ನವದೆಹಲಿ: 2024ರ ಸಾಲಿನ ನಾಗರಿಕ ಸೇವೆಗಳ (Civil Services Preliminary examination CSE) ಪ್ರಿಲಿಮಿನರಿ ಪರೀಕ್ಷೆಯ ಅಧಿಸೂಚನೆಯನ್ನು ಕೇಂದ್ರ ಲೋಕ ಸೇವಾ ಆಯೋಗವು (Union Public Service Commission UPSC) ಫೆ.14, ಬುಧವಾರ ಹೊರಡಿಸಿದೆ. ಇದರ ಜತೆಗೆ, ಭಾರತೀಯ ಅರಣ್ಯ ಸೇವೆ(IFS) ಪ್ರಿಲಿಮ್ಸ್ ಪರೀಕ್ಷೆಗೂ ನೋಟಿಫಿಕೇಷನ್ ಹೊರಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕುರಿತಾದ ಮಾಹಿತಿಯನ್ನು upsc.gov.in ಮತ್ತು upsconline.nic.in ಜಾಲತಾಣಗಳಲ್ಲಿ ಪರೀಕ್ಷಿಸಬಹುದು.
ಅಪ್ಲಿಕೇಷನ್ ವಿಂಡೋ ಮಾರ್ಚ್ 5ರವರೆಗೂ ತೆರಯಿಲದ್ದು, ಯುಪಿಎಸ್‌ಸಿ ಸಿಎಸ್ಇ 2024ರ ಮೂಲಕ ಸುಮಾರು 1,056 ಹುದ್ದೆಗಳನ್ನು ಭರ್ತಿ ಮಾಡಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಹುದ್ದೆಗಳ ನೇಮಕಾತಿಯಲ್ಲಿ ಇಳಿಕೆಯಾಗಿದೆ.
ಅಧಿಸೂಚನೆಯಲ್ಲಿ, ಅಭ್ಯರ್ಥಿಗಳು ಖಾಲಿ ಹುದ್ದೆಗಳು, ಅರ್ಹತೆ, ಪರೀಕ್ಷೆ ಮತ್ತು ಆಯ್ಕೆ ಪ್ರಕ್ರಿಯೆ ಇತ್ಯಾದಿಗಳ ಕುರಿತು ಹೆಚ್ಚಿನ ವಿವರಗಳನ್ನು ಪರಿಶೀಲಿಸಬಹುದು. ಅಪ್ಲಿಕೇಷನ್ ನೋಂದಣಿ ಮಾಡುವಾಗ ಅಭ್ಯರ್ಥಿಗಳ ಫೋಟೋ ಇತ್ತೀಚಿನದ್ದಾಗಿರಬೇಕು. ಅಂದರೆ, ಅಪ್ಲಿಕೇಷನ್ ಪ್ರಕ್ರಿಯೆ ಆರಂಭವಾದ ದಿನದಿಂದ 10 ಹುತ್ತು ದಿನಗಳೊಳಗಿಂದ ಇರಬೇಕು ಎಂದು ನಿಯಮ ಮಾಡಲಾಗಿದೆ.
ಅಭ್ಯರ್ಥಿಯ ಹೆಸರು ಮತ್ತು ಫೋಟೋವನ್ನು ಸೆರೆ ಹಿಡಿದ ದಿನಾಂಕದ ಮಾಹಿತಿಯನ್ನು ಎಚ್ಚರಿಕೆಯಿಂದ ನಮೋದಿಸಬೇಕು. ಛಾಯಾಚಿತ್ರದಲ್ಲಿ ಅಭ್ಯರ್ಥಿಯ ಮುಖವು 3/4 ರಷ್ಟು ಜಾಗವನ್ನು ಆಕ್ರಮಿಸಬೇಕು.
ಅಭ್ಯರ್ಥಿಯ ನೋಟವು ಪ್ರತಿ ಹಂತದಲ್ಲಿ ಛಾಯಾಚಿತ್ರದೊಂದಿಗೆ ಹೊಂದಿಕೆಯಾಗಬೇಕು – ಪ್ರಿಲಿಮ್ಸ್, ಮುಖ್ಯ (ಲಿಖಿತ) ಮತ್ತು ಸಂದರ್ಶನ/ವ್ಯಕ್ತಿತ್ವ ಪರೀಕ್ಷೆಗೂ ಹೊಂದಾಣಿಕೆಯಾಗಬೇಕು. ಉದಾಹರಣೆಗೆ, ಅಭ್ಯರ್ಥಿಯು ಗಡ್ಡವಿರುವ ಛಾಯಾಚಿತ್ರವನ್ನು ಅಪ್‌ಲೋಡ್ ಮಾಡಿದರೆ, ಅವನು ಪ್ರತಿ ಹಂತದಲ್ಲೂ ಅದೇ ನೋಟದಲ್ಲಿ ಕಾಣಿಸಿಕೊಳ್ಳಬೇಕು. ಕನ್ನಡಕ, ಮೀಸೆ ಇತ್ಯಾದಿಗಳಿಗೂ ಇದು ಅನ್ವಯಿಸುತ್ತದೆ ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು upsc.gov.in ಮತ್ತು upsconline.nic.in ಜಾಲತಾಣಗಳಲ್ಲಿ ಪರೀಕ್ಷಿಸಬಹುದು.
ಈ ಸುದ್ದಿಯನ್ನೂ ಓದಿ: Viral News: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕೇಳಲಾಗಿದ್ದ ಈ ಪ್ರಶ್ನೆಗೆ ನಿಮಗೆ ಉತ್ತರ ಗೊತ್ತಾ?-ತಲೆ ಕೆಡಿಸಿದ ಅಳಿಲು