Site icon Vistara News

Amit Shah On Nehru | ಚೀನಾ ಮೇಲೆ ನೆಹರು ಪ್ರೀತಿಯಿಂದ ಭಾರತದ ಕೈತಪ್ಪಿದ ವಿಶ್ವಸಂಸ್ಥೆ ಕಾಯಂ ಸದಸ್ಯತ್ವ, ಶಾ ವಾಗ್ದಾಳಿ

Amit Shah in karnataka

ನವದೆಹಲಿ: ಅರುಣಾಚಲ ಪ್ರದೇಶದ ಗಡಿಯಲ್ಲಿ ಭಾರತ ಹಾಗೂ ಚೀನಾ ಸೈನಿಕರ ಮಧ್ಯೆ ಸಂಘರ್ಷ ಉಂಟಾಗಿದೆ. ಚೀನಾ ಸೈನಿಕರ ದಾಳಿ ಕುರಿತು ಸಂಸತ್ತಿನಲ್ಲಿ ಚರ್ಚೆ ಮಾಡಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸುತ್ತಿದೆ. ಇದರ ಮಧ್ಯೆಯೇ, ಚೀನಾ ವಿಷಯವನ್ನು ಮುಂದಿಟ್ಟುಕೊಂಡು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು (Amit Shah On Nehru) ನೆಹರು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ದೇಶದ ಮೊದಲ ಪ್ರಧಾನಿ ಜವಾಹರ ಲಾಲ್‌ ನೆಹರು ಅವರಿಗೆ ಚೀನಾ ಮೇಲೆ ವಿಶೇಷ ಪ್ರೀತಿ ಇತ್ತು. ಇದೇ ಕಾರಣಕ್ಕಾಗಿ, ಭಾರತವು ವಿಶ್ವಸಂಸ್ಥೆಯಲ್ಲಿ ಕಾಯಂ ಸದಸ್ಯತ್ವವನ್ನು ತ್ಯಾಗ ಮಾಡಬೇಕಾಯಿತು” ಎಂದು ಹೇಳುವ ಮೂಲಕ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.

“ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರ್ಕಾರವಿದೆ. ಭಾರತದ ಒಂದೇ ಒಂದು ಜಾಗವನ್ನು ಬೇರೆಯವರಿಗೆ ಬಿಟ್ಟುಕೊಡುವುದಿಲ್ಲ. ಚೀನಾ ರಾಯಭಾರ ಕಚೇರಿಯಿಂದ ರಾಜೀವ್‌ ಗಾಂಧಿ ಫೌಂಡೇಷನ್‌ಗೆ ಹಣ ಬಂದಿದೆ. ಇದನ್ನು ಮರೆಮಾಚುವ ದಿಸೆಯಲ್ಲಿ ಕಾಂಗ್ರೆಸ್‌, ಚೀನಾ ಸೈನಿಕರ ಜತೆಗಿನ ಸಂಘರ್ಷದ ವಿಷಯ ಪ್ರಸ್ತಾಪಿಸಿದೆ” ಎಂದಿದ್ದಾರೆ.

ಇದನ್ನೂ ಓದಿ | ವಿಸ್ತಾರ Explainer | ಭಾರತದ ಜತೆ ಚೀನಾ ಗಡಿ ಕಿರಿಕ್‌; ಏನಿದರ ಹಿನ್ನೆಲೆ?

Exit mobile version