Site icon Vistara News

Police Meta Agreement: ಇಬ್ಬರ ಜೀವ ಉಳಿಸಿದ ಉತ್ತರ ಪ್ರದೇಶ ಪೊಲೀಸರು, ಫೇಸ್‌ಬುಕ್‌ ನಡುವಿನ ಒಪ್ಪಂದ, ಹೇಗೆ ಅಂತೀರಾ?

Police Meta Agreement

#image_title

ಲಖನೌ: ಸಾಮಾಜಿಕ ಜಾಲತಾಣಗಳು ಹಾಗೂ ಪೊಲೀಸರು ಸಮಾಜದ ಹಿತದೃಷ್ಟಿಯಿಂದ ಕೈಜೋಡಿಸಿದರೆ, ಆಧುನಿಕ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡರೆ ಅನುಕೂಲ ಎಂಬುದಕ್ಕೆ ಉತ್ತರ ಪ್ರದೇಶದಲ್ಲಿ ನಿದರ್ಶನ ದೊರೆತಿದೆ. ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾ ಹಾಗೂ ಉತ್ತರ ಪ್ರದೇಶದ ಪೊಲೀಸರು ಮಾಡಿಕೊಂಡ ಒಪ್ಪಂದದಿಂದಾಗಿ (Police Meta Agreement) ವಾರದಲ್ಲಿಯೇ ಇಬ್ಬರ ಜೀವ ಉಳಿದಿದೆ.

ಉತ್ತರ ಪ್ರದೇಶದ ಅಂಬೇಡ್ಕರ್‌ ನಗರ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಕಾಲೇಜು ವಿದ್ಯಾರ್ಥಿನಿ ಹಾಗೂ ಘಾಜಿಯಾಬಾದ್‌ ಜಿಲ್ಲೆಯಲ್ಲಿ ನೇಣು ಬಿಗಿದುಕೊಳ್ಳಲು ಮುಂದಾಗಿದ್ದ ವ್ಯಕ್ತಿಯನ್ನು ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಸಹಾಯದಿಂದ ಪೊಲೀಸರು ರಕ್ಷಿಸಿದ್ದಾರೆ. ಇದಕ್ಕೆ ಪೊಲೀಸರು ಹಾಗೂ ಮೆಟಾ ಜತೆಗೆ ಮಾಡಿಕೊಂಡ ಒಪ್ಪಂದವೇ ಕಾರಣವಾಗಿದೆ ಎಂಬುದು ಗಮನಾರ್ಹವಾಗಿದೆ.

ಏನಿದು ಒಪ್ಪಂದ?

ಮೆಟಾದ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಯಾವುದೇ ಆತ್ಮಹತ್ಯೆಗೆ ಯತ್ನ ಪ್ರಕರಣಗಳ ಕುರಿತು ಪೋಸ್ಟ್‌, ವಿಡಿಯೊ ಅಪ್‌ಲೋಡ್‌ ಮಾಡಿದರೆ, ಆ ಕುರಿತು ಪೊಲೀಸರಿಗೆ ಅಲರ್ಟ್‌ ನೀಡುವ ಒಪ್ಪಂದ ಇದಾಗಿದೆ. ಅದರಂತೆ, ಕಾಲೇಜು ವಿದ್ಯಾರ್ಥಿನಿಯು ತಾನು ಸೇವಿಸುವ ಮಾತ್ರೆಗಳ ಕುರಿತು ಪೋಸ್ಟ್‌ ಮಾಡಿದ್ದಳು. ವ್ಯಕ್ತಿಯು ನೇಣು ಹಾಕಿಕೊಳ್ಳುವುದರ ವಿಡಿಯೊ ಮಾಡಿದ್ದ. ಇವುಗಳ ಕುರಿತು ಜಾಲತಾಣಗಳು ಅಲರ್ಟ್‌ ಮಾಡಿದ ಕಾರಣ ಪೊಲೀಸರು ಕೂಡಲೇ ಇಬ್ಬರನ್ನೂ ರಕ್ಷಿಸಿದ್ದಾರೆ. ಒಪ್ಪಂದದ ಬಳಿಕ ಇದುವರೆಗೆ ೧೦ ಜನರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Padma Awards 2023: ಲಕ್ಷಾಂತರ ಮಂದಿಯ ಜೀವ ಉಳಿಸಿದ ಡಾ. ದಿಲೀಪ್‌ ಮಹಲ್‌ ನಬೀಸ್‌ಗೆ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿ

Exit mobile version