ನವ ದೆಹಲಿ: ದೇಶದಲ್ಲಿ ಇನ್ನು ಮುಂದೆ ಎಲ್ಲ ವೈದ್ಯರು ವೈದ್ಯಕೀಯ ಸೇವೆ ಸಲ್ಲಿಸಲು ವಿಶಿಷ್ಟ ಗುರುತಿನ ಸಂಖ್ಯೆ (Unique identification number) ಹೊಂದಿರಬೇಕು ಎಂದು ನ್ಯಾಶನಲ್ ಮೆಡಿಕಲ್ ಕಮಿಶನ್ (National medical commission) ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಎನ್‌ಎಂಸಿಯ ಎಥಿಕ್ಸ್ ಬೋರ್ಡ್ ವಿಶಿಷ್ಟ ಗುರುತನ್ನು ಸೃಷ್ಟಿಸಿ ವೈದ್ಯರಿಗೆ ವಿತರಿಸಲಿದೆ. ಈ ಕುರಿತ national medical register ಅನ್ನು ಎನ್‌ಎಂಸಿ ನಿರ್ವಹಿಸಲಿದೆ.
ನ್ಯಾಶನಲ್ ಮೆಡಿಕಲ್ ರಿಜಿಸ್ಟರ್ (NMR) ದೇಶದಲ್ಲಿನ ಎಲ್ಲ ರಾಜ್ಯ ವೈದ್ಯಕೀಯ ಮಂಡಳಿಗಳಲ್ಲಿನ ವೈದ್ಯರ ನೋಂದಣಿಗಳ ವಿವರಗಳನ್ನು ಹೊಂದಲಿದೆ. ವೈದ್ಯರ ವೈದ್ಯಕೀಯ ಅರ್ಹತೆ, ವಿಶೇಷತೆ, ಉತ್ತೀರ್ಣರಾದ ವರ್ಷ, ಯೂನಿವರ್ಸಿಟಿ, ಆಸ್ಪತ್ರೆ ಸೇರಿ ಎಲ್ಲ ವಿವರಗಳನ್ನು ಒಳಗೊಳ್ಳಲಿದೆ.
ಇದನ್ನೂ ಓದಿ: Medical Colleges : ಎಂಟೇ ವರ್ಷಗಳಲ್ಲಿ ದುಪ್ಪಟ್ಟಾದ ವೈದ್ಯಕೀಯ ಕಾಲೇಜುಗಳು!
ಎನ್‌ಎಂಆರ್‌ನಲ್ಲಿ ನಮೂದಾಗಿರುವ ವೈದ್ಯರ ವಿವರಗಳನ್ನು ಎಲ್ಲರೂ ಎನ್‌ಎಂಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು. www.nmc.org.in ವೈದ್ಯರಿಗೆ ವೈದ್ಯಕೀಯ ಸೇವೆಗೆ ನೀಡುವ ಲೈಸೆನ್ಸ್ ಅನ್ನು ಪ್ರತಿ 5 ವರ್ಷಗಳಿಗೊಮ್ಮೆ ನವೀಕರಿಸಬೇಕು. ಇದಕ್ಕಾಗುಇ ವೈದ್ಯರು ರಾಜ್ಯ ವೈದ್ಯಕೀಯ ಮಂಡಳಿಗೆ (State Medical Council) ಅರ್ಜಿ ಸಲ್ಲಿಸಬೇಕು. ವ್ಯಾಲಿಡಿಟಿ ಮುಗಿಯುವುದಕ್ಕೆ ಮೂರು ತಿಂಗಳು ಇರುವಾಗಲೇ ಅರ್ಜಿ ಸಲ್ಲಿಸಬೇಕು ಎಂದಿದೆ.
ವೈದ್ಯರು ಈ ರೀತಿ ಲೈಸೆನ್ಸ್ ನವೀಕರಿಸಿಕೊಳ್ಳಲು ಯಾವುದೇ ಶುಲ್ಕ ನೀಡಬೇಕಿಲ್ಲ ಎಂದು ಅಧಿಸೂಚನೆ ತಿಳಿಸಿದೆ. ಲೈಸೆನ್ಸ್ ರದ್ದಾದರೆ ಅದನ್ನು ಎಥಿಕ್ಸ್ & ಮೆಡಿಕಲ್ ರೆಗ್ಯುಲೇಶನ್ ಬೋರ್ಡ್‌ನಲ್ಲಿ ಪ್ರಶ್ನಿಸಬಹುದು ಎಂದು ತಿಳಿಸಿದೆ.