ನೈನಿತಾಲ್: ಉತ್ತರಾಖಂಡದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಈ ನಡುವೆ, ನೈನಿಟಾಲ್ನ ರಾಮನಗರ ಸಮೀಪ ಉಕ್ಕಿ ಹರಿಯುತ್ತಿದ್ದ ಧೇಲಾ ನದಿಗೆ ಬಿದ್ದು ಒಂಬತ್ತು ಪ್ರವಾಸಿಗರು ಮೃತಪಟ್ಟಿದ್ದಾರೆ.
ಇವರು ಪಂಜಾಬ್ನ ಪಟಿಯಾಲ ಮೂಲದ ಪ್ರವಾಸಿಗರಾಗಿದ್ದು ನೈನಿತಾಲ್ಗೆ ಪ್ರವಾಸ ಬಂದಿದ್ದರು. ಮುಂಜಾನೆ ಅವರು ಪ್ರವಾಸ ಮುಗಿಸಿ ಪಂಜಾಬ್ಗೆ ಮರಳುತ್ತಿದ್ದಾಗ ಬೆಳಗ್ಗೆ ೫.೪೫ರ ಹೊತ್ತಿಗೆ ರಾಮನಗರದ ಬಳಿಕ ತುಂಬಿ ಹರಿಯುತ್ತಿದ್ದ ಧೇಲಾ ನದಿಗೆ ಬಿದ್ದಿದೆ. ನೀರು ವಿಪರೀತವಾಗಿದ್ದುದು ಮತ್ತು ವೇಗವಾಗಿ ಹರಿಯುತ್ತಿದ್ದುದರಿಂದ ಅದು ನೀರಿನಲ್ಲಿ ಕೊಚ್ಚಿ ಹೋಗಿದೆ.
ಕಾರು ನೀರಿನಲ್ಲಿ ಕೊಚ್ಚಿ ಹೋಗಿ ನದಿ ಮಧ್ಯೆ ಸಿಕ್ಕಿ ಹಾಕಿಕೊಂಡಿದೆ. ಒಂಬತ್ತು ಮಂದಿಯಲ್ಲಿ ನಾಲ್ವರ ಶವಗಳನ್ನು ಮೇಲೆತ್ತಲಾಗಿದೆ. ಕಾರಿನಲ್ಲಿ ಇನ್ನೂ ಐದು ಶವಗಳಿವೆ. ಈ ನಡುವೆ, ೨೨ ವರ್ಷದ ನಾಜಿಯಾ ಎಂಬವರನ್ನು ಜೀವಂತವಾಗಿ ರಕ್ಷಿಸಲಾಗಿದ್ದು, ಅವರನ್ನು ರಾಮನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ| Rain News | ನಿಲ್ಲದ ಧಾರಾಕಾರ ಮಳೆ; ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ, ನೂರಾರು ಎಕರೆ ಬೆಳೆ ಜಲಾವೃತ