Site icon Vistara News

BSNL Revival: ಬಿಎಸ್ಸೆನ್ನೆಲ್‌ ಹಳಿಗೆ ತರಲು ಕೇಂದ್ರದಿಂದ 89 ಸಾವಿರ ಕೋಟಿ ರೂ. ಪ್ಯಾಕೇಜ್‌, ಸಿಗಲಿದೆಯೇ 5ಜಿ?

Revival Package For BSNL

Union Cabinet approves Rs 89,000-crore revival plan for BSNL

ನವದೆಹಲಿ: ಕೇಂದ್ರ ಸರ್ಕಾರಿ ಒಡೆತನದ, ನಷ್ಟದಲ್ಲಿರುವ ಟೆಲಿಕಾಂ ಸೇವೆಗಳ ಪೂರೈಕೆದಾರ ಸಂಸ್ಥೆ ಭಾರತ್‌ ಸಂಚಾರ ನಿಗಮ ಲಿಮಿಟೆಡ್‌ನ (BSNL) ಪುನರುಜ್ಜೀವನಕ್ಕಾಗಿ (BSNL Revival) 89,047 ಕೋಟಿ ರೂಪಾಯಿ ವಿನಿಯೋಗಿಸಲು ಕೇಂದ್ರ ಸಚಿವ ಸಂಪುಟ ಸಭೆಯು ಬುಧವಾರ ಸಮ್ಮತಿ ಸೂಚಿಸಿದೆ. ಇದರಿಂದಾಗಿ ದೇಶಾದ್ಯಂತ ಬಿಎಸ್‌ಎನ್‌ಎನ್‌ ಸೇವೆಯು ಮತ್ತಷ್ಟು ಸಮರ್ಪಕವಾಗಿ ಲಭ್ಯವಾಗಲು ಸಾಧ್ಯವಾಗಲಿದೆ.

ಇದರೊಂದಿಗೆ ಬಿಎಸ್‌ಎನ್‌ಎಲ್‌ನ ಅಧಿಕೃತ ಬಂಡವಾಳವು 1.5 ಲಕ್ಷ ಕೋಟಿ ರೂಪಾಯಿಯಿಂದ 2.10 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಲಿದೆ. ಕೇಂದ್ರ ಸರ್ಕಾರದ ಪ್ಯಾಕೇಜ್‌ನಿಂದಾಗಿ ದೇಶಾದ್ಯಂತ 4ಜಿ ಹಾಗೂ 5ಜಿ ತರಂಗಗಳ ಹಂಚಿಕೆ, ಸಮರ್ಪಕವಾಗಿ ಟೆಲಿಕಾಂ ಸೇವೆ ಪೂರೈಕೆ, ಹೈಸ್ಪೀಡ್‌ ಇಂಟರ್‌ನೆಟ್‌ ಸೇವೆ ನೀಡಲು ಫಿಕ್ಸ್ಡ್‌ ವೈರ್‌ಲೆಸ್‌ ಆ್ಯಕ್ಸೆಸ್‌ (FWA) ಸೇರಿ ಹಲವು ಸೇವೆಗಳನ್ನು ಒದಗಿಸಲು ಕೇಂದ್ರದ ಅನುದಾನವನ್ನು ಬಳಸಿಕೊಳ್ಳಲಾಗುತ್ತದೆ.

ಇದು ಮೂರನೇ ಪ್ಯಾಕೇಜ್‌

ಕೇಂದ್ರ ಸರ್ಕಾರವು ಕಳೆದ ನಾಲ್ಕು ವರ್ಷದಲ್ಲಿ ಘೋಷಿಸುತ್ತಿರುವ ಮೂರನೇ ಪ್ಯಾಕೇಜ್‌ ಇದಾಗಿದೆ. 2019ರಲ್ಲಿ ಕೇಂದ್ರ ಸರ್ಕಾರವು ಬಿಎಸ್‌ಎನ್‌ಎಲ್‌ ಹಾಗೂ ಎಂಟಿಎನ್‌ಎಲ್‌ ಪುನರುಜ್ಜೀವನಕ್ಕಾಗಿ 69 ಸಾವಿರ ಕೋಟಿ ರೂ. ನೀಡಿತ್ತು. ಹಾಗೆಯೇ, 2022ರಲ್ಲಿ ಎರಡೂ ಸಾರ್ವಜನಿಕ ಉದ್ದಿಮೆಗಳ ಏಳಿಗೆಗೆ 1.64 ಲಕ್ಷ ರೂ. ಒದಗಿಸಿತ್ತು. ಈಗ ಮೂರನೇ ಪ್ಯಾಕೇಜ್‌ ಆಗಿ 89 ಸಾವಿರ ಕೋಟಿ ರೂ. ನೀಡಿದೆ.

ಇದನ್ನೂ ಓದಿ: Union Cabinet | ರಾಷ್ಟ್ರ ಮಟ್ಟದ 3 ಸಹಕಾರ ಸಂಘಗಳ ಸ್ಥಾಪನೆಗೆ ಕೇಂದ್ರ ಸಂಪುಟ ಸಭೆ ಅಸ್ತು, ಬಿತ್ತನೆ ಬೀಜ ರಫ್ತಿಗೆ ಉತ್ತೇಜನ

ಏಳಿಗೆಯತ್ತ ಬಿಎಸ್‌ಎನ್‌ಎಲ್‌

ಕೇಂದ್ರ ಸರ್ಕಾರದಿಂದ ಲಕ್ಷಾಂತರ ಕೋಟಿ ರೂಪಾಯಿ ಅನುದಾನ ಸಿಕ್ಕ ಕಾರಣ ಬಿಎಸ್‌ಎನ್‌ಎಲ್‌ ಏಳಿಗೆಯತ್ತ ಸಾಗುತ್ತಿದೆ. 2021-22ರ ವಿತ್ತೀಯ ಸಾಲಿನಿಂದ ಸಂಸ್ಥೆಯು ಲಾಭ ಗಳಿಸುತ್ತಿದೆ. ದೇಶಾದ್ಯಂತ ಗುಣಮಟ್ಟದ ಸೇವೆ ಒದಗಿಸುತ್ತಿದೆ. ಹಾಗೆಯೇ, ಸಾಲದ ಪ್ರಮಾಣವು 32 ಸಾವಿರ ಕೋಟಿ ರೂಪಾಯಿಯಿಂದ 22 ಸಾವಿರ ಕೋಟಿ ರೂಪಾಯಿಗೆ ಇಳಿಕೆಯಾಗಿದೆ.

Exit mobile version