Site icon Vistara News

UPSC Mains Result 2023: ಯುಪಿಎಸ್ಸಿ ಮುಖ್ಯ ಪರೀಕ್ಷೆಯ ರಿಸಲ್ಟ್ ಪ್ರಕಟ; ಚೆಕ್ ಮಾಡ್ಕೊಳ್ಳಿ

UPSC 2024 Notification, CSE Prelims Exam for 1056 vacancies

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ ನಡೆಸಿದ (UPSC) ನಾಗರಿಕ ಸೇವಾ ಮುಖ್ಯ ಪರೀಕ್ಷೆಗಳ ಫಲಿತಾಂಶವನ್ನು ಡಿಸೆಂಬರ್ 8, ಶುಕ್ರವಾರ ಪ್ರಕಟಿಸಲಾಗಿದೆ(Civil Services mains result 2023). ಪರೀಕ್ಷೆ ಬರೆದ ಅಭ್ಯರ್ಥಿಗಳು ಯುಪಿಎಸ್ಸಿಯ ಅಧಿಕೃತ ಜಾಲತಾಣ upsc.gov.inಕ್ಕೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಬಹುದು. ಕೇಂದ್ರ ಲೋಕಸೇವಾ ಆಯೋಗವು ಪ್ರಸಕ್ತ ಸಾಲಿನ ಮುಖ್ಯ ಪರೀಕ್ಷೆಯನ್ನು 2023 ಸೆಪ್ಟೆಂಬರ್ 15, ಸೆಪ್ಟೆಂಬರ್ 24ರ ವರೆಗೆ ನಡೆಸಿತ್ತು(UPSC Mains Result 2023).

2023ರ ಸೆಪ್ಟೆಂಬರ್ 15ರಿಂದ 24ರವರೆಗೆ ಕೇಂದ್ರ ಲೋಕಸೇವಾ ಆಯೋಗವು 2023ರ ಸಾಲಿನ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯನ್ನು ಕೈಗೊಂಡಿತ್ತು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಪರ್ನಾಲಿಟಿ ಟೆಸ್ಟ್ (ಸಂದರ್ಶನ)ಗೆ ಆಯ್ಕೆಯಾಗಿರುತ್ತಾರೆ. ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಇತರ ಕೇಂದ್ರ ಸೇವೆಗಳಿಗೆ (ಗುಂಪು ‘ಎ’ ಮತ್ತು ಗುಂಪು ‘ಬಿ’) ಆಯ್ಕೆಗಾಗಿ ವ್ಯಕ್ತಿತ್ವ ಪರೀಕ್ಷೆಯನ್ನು ಸಂದರ್ಶನ ನಡೆಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಯುಪಿಎಸ್ಸಿ ರಿಸಲ್ಟ್ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ದಿಲ್ಲಿಯ ಶಹಜಹಾನ್ ರಸ್ತೆಯಲ್ಲಿರುವ ಧೋಲ್ಪುರ್ ಹೌಸ್‌ನಲ್ಲಿ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನವನ್ನು ನಡೆಸಲಾಗುತ್ತದೆ. ಸಂದರ್ಶನದ ದಿನಾಂಕಗಳನ್ನು ಸರಿಯಾದ ಸಮಯದಲ್ಲಿ ಪ್ರಕಟಿಸಲಾಗುವುದು. ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆಗಳ ಇ ಸಮ್ಮನ್ ಪತ್ರಗಳು ಆಯೋಗದ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿ ಕೊಳ್ಳಬಹುದು.

UPSC Mains Result 2023: ಯುಪಿಎಸ್ಸಿ ಮೇನ್ ರಿಸಲ್ಟ್ ತಿಳಿಯುವುದು ಹೇಗೆ?

-ಯುಪಿಎಸ್ಸಿಯ ಅಧಿಕೃತ upsc.gov.in ವೆಬ್‌ಸೈಟ್‌ ಹೋಗಿ
-ಮುಖಪುಟದಲ್ಲಿ ಕಾಣುವ ಯುಪಿಎಸ್ಸಿ ಮೇನ್ಸ್ ರಿಸಲ್ಟ್ 2023 ಲಿಂಕ್ ಮೇಲೆ ಕ್ಲಿಕ್ ಮಾಡಿ.
-ಆಗ ಹೊಸ ಪಿಡಿಎಫ್ ಫೈಲ್ ತೆರೆದುಕೊಳ್ಳುತ್ತದೆ. ಆಗ ಅಭ್ಯರ್ಥಿಗಳು ತಮ್ಮ ರೋಲ್ ನಂಬರ್‌ಗಳ ಮೂಲಕ ಫಲಿತಾಂಶವನ್ನು ತಿಳಿದುಕೊಳ್ಳಬಹುದು.
-ಮುಂದಿನ ಅಗತ್ಯಗಳಿಗೆ ಹಾರ್ಡ್ ಕಾಪಿ ಡೌನ್‌ಲೋಡ್ ಮಾಡಿಕೊಳ್ಳಬೇಕು.

ಈ ಸುದ್ದಿಯನ್ನೂ ಓದಿ: UPSC Result 2022: ಯುಪಿಎಸ್ಸಿ ಪಾಸಾದವರಿಗೆ ಮೋದಿ ಅಭಿನಂದನೆ; ತೇರ್ಗಡೆ ಆಗದಿರುವವರಿಗೂ ಸಂದೇಶ

Exit mobile version