Site icon Vistara News

Video Viral: ಯುವಕನ ಸೊಂಟಕ್ಕೆ ನಾಡ ಪಿಸ್ತೂಲ್! ಉತ್ತರ ಪ್ರದೇಶ ಪೊಲೀಸರ ರೇಡ್ ಡ್ರಾಮಾ

UP Police arrested accused

ನವದೆಹಲಿ: ಉತ್ತರ ಪ್ರದೇಶದ ಪೊಲೀಸರು (UP Police) ಯುವಕನೊಬ್ಬನನ್ನು ನಾಟಕೀಯವಾಗಿ ಬಂಧಿಸಿ, ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Video Viral) ಆಗಿದ್ದು, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಸಿಂಗ್ ಯಾದವ್ (Akhilesh Yadav) ಕೂಡ ಟಾಂಗ್ ನೀಡಿದ್ದಾರೆ. ಈ ವಿಡಿಯೋ ಮೂಲಕ, ಉತ್ತರ ಪ್ರದೇಶದಲ್ಲಿ ಪೊಲೀಸ್ ಆ್ಯಕ್ಷನ್‌ಗಳು ಪೂರ್ವಲಿಖಿತವಾಗಿರುತ್ತವೆ ಮತ್ತು ನಾಟಕೀಯವಾಗಿ ಹೇಗೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಕಾನ್ಪುರ ಪೊಲೀಸರು ದಾಳಿಯ ಸಮಯದಲ್ಲಿ ವ್ಯಕ್ತಿಯನ್ನು ಬಂಧಿಸಿದ ವೀಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದರು. ಆದರೆ, ಈ ವಿಡಿಯೋದಲ್ಲಿ ಅವರ ನಾಟಕೀಯ ಬಂಧನದ ಒಟ್ಟು ಕ್ರಿಯೆ ಈಗ ನಗೆಪಾಟಲುಗೀಡಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಫುಲ್ ವೈರಲ್ ಆಗಿದೆ.

ಮಾಜಿ ಸಿಎಂ ಅಖಿಲೇಶ್ ಯಾದವ್ ಷೇರ್ ಮಾಡಿರುವ ವಿಡಿಯೋ

ವಿಡಿಯೋ ಚಿತ್ರಿಕರಿಸುತ್ತಿರುವ ವ್ಯಕ್ತಿಯು, ಆತನ ಕೈಯನ್ನು ಸರಿಯಾಗಿ ಹಿಡ್ಕೊಳ್ಳಿ. ನಾನು ವಿಡಿಯೋ ಮಾಡ್ತಾ ಇರುವೆ ಎಂದು ಹೇಳುವುದನ್ನು ಕೇಳಿಸಿಕೊಳ್ಳಬಹುದು. ಇದೇ ವೇಳೆ, ನೀನು ವಿಡಿಯೋ ಮಾಡು. ನಾನು ಅವನನ್ನು ಹಿಡಿದುಕೊಳ್ಳುತ್ತೇನೆ ಎಂದು ಪೊಲೀಸ್ ಅಧಿಕಾರಿಯ ಮಾತುಗಳು ಕೂಡ ವಿಡಿಯೋದಲ್ಲಿ ದಾಖಲಾಗಿವೆ. ನಾಡ ಪಿಸ್ತೂಲ್‌ವನ್ನು ಇಬ್ಬರ ಪೈಕಿ ಒಬ್ಬ ಪೊಲೀಸ್, ಆರೋಪಿಯ ಸೊಂಟಕ್ಕೆ ಸಿಗಿಸಿ ವಿಡಿಯೋಗೆ ಪೋಸ್ ನೀಡುವುದನ್ನು ಕಾಣಬಹುದಾಗಿದೆ. ಮತ್ತೊಬ್ಬ ಪೊಲೀಸ್ ಆರೋಪಿಯ ಎರಡೂ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿರುವುದನ್ನು ಕಾಣಬಹುದು. ಈ ವಿಡಿಯೋ ಪೊಲೀಸರ ಒಟ್ಟು ನಾಟಕೀಯತೆಯನ್ನು ಹೊರ ಹಾಕಿದ್ದು, ನೆಟ್ಟಿಗರು ಫುಲ್ ಟ್ರೋಲ್ ಮಾಡಿದ್ದಾರೆ. ಪಿಸ್ತೂಲ್ ವಶಪಡಿಸಿಕೊಳ್ಳುವ ಮೊದಲು ಪೊಲೀಸ್ ಅಧಿಕಾರಿಗಳು ಫೋನ್‌ನಲ್ಲಿ ಬಂಧನವನ್ನು ಸೆರೆಹಿಡಿಯಲು ವೀಡಿಯೊ ಮಾಡುವ ವ್ಯಕ್ತಿಗಾಗಿ ಕಾಯುತ್ತಾರೆ. ವಿಡಿಯೋದಲ್ಲಿ ಆರೋಪಿಯ ಹೆಸರು ಮತ್ತು ಪಿಸ್ತೂಲ್ ಇಡಲು ಕಾರಣ ಕೇಳುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Video Viral: ಬಿಪರ್‌ಜಾಯ್ ಚಂಡಮಾರುತದಲ್ಲಿ 4 ದಿನದ ಕೂಸು ರಕ್ಷಿಸಿದ ಮಹಿಳಾ ಪೊಲೀಸ್!

ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿಯೂ ಆಗಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು, ಆಡಳಿತಗಾರರೇ ಪಿಸ್ತೂಲ್ ಹಿಡಿದು ಇತರರ ಜೀವಕ್ಕೆ ಬೆದರಿಕೆ ಹಾಕಿದಾಗ, ಸಾಮಾನ್ಯ ಜನರು ಭಯಭೀತರಾಗುತ್ತಾರೆ ಮತ್ತು ತಮ್ಮ ಸುರಕ್ಷತೆಗಾಗಿ ಪಿಸ್ತೂಲ್ ಹಿಡಿದುಕೊಳ್ಳಲು ಪ್ರಾರಂಭಿಸುತ್ತಾರೆ. ಈ ವೀಡಿಯೊದಲ್ಲಿ, ಪೊಲೀಸರ ನಾಟಕೀಯ ವಿಧಾನವು ಪೂರ್ವ ಲಿಖಿತವಾಗಿದೆ ಎಂಬುದನ್ನು ಸೂಚಿಸುತ್ತದೆ. ಸಾರ್ವಜನಿಕರು ಈ ನಕಲಿ ನಾಟಕವನ್ನು ಈ ಹಿಂದೆ ನೋಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು ಕುತೂಹಲಕರ ವೈರಲ್ ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version