ನವದೆಹಲಿ: ನಕಲಿ ಔಷಧಗಳ (Fake Medicine) ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರವು (Central Government), ಆಗಸ್ಟ್ 1ರಿಂದ ವಿಶಿಷ್ಟ ಟ್ರ್ಯಾಕ್ ಆ್ಯಂಡ್ ಟ್ರೇಸ್ ಕ್ರಮವನ್ನು ಜಾರಿಗೆ ತಂದಿದೆ. ಜನರು ಇನ್ನು ಮುಂದೆ ತಾವು ಖರೀದಿಸಿದ ಔಷಧವು ಅಸಲಿಯೋ ನಕಲಿಯೋ ಎಂಬುದನ್ನು ಸರಳವಾಗಿ ಪತ್ತೆಹಚ್ಚಬಹುದಾಗಿದೆ. ಖರೀದಾದರರು ಕ್ಯೂಆರ್ ಕೋಡ್ (QR Code) ಬಳಸಿಕೊಂಡ ಔಷಧದ ಸಾಚಾತನವನ್ನು ತಿಳಿಯಬಹುದಾಗಿದೆ.
ಆಗಸ್ಟ್ 1ರಿಂದ ಜಾರಿಗೆ ಬರಲಿರುವ ಈ ಟ್ರ್ಯಾಕ್ ಆ್ಯಂಡ್ ಟ್ರೇಸ್ ಕ್ರಮವು ಖರೀದಿದಾರರಿಗೆ ನೆರವು ಒದಗಿಸಲಿದೆ. ಒಂದು ವೇಳೆ, ತಾವು ಖರೀದಿಸಿದ ಔಷಧದ ಸಾಚಾತನದ ಬಗ್ಗೆ ಅನುಮಾನ ಬಂದರೆ, ಪ್ಯಾಕೇಜಿಂಗ್ ಮೇಲೆ ಪ್ರಿಂಟ್ ಮಾಡಲಾಗಿರುವ ಕ್ಯೂಆರ್ ಕೋಡ್ ಮೂಲಕ ಅದರ ಅಸಲಿಯತ್ತನ್ನು ತಿಳಿದುಕೊಳ್ಳಬಹುದಾಗಿದೆ. ಒಮ್ಮೆ ನೀವು ಔಷಧ ಮೇಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ, ಆ ಔಷಧದ ಸಂಪೂರ್ಣ ಮಾಹಿತಿಯು ದೊರೆಯಲಿದೆ. ಅಂದರೆ, ಔಷಧ ಉತ್ಪಾದನೆಯ ಅನುಮತಿ, ಬ್ಯಾಚ್ ನಂಬರ್ ಸೇರಿದಂತೆ ಇನ್ನಿತರ ಮಾಹಿತಿಯನ್ನು ಬಳಕೆದಾರರು ತಿಳಿದುಕೊಳ್ಳಬಹುದಾಗಿದೆ.
ಆಗಸ್ಟ್ 1ರಿಂದ ಮೊದಲ ಹಂತದ ಕ್ರಮವು ಜಾರಿಯಾಗಲಿದೆ. ಈ ವೇಳೆ, ಸುಮಾರು ಟಾಪ್ ಸೆಲ್ಲಿಂಗ್ 300 ಮೆಡಿಸಿನ್‌ಗಳ ಮೇಲೆ ಕ್ಯೂಆರ್ ಕೋಡ್ ಇರಲಿದೆ. ಒಟ್ಟಾರೆ ಫಾರ್ಮಾ ಮಾರುಕಟ್ಟೆಯು ಸುಮಾರು 50 ಸಾವಿರ ಕೋಟಿ ವಹಿವಾಟು ನಡೆಸುತ್ತಿದ್ದು, ಇದರಲ್ಲಿ ಆಂಟಿಬಯಾಟಿಕ್ಸ್, ಹೃದಯ ಸಂಬಂಧಿ ಮಾತ್ರೆಗಳು, ನೋವು ನಿವಾರಕ ಮಾತ್ರೆಗಳು, ಮಧುಮೇಹ ವಿರೋಧ ಮತ್ತು ಅಲರ್ಜಿ ವಿರೋಧಿ ಔಷಧಗಳ ಮಾರಾಟವು ಸೇರಿದೆ. ಆಂಟಿ-ಡಯಾಬಿಟಿಕ್ಸ್ ಮಿಕ್ಸ್‌ಟಾರ್ಡ್ ಮತ್ತು ಗ್ಲೈಕೋಮೆಟ್-ಜಿಪಿ, ಆ್ಯಂಟಿಬಯೋಟಿಕ್ಸ್ ಆಗ್ಮೆಂಟಿನ್ ಮತ್ತು ಮೊನೊಸೆಫ್ ಮತ್ತು ಗ್ಯಾಸ್ಟ್ರೊ ಮೆಡಿಸಿನ್ ವ್ಯಾಪಾರವು ದೇಶೀಯ ಚಿಲ್ಲರೆ ಮಾರುಕಟ್ಟೆಯಲ್ಲಿ 2 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಾಗಿದೆ.
ಈ ಸುದ್ದಿಯನ್ನೂ ಓದಿ: DCGI : ನಕಲಿ ಔಷಧ ತಯಾರಿಸಿದ 18 ಕಂಪನಿಗಳ ಲೈಸೆನ್ಸ್ ರದ್ದು
ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಸಾಕಷ್ಟು ನಕಲಿ ಮತ್ತು ಕಡಿಮೆ ದರ್ಜೆಯ ಔಷಧಗಳು ದಾಂಗುಡಿ ಇಟ್ಟಿವೆ. ಈಗಾಗಲೇ ಇಂಥ ನಕಲಿ ಔಷಧಗಳನ್ನು ನಿಯಂತ್ರಕ ಏಜೆನ್ಸಿಗಳು ವಶಪಡಿಸಿಕೊಂಡಿವೆ. ಈ ಪೈಕಿ ಅಬ್ಬೋಟ್ಸ್ ಥೈರಾಯ್ಡ್ ಮೆಡಿಕೇಷನ್ ಥೈರೋನಾರ್ಮ್ ಔಷಧವು ಸೂಚಿಸಲಾದ ಗುಣಮಟ್ಟದ ಔಷಧವಲ್ಲ ಮತ್ತು ನಕಲಿಯಾಗಿದೆ ಎಂದು ಸಂಬಂಧಿಸಿದ ಏಜೆನ್ಸಿಗಳು ತಿಳಿಸಿವೆ. ಮತ್ತೊಂದು ಉದಾಹರಣೆಯನ್ನು ನೀಡುವುದಾದರೆ, ಗ್ಲೆನ್‌ಮಾರ್ಕ್‌ನ ರಕ್ತದೊತ್ತಡ ಸಂಬಂಧಿ ಮಾತ್ರೆ ತೆಲ್ಮಾ-ಎಚ್ ಕೂಡ ನಕಲಿಯಾಗಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.