ಆಂಧ್ರಪ್ರದೇಶ ಮರುಸಂಘಟನೆ ಕಾಯ್ದೆಯಲ್ಲಿನ ಬದ್ಧತೆಗಳನ್ನು ಪೂರೈಸಲು ನಮ್ಮ ಸರ್ಕಾರ ಪ್ರಯತ್ನಗಳನ್ನು ಮಾಡಿದೆ. ರಾಜ್ಯದ ಬಂಡವಾಳದ ಅಗತ್ಯವನ್ನು ಗುರುತಿಸಿ, ನಾವು ಬಹುಪಕ್ಷೀಯ ಸಂಸ್ಥೆಗಳ ಮೂಲಕ ವಿಶೇಷ ಆರ್ಥಿಕ ಬೆಂಬಲ ಒದಗಿಸುತ್ತೇವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ, ಮುಂದಿನ ವರ್ಷಗಳಲ್ಲಿ ಹೆಚ್ಚುವರಿ ಮೊತ್ತಗಳೊಂದಿಗೆ 15,000 ಕೋಟಿ ರೂ.ಗಳನ್ನು ವಿತರಣೆ ಮಾಡಲಾಗುವುದು” ಎಂದು ಸೀತಾರಾಮನ್ ತಿಳಿಸಿದರು.

ಹೆಚ್ಚುವರಿಯಾಗಿ ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಒಟ್ಟಾರೆ ಅಭಿವೃದ್ಧಿಯನ್ನು ಉತ್ತೇಜಿಸಲು ‘ಪೂರ್ವೋದಯ’ ಎಂಬ ಸಮಗ್ರ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುವುದು. ಅಲ್ಲದೆ ಪೂರ್ವ ಪ್ರದೇಶದಲ್ಲಿ ಕೈಗಾರಿಕಾ ಕಾರಿಡಾರ್ ರಚಿಸಲು ಸರ್ಕಾರ ಬೆಂಬಲ ನೀಡಲಿದೆ ಎಂದು ಬಜೆಟ್​ನಲ್ಲಿ ನಿರ್ಮಲಾ ಸೀತರಾಮನ್ ಹೇಳಿದರು.

ಇದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ದಾಖಲೆಯ 7ನೇಯ ಬಜೆಟ್‌ ಎನ್ನುವುದು ವಿಶೇಷ. ಅವರು ಬಜೆಟ್‌ ಮಂಡಿಸಿದ ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ಮೀಮ್ಸ್‌, ಟ್ರೋಲ್‌ಗಳು ವೈರಲ್‌ ಆಗಿದ್ದು, ಆ ಪೈಕಿ ಕೆಲವು ಇಲ್ಲಿವೆ.

ಇದನ್ನೂ ಓದಿ: Union Budget 2024: ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಗುಡ್‌ನ್ಯೂಸ್‌! ಮೊಬೈಲ್‌ ಫೋನ್‌, ಚಾರ್ಜರ್‌ ಬೆಲೆ ಅಗ್ಗ

ಸರ್ವಾಂಗೀಣ ಏಳಿಗೆಗೆ ಅಕ್ಷಯಪಾತ್ರೆ; ಎಂದ ನರೇಂದ್ರ ಮೋದಿ

ಬಜೆಟ್‌ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪ್ರತಿಕ್ರಿಯಿಸಿದ್ದು, “ದೇಶದ ಸರ್ವಾಂಗೀಣ ಏಳಿಗೆಗೆ ಈ ಬಜೆಟ್‌ ಏಣಿಯಾಗಿದೆ” ಎಂದು ವಿಡಿಯೊ ಸಂದೇಶದ ಮೂಲಕ ಬಣ್ಣಿಸಿದ್ದಾರೆ. “ದೇಶದ ಎಲ್ಲ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್‌ ಮಂಡಿಸಲಾಗಿದೆ. ಯುವಕರಿಗೆ ಉದ್ಯೋಗ, ಬಡವರಿಗೆ ಮನೆ ನಿರ್ಮಾಣ, ಸಣ್ಣ ಉದ್ಯಮಗಳು, ಶಿಕ್ಷಣ ಸೇರಿ ಎಲ್ಲ ಕ್ಷೇತ್ರಗಳ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಮಂಡಿಸಲಾಗಿದೆ. ಅಷ್ಟೇ ಅಲ್ಲ, ಭಾರತವು ಮೂಲ ಸೌಕರ್ಯ ಉತ್ಪಾದಿಸುವಲ್ಲಿ ಜಾಗತಿಕ ಮಳಿಗೆಯಾಗುತ್ತದೆ. ಭಾರತದ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ. ಅಷ್ಟರಮಟ್ಟಿಗೆ, ಪ್ರಸಕ್ತ ಸಾಲಿನ ಮುಂಗಡಪತ್ರವು ದೇಶದ ಏಳಿಗೆಯನ್ನು ಪ್ರತಿನಿಧಿಸುತ್ತದೆ” ಎಂದಿದ್ದಾರೆ.

Exit mobile version