Site icon Vistara News

UP Municipal Election Result: ಉತ್ತರ ಪ್ರದೇಶ ನಗರ ಪಾಲಿಕೆ ಚುನಾವಣೆ; ಎಲ್ಲ 17 ಪಾಲಿಕೆ ಬಿಜೆಪಿ ಪಾಲಿಗೆ

Yogi Adityanath

Yogi Adityanath's 'Ram Naam Satya' Warning To Those Involved In Crimes

ಲಖನೌ: ಉತ್ತರ ಪ್ರದೇಶದ ನಗರ ಪಾಲಿಕೆ ಚುನಾವಣೆಯಲ್ಲಿ (UP Municipal Election Result) ಬಿಜೆಪಿ ಕ್ಲೀನ್‌ ಸ್ವೀಪ್‌ ಮಾಡಿದೆ. ರಾಜ್ಯದ 17 ನಗರ ಪಾಲಿಕೆಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸುವ ಮೂಲಕ ರಾಜ್ಯದಲ್ಲಿ ತನ್ನ ಬಿಗಿ ಹಿಡಿತವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಇದರಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ವರ್ಚಸ್ಸು ಕೂಡ ಹೆಚ್ಚಾದಂತಾಗಿದೆ.

ಎಲ್ಲೆಲ್ಲಿ ಬಿಜೆಪಿಗೆ ಗೆಲುವು?

ಅಯೋಧ್ಯೆ, ಝಾನ್ಸಿ, ಬರೇಲಿ, ಮೊರಾದಾಬಾದ್‌, ಮಥುರಾ, ಸಹರಾನ್‌ಪುರ, ಆಗ್ರಾ, ಅಲಿಗಢ, ಗೋರಖ್‌ಪುರ, ಕಾನ್ಪುರ, ಲಖನೌ, ಮೊರಾದಾಬಾದ್‌, ವಾರಾಣಸಿ ಸೇರಿ ಎಲ್ಲ 17 ನಗರ ಪಾಲಿಕೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇನ್ನು ಆಯಾ ಪಾಲಿಕೆಯ ವಾರ್ಡ್‌ಗಳಲ್ಲಿ ಕೂಡ ಹೆಚ್ಚಿನ ಅಭ್ಯರ್ಥಿಗಳು ಬಿಜೆಪಿಯವರೇ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ನಾಯಕರಿಂದ ಯೋಗಿ ಆದಿತ್ಯನಾಥ್‌ಗೆ ಸನ್ಮಾನ

ಇದನ್ನೂ ಓದಿ: ದೇಶದ 5 ಕ್ಷೇತ್ರದಲ್ಲಿ ಉಪಚುನಾವಣೆ; ಪಂಜಾಬ್‌ನಲ್ಲಿ ಆಪ್‌ ಬಿಗಿ ಹಿಡಿತ, ಉತ್ತರ ಪ್ರದೇಶದಲ್ಲಿ ಬಿಜೆಪಿ ಮೈತ್ರಿಗೆ ಮುನ್ನಡೆ

ಉತ್ತರ ಪ್ರದೇಶ ನಗರ ಪಾಲಿಕೆ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಪ್ರತಿಕ್ರಿಯಿಸಿದ್ದು, “ರಾಜ್ಯದಲ್ಲಿ ಡಬಲ್‌ ಎಂಜಿನ್‌ ಸರ್ಕಾರವು ಅಭಿವೃದ್ಧಿಗೆ ನಾಂದಿ ಹಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಿಂದಾಗಿ ನಾವು ರಾಜ್ಯದಲ್ಲಿ ಅಭಿವೃದ್ಧಿ ಮಾಡುತ್ತಿದ್ದೇವೆ. ಇದೇ ಕಾರಣಕ್ಕಾಗಿ ಜನ ನಮಗೆ ಬೆಂಬಲ ನೀಡುತ್ತಿದ್ದಾರೆ” ಎಂದು ಹೇಳಿದ್ದಾರೆ.

Exit mobile version