Site icon Vistara News

ಬದುಕುಳಿದು ಬಂದ ಕಾರ್ಮಿಕರಿಗೆ 1 ಲಕ್ಷ ಪರಿಹಾರ ಎಂದ ಉತ್ತರಾಖಂಡ ಸಿಎಂ ಧಾಮಿ

Uttarakhand CM announces rs 1 lakh rupees to trapped labourers Who rescued after 17 days

ನವದೆಹಲಿ: ಕಾರ್ಮಿಕರನ್ನು ರಕ್ಷಣೆ ಮಾಡಿ, ಅವರನ್ನು ಅವರ ಮನೆಗೆ ತಲುಪಿಸುವ ಟಾಸ್ಕ್ ಅನ್ನು ಪ್ರಧಾನಿ ನರೇಂದ್ರ ಮೋದಿ(PM Narendra Modi) ನನಗೆ ನೀಡಿದ್ದರು ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ (Uttarakhand CM Pushkar Singh Dhami) ಅವರು ಹೇಳಿದ್ದಾರೆ. ಕುಸಿದ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ಯಶಸ್ವಿ ರಕ್ಷಣಾ ಕಾರ್ಯಾಚರಣೆಯ (Uttarkashi Tunnel Rescue) ಬಳಿಕ ಸುದ್ದಿಗೋಷ್ಠಿ ಮಾತನಾಡಿದ ಸಿಎಂ ಧಾಮಿ ಅವರು, ರಕ್ಷಿಸಲಾಗಿರುವ ಎಲ್ಲ ಕಾರ್ಮಿಕರನ್ನು 24 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ನಿಗಾವಹಿಸಲಾಗುವುದು ಎಂದು ತಿಳಿಸಿದ್ದಾರೆ(Rescue Operation).

ರಕ್ಷಣಾ ಕಾರ್ಯಾಚರಣೆಯ ಕುರಿತಂತೆ ಕೇಂದ್ರ ಹೆದ್ದಾರಿ ಇಲಾಖೆ ಸಚಿವ ನಿತಿನ್ ಗಡ್ಕರಿ, ಸಚಿವರಾದ ವಿ ಕೆ ಸಿಂಗ್ ಸೇರಿದಂತೆ ಪ್ರಧಾನಿ ಕಾರ್ಯಾಲಯವು ನಿರಂತರವಾಗಿ ನಿಗಾ ವಹಿಸಿತ್ತು. ಕಾರ್ಯಾಚರಣೆಗಾಗಿ ಇಂದೋರ್‌, ಹೈದ್ರಾಬಾದ್‌ಗಳಿಂದ ಯಂತ್ರಗಳನ್ನು ತರಸಲಾಗಿತ್ತು. ದೆಹಲಿ ಸೇರಿದಂತೆ ಬೇರೆಕಡೆಯಿಂದ ಬಂದ ಎಲ್ಲಾ ಕಾರ್ಮಿಕರಿಗೆ ಧನ್ಯವಾದ ಎಂದು ಹೇಳಿ ಪುಷ್ಕರ ಸಿಂಗ್ ಧಾಮಿ ಹೇಳಿದರು.

ಕಾರ್ಯಾಚರಣೆಯ ಆರಂಭದಲ್ಲಿ ಆರಂಭಿಕ ಹಂತದಲ್ಲಿ ನಮಗೆ ತುಂಬಾ ಭಯವಾಗಿತ್ತು. ಯಾವಾಗ ಕಾರ್ಮಿಕರ ಜೊತೆ ಮಾತುಕತೆ ಮಾಡಿದ್ವೋ ಆಗ ನಮಗೆ ಭರವಸೆ ಬಂತು, ಮೊದಲು ಚಿಕ್ಕವರನ್ನ ಕರೆತರಲು ನಿರ್ಧಾರ ಮಾಡಿದ್ವಿ ನಂತರ ದೊಡ್ಡವರು ಟೀಂ ಲೀಡ್ ಮಾಡೊ ಐದು ಜನ ಬರಲು ನಿರ್ಧಾರ ಮಾಡಿದ್ರು. ಮೊದಲು ನನಗೆ ರಕ್ಷಣಾ ಕಾರ್ಯಾಚರಣೆ ನಿಂತಾಗ ಕರೆ ಬಂದಾಗ ಭಯವಾಗಿತ್ತು. ಸದ್ಯ ಈ ಎಲ್ಲರನ್ನ 24 ಗಂಟೆ ನಿಗಾದಲ್ಲಿ ಇಡಲಾಗುವುದು ಎಂದು ಸಿಎಂ ಧಾಮಿ ತಿಳಿಸಿದರು.

ಹೊರ ಬಂದ ಯಾವ ಕಾರ್ಮಿಕರು ಸಹ ತೊಂದರೆಯಲ್ಲಿಲ್ಲ, ಎಲ್ಲರು ಆರಾಮಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ದೇಶ ಮತ್ತು ವಿದೇಶದ ಹಲವಾರು ಜನ ಕಾರ್ಯದಲ್ಲಿ ಭಾಗಿಯಾಗಿದ್ದರು ಎಂದು ಧಾಮಿ ಹೇಳಿದರು.

ಮಂದಿರ ನಿರ್ಮಾಣಕ್ಕೆ ನಾವು ತೀರ್ಮಾನ ಮಾಡಿದ್ದೆವೆ. ದೆಹಲಿ ಮತ್ತು ಗೋರಕ್ ಪುರ್ ನಿಂದ ಬಂದಿರೊ ಕಾರ್ಮಿಕರಿಂದ ರ್ಯಾಟ್ ಮೈನಿಂಗ್ ರೀತಿಯಲ್ಲಿ ರಕ್ಷಣಾ ಕಾರ್ಯಾಚರಣೆ ಆಗಿದೆ. ದೀವಾಪಳಿಯ ಮಾರನೆ ದಿನದಿಂದ ನಾನು ನಿರಂತರವಾಗಿ ಇಲ್ಲೆ ಇದ್ದೆ. ಇಲ್ಲಿಂದಲೆ ನಾನು ರಾಜ್ಯದ ಇತರ ಕೆಲಸ ಮಾಡಿದ್ದೇನೆ ಎಂದು ಅವರು ತಿಳಿಸಿದರು.

ಕಾರ್ಮಿಕರಿಗೆ ತಲಾ 1 ಲಕ್ಷ ಪರಿಹಾರ

ರಾಜ್ಯ ಸರ್ಕಾರದಿಂದ ಎಲ್ಲಾ ಕಾರ್ಮಿಕರಿಗೆ ತಲಾ ಒಂದು ಲಕ್ಷ ಘೋಷಣೆ. ನಾಳೆ ಚೆಕ್ ಮೂಲಕ ಪರಿಹಾರ ನೀಡಲಾಗುವುದು. ಎಲ್ಲರಿಗೂ 15 ದಿನ ಅಥವಾ ಒಂದು ತಿಂಗಳು ಮನೆಗೆ ಹೋಗಲು ಅವಕಾಶ ನೀಡಲಾಗುವುದು. ರಕ್ಷಣಾ ಕಾರ್ಯಾಚರಣೆಯ ವೆಚ್ಚ ಎಷ್ಟೆ ಆದ್ರು ನಾವು ನೀಡಲು ತೀರ್ಮಾನಿಸಿದ್ವಿ. ಪ್ರಧಾನಿ ಮೋದಿ ಈ ಬಗ್ಗೆ ಸೂಚನೆ ನೀಡಿದ್ದರು. ನಮಗೆ ಕಾರ್ಮಿಕರ ಜೀವ ಮುಖ್ಯವಾಗಿತ್ತು ಎಂದು ಧಾಮಿ ಅವರು ತಿಳಿಸಿದರು.

ಈ ಸುದ್ದಿಯನ್ನೂ ಓದಿ: ಹೊರ ಬಂದರು ಸುರಂಗದಲ್ಲಿ ಸಿಲುಕಿದ್ದ ಎಲ್ಲ 41 ಕಾರ್ಮಿಕರು! ಫಲಿಸಿತು ಭಾರತೀಯರ ಪ್ರಾರ್ಥನೆ

Exit mobile version