Site icon Vistara News

Stray Cows In UP: ಉತ್ತರ ಪ್ರದೇಶದಲ್ಲಿ ವಿಧವೆಯರು, ಬಡವರಿಗಿಂತ ಬೀದಿ ಹಸುಗಳಿಗೆ ಹೆಚ್ಚು ಹಣ ಖರ್ಚು!

Yogi Adityanath With Cows

Uttar Pradesh Government gives more for stray cows food than pension to elderly, widows

ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ (Yogi Adityanath) ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗೋವುಗಳ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ. ಅದರಲ್ಲೂ, ಗೋಶಾಲೆಗಳನ್ನು ನಿರ್ಮಿಸಿ ಬೀದಿ ಹಸುಗಳಿಗೆ ಆಶ್ರಯ ನೀಡಲಾಗಿದೆ. ಇದರ ಕುರಿತು ಮೆಚ್ಚುಗೆಯೂ ವ್ಯಕ್ತವಾಗಿದೆ. ಆದರೆ, ಇತ್ತೀಚಿನ ಮಾಹಿತಿ ಪ್ರಕಾರ, ಉತ್ತರ ಪ್ರದೇಶದಲ್ಲಿ ವಿಧವರೆಯರು, ಬಡವರು ಹಾಗೂ ಹಿರಿಯ ನಾಗರಿಕರಿಗೆ ನೀಡುವ ಪಿಂಚಣಿಗಿಂತ ಸರ್ಕಾರವು ಬೀದಿ ಹಸುಗಳ (Stray Cows In UP) ಆಹಾರಕ್ಕೇ ಜಾಸ್ತಿ ಹಣ ಖರ್ಚು ಮಾಡುತ್ತಿದೆ ಎಂದು ತಿಳಿದುಬಂದಿದೆ.

ಹೌದು, ಉತ್ತರ ಪ್ರದೇಶದಲ್ಲಿ ಸರ್ಕಾರವು ಬಡವರು, ವಿಧವೆಯರು, 60 ವರ್ಷ ಮೇಲ್ಪಟ್ಟವರಿಗೆ ಮಾಸಿಕ 1 ಸಾವಿರ ರೂ. ಪಿಂಚಣಿ ನೀಡಲಾಗುತ್ತದೆ. ಆದರೆ, ರಾಜ್ಯ ಪಶು ಸಂಗೋಪನಾ ಇಲಾಖೆ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಂದು ಬೀದಿ ಬದಿ ಹಸುವಿನ ಆಹಾರಕ್ಕೆ ನಿತ್ಯ 50 ರೂ. ಅಥವಾ ಮಾಸಿಕ 1,500 ರೂ. ವ್ಯಯಿಸಲಾಗುತ್ತದೆ ಎಂದು ತಿಳಿದುಬಂದಿದೆ. ಇದು ಈಗ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ವಿಷಯವಾಗಿದೆ.

ಒಂದು ಹಸುವಿಗೆ ಇಷ್ಟು ಹಣ ಖರ್ಚು

ಉತ್ತರ ಪ್ರದೇಶದಲ್ಲಿ 13.7 ಲಕ್ಷ ಬೀದಿ ಬದಿ ಹಸುಗಳಿಗೆ 6,889 ಗೋ ಸಂರಕ್ಷಣಾ ಕೇಂದ್ರಗಳು ಸೇರಿ ಹಲವೆಡೆ ಆಶ್ರಯ ನೀಡಲಾಗಿದೆ. ಇವುಗಳಲ್ಲಿ 11.9 ಲಕ್ಷ ಗೋವುಗಳು ಗೋ ಸಂರಕ್ಷಣಾ ಕೇಂದ್ರಗಳಲ್ಲಿವೆ. 1.85 ಲಕ್ಷ ಗೋವುಗಳನ್ನು ಮುಖ್ಯಮಂತ್ರಿ ಸಹಭಾಗಿತಾ ಯೋಜನೆ ಅಡಿಯಲ್ಲಿ ರಕ್ಷಣೆ ಮಾಡಲಾಗುತ್ತಿದೆ. ಇವುಗಳ ಆಹಾರಕ್ಕೆ ರಾಜ್ಯ ಸರ್ಕಾರ ನಿತ್ಯ 50 ರೂ. ವ್ಯಯಿಸುತ್ತಿದೆ. ವರ್ಷಕ್ಕೆ ಬೀದಿ ಬದಿ ಗೋವುಗಳ ಆಹಾರಕ್ಕಾಗಿ 2,500 ಕೋಟಿ ರೂ. ವ್ಯಯಿಸಲಾಗುತ್ತಿದೆ ಎಂದು ಸರ್ಕಾರದ ಅಂಕಿ-ಅಂಶಗಳೇ ತಿಳಿಸಿವೆ.

ಇದನ್ನೂ ಓದಿ: Udhayanidhi Stalin: ಯೋಗಿ ರಾಜ್ಯ ಉತ್ತರ ಪ್ರದೇಶದಲ್ಲಿ ಉದಯನಿಧಿ, ಪ್ರಿಯಾಂಕ್ ಖರ್ಗೆ ವಿರುದ್ಧ ಬಿತ್ತು ಕೇಸ್!

ಯೋಗಿ ಆದಿತ್ಯನಾಥ್‌ ಸರ್ಕಾರವು ಹಿರಿಯ ನಾಗರಿಕರಿಗೆ ಮಾಸಿಕ 1 ಸಾವಿರ ರೂ. ಪಿಂಚಣಿ ನೀಡಲು 2022-23ರ ಬಜೆಟ್‌ನಲ್ಲಿ 6,069 ಕೋಟಿ ರೂ. ಮೀಸಲಿಟ್ಟಿದೆ. ಹಾಗೆಯೇ, ವಿಧವೆಯರ ಪಿಂಚಣಿಗೆ 3,299 ಕೋಟಿ ರೂ. ಮೀಸಲಿಟ್ಟಿದೆ. ಆದರೆ, ವಿಧವೆಯರು, ಬಡವರು, ಹಿರಿಯ ನಾಗರಿಕರಿಗೆ ನೀಡುವ ಪಿಂಚಣಿ ಹಣಕ್ಕಿಂತ ಹೆಚ್ಚು ಹಣವನ್ನು ಗೋವುಗಳ ರಕ್ಷಣೆಗಾಗಿಯೇ ವಿನಿಯೋಗಿಸುತ್ತಿರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ಜನರ ಕಡೆಗೂ ಮುಖ್ಯಮಂತ್ರಿಯವರು ಹೆಚ್ಚು ಗಮನಹರಿಸಬೇಕು ಎಂಬ ಆಗ್ರಹ ಕೇಳಿಬಂದಿವೆ.

Exit mobile version