ಲಖನೌ: ದೇಶದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ (Anti Conversion Law) ತರಬೇಕು ಎಂಬ ಆಗ್ರಹಗಳು ಆಗಾಗ ಕೇಳಿಬರುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ (Uttar Pradesh) ಕಂದಾಯ ಅಧಿಕಾರಿಯೊಬ್ಬರು ಅನುಮಾನಾಸ್ಪದವಾಗಿ ಇಸ್ಲಾಂ ಧರ್ಮಕ್ಕೆ (Officer Converted To Islam) ಮತಾಂತರಗೊಂಡಿದ್ದಾರೆ. ಇವರಿಗೆ ಈಗಾಗಲೇ ಹಿಂದು ಪತ್ನಿ ಇದ್ದು, ಈಗ ಮುಸ್ಲಿಂ ಮಹಿಳೆಯನ್ನು ಎರಡನೇ ಮದುವೆಯಾಗಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. “ನನ್ನ ಪತಿಯನ್ನು ಬಲವಂತವಾಗಿ ಮತಾಂತರಗೊಳಿಸಲಾಗಿದೆ” ಎಂದು ಮೊದಲ ಪತ್ನಿ ದೂರು ನೀಡಿದ್ದು, ಪೊಲೀಸರಿಗೆ ಪ್ರಕರಣವೀಗ ಕಗ್ಗಂಟಾಗಿದೆ.
ಹೌದು, ಮೌದಾಹದಲ್ಲಿ ಸೆಪ್ಟೆಂಬರ್ 2ರಂದು ನಾಯಬ್ ತಹಸೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡ ಆಶಿಶ್ ಗುಪ್ತಾ ಈಗ ಮೊಹಮ್ಮದ್ ಯೂಸುಫ್ ಆಗಿ ಬದಲಾಗಿದ್ದಾರೆ. ಕಾನ್ಪುರದ ನಿವಾಸಿಯಾಗಿರುವ ಇವರು ಸೆಪ್ಟೆಂಬರ್ 2ರಂದು ಪಟ್ಟಣದ ಕಚಾರಿಯಾ ಬಾಬಾ ಮಸೀದಿಯಲ್ಲಿ ಮುಸ್ಲಿಂ ಟೋಪಿ ಧರಿಸಿ, ದಿನವಿಡೀ ನಮಾಜ್ ಮಾಡಿದ್ದಾರೆ. ತಮ್ಮನ್ನು ಮೊಹಮ್ಮದ್ ಯೂಸುಫ್ ಎಂದು ಇವರು ಬೇರೆಯವರಿಗೆ ಪರಿಚಯ ಮಾಡಿಕೊಂಡಿದ್ದಾರೆ. ಇದಾದ ಕೆಲ ದಿನಗಳ ಬಳಿಕ ಇವರು ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣದ ಕುರಿತು ಪೊಲೀಸರಿಂದ ಮಾಹಿತಿ
आवेदिका द्वारा कोतवाली सदर में, अपने पति के विरुद्ध बिना तलाक लिए शादी करने एवं धर्म परिवर्तन करने की घटना के संबंध में पुलिस अधीक्षक हमीरपुर द्वारा दी गई बाइट। pic.twitter.com/QKQR5cwI8f
— HAMIRPUR POLICE (@hamirpurpolice) December 27, 2023
ಮೊದಲ ಪತ್ನಿಯ ಆರೋಪವೇನು?
“ನನ್ನ ಪತಿ ಆಶಿಶ್ ಗುಪ್ತಾ ಅವರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಲಾಗಿದೆ. ಇಸ್ಲಾಂಗೆ ಮತಾಂತರಿಸಿ, ಅವರ ಹೆಸರನ್ನು ಮೊಹಮ್ಮದ್ ಯೂಸುಫ್ ಎಂಬುದಾಗಿ ಬದಲಿಸಿ, ಬೇರೊಂದು ಮುಸ್ಲಿಂ ಯುವತಿ ಜತೆ ಮದುವೆ ಮಾಡಿಸಿದ್ದಾರೆ. ಮಸೀದಿಯ ಮೌಲ್ವಿ ಹಾಗೂ ಹಲವರು ಸೇರಿ ನನ್ನ ಪತಿಯನ್ನು ಬಲವಂತವಾಗಿ ಮತಾಂತರಗೊಳಿಸಿ, ಮದುವೆ ಮಾಡಿಸಿದ್ದಾರೆ” ಎಂದು ಆಶಿಶ್ ಗುಪ್ತಾ ಪತ್ನಿ ಆರತಿ ಯಜ್ಞಸೈನಿ ಅವರು ದೂರು ನೀಡಿದ್ದಾರೆ. ಆಶಿಶ್ ಗುಪ್ತಾ, ಮಸೀದಿಯ ಮೌಲ್ವಿ ಸೇರಿ ಹಲವರ ವಿರುದ್ಧ ಆರತಿ ಯಜ್ಞಸೈನಿ ಕೇಸ್ ದಾಖಲಿಸಿದ್ದಾರೆ.
ಇದನ್ನೂ ಓದಿ: Conversion Attempt : ಅಂಗನವಾಡಿ ಶಿಕ್ಷಕಿಯಿಂದ ಮತಾಂತರ; ಪುಟ್ಟ ಮಕ್ಕಳೇ ಟಾರ್ಗೆಟ್
“ನನ್ನ ಪತಿಯನ್ನು ಅನೈತಿಕವಾಗಿ ಮುನ್ನಾ ಎಂಬುವರ ಪುತ್ರಿಯಾದ ರುಕ್ಸಾರ್ ಎಂಬುವಳ ಜತೆ ಮದುವೆ ಮಾಡಿಸಲಾಗಿದೆ” ಎಂದು ಕೂಡ ಆರತಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮತ್ತೊಂದು ಮೂಲಗಳ ಪ್ರಕಾರ, ನಾಯಬ್ ತಹಸೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಸತತವಾಗಿ ಮಸೀದಿಗೆ ತೆರಳಿ ನಮಾಜ್ ಮಾಡುತ್ತಿದ್ದರು. ಇದೇ ವೇಳೆ, ಮೌಲ್ವಿಗೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ, ಮೊಹಮ್ಮದ್ ಯೂಸುಫ್ ಎಂಬುದಾಗಿ ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದಾಗ ಇವರು ನಾಯಬ್ ತಹಸೀಲ್ದಾರ್ ಆಶಿಶ್ ಗುಪ್ತಾ ಎಂಬ ಮಾಹಿತಿ ಬಹಿರಂಗವಾಗಿದೆ ಎಂದು ತಿಳಿದುಬಂದಿದೆ.
ಅಷ್ಟೇ ಅಲ್ಲ, ಇವರು ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದು, ಆಕೆಯನ್ನು ಮದುವೆಯಾಗಲು ಮತಾಂತರಗೊಂಡಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬಂದಿವೆ. ಪೊಲೀಸರು ಈಗ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ