ಲಖನೌ: ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಜತೆಗೆ ಸಂಪರ್ಕ ಹೊಂದಿರುವ ಉತ್ತರ ಪ್ರದೇಶದ ಸಬಾವುದ್ದೀನ್ ಅಜ್ಮಿ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಈತ ಸ್ವಾತಂತ್ರ್ಯ ದಿನದಂದು ಭಾರಿ ದಾಳಿ ನಡೆಸಲು ಯೋಜನೆ ಹಾಕಿದ್ದ ಎಂದು ಗೊತ್ತಾಗಿದೆ. ಮಾತ್ರವಲ್ಲದೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ನಾಯಕರೊಬ್ಬರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಎಂದೂ ಉನ್ನತ ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.
ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಮುಖಂಡರು ಈತನಿಗೆ, ಆರೆಸ್ಸೆಸ್‌ನ ಉನ್ನತ ಹುದ್ದೆಯಲ್ಲಿದ್ದವರೊಬ್ಬರನ್ನು ಮುಗಿಸಲು ಸೂಚಿಸಿದ್ದರು. ಈತ ಹ್ಯಾಂಡ್ ಗ್ರೆನೇಡ್ ತಯಾರಿಸಲು, ಬಳಸಲು ಕಲಿಯುತ್ತಿದ್ದ. ಮಾತ್ರವಲ್ಲದೆ, ಇನ್ನಷ್ಟು ಮಂದಿಯನ್ನು ಐಎಸ್ ಸಂಘಟನೆಗೆ ಸೇರಿಸಲು ಪ್ರಯತ್ನಿಸುತ್ತಿದ್ದ. ಈತನಿಗೆ ಸೈದ್ಧಾಂತಿಕ ಹಾಗೂ ಹಣದ ನೆರವು ಪಾಕಿಸ್ತಾನ, ಸಿರಿಯಾ, ಇರಾಕ್‌ನಿಂದಲೂ ಬರುತ್ತಿದ್ದ ಬಗ್ಗೆ ಮಾಹಿತಿಗಳು ಲಭ್ಯವಾಗಿವೆ ಎಂದು ಉತ್ತರ ಪ್ರದೇಶದ ಭಯೋತ್ಪಾದನೆ ತಡೆ ದಳ (ಎಟಿಎಸ್) ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Kashmir Drugs | ಕಾಶ್ಮೀರದಲ್ಲಿ ಮಾದಕದ್ರವ್ಯಗಳ ಭಯೋತ್ಪಾದನೆ!