Site icon Vistara News

ಲೈಫ್‌ಲೈನ್ ಪೈಪ್ ಅಳವಡಿಕೆ, ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರಿಗೆ ಆಹಾರ ರವಾನೆ

Vistara Editorial, Ensure safety of workers during massive projects

ನವದೆಹಲಿ: ಉತ್ತರಕಾಶಿಯ ಸುರಂಗ ಮಾರ್ಗ ಕುಸಿದು(Uttarkashi Tunnel Collapse), ಅವಶೇಷಗಳ ಮಧ್ಯೆ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯಲ್ಲಿ (Rescue Operation) ಪ್ರಮುಖ ಬೆಳವಣಿಗೆಯಾಗಿದೆ. ಸೋಮವಾರ ಅಧಿಕಾರಿಗಳು 6 ಇಂಚು ಅಗಲದ ಪರ್ಯಾಯ ಪೈಪ್ (Lifeline Pipe) ಮೂಲಕ ಒಂದು ವಾರದಿಂದ ಸುರಂಗದೊಳಗೆ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.

ವರದಿಗಳ ಪ್ರಕಾರ, ಈ 57-ಮೀಟರ್ ಲೈಫ್‌ಲೈನ್ ಪೈಪ್ ಅನ್ನು ಸುರಂಗದ ಮೂಲಕ ಕೊರೆಯಲಾಗಿದೆ ಮತ್ತು ಸಿಕ್ಕಿಬಿದ್ದ ಕಾರ್ಮಿಕರಿಗೆ ಹೆಚ್ಚಿನ ಪ್ರಮಾಣದ ಘನ ಆಹಾರ ಮತ್ತು ನೀರನ್ನು ಕಳುಹಿಸಲು ಬಳಸಲಾಗುತ್ತದೆ. ಡಿಆರ್‌ಡಿಒ 20 ಕೆಜಿ ಮತ್ತು 50 ಕೆಜಿ ತೂಕದ 2 ರೋಬೋಟ್‌ಗಳನ್ನು ಸುರಂಗದೊಳಗೆ ಕಳುಹಿಸಿದೆ.

ಸಿಕ್ಕಿಬಿದ್ದ ಕಾರ್ಮಿಕರು ಎದುರಿಸುತ್ತಿರುವ ಸವಾಲಿನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ಅವರ ಪೌಷ್ಟಿಕಾಂಶದ ಅಗತ್ಯಗಳನ್ನು ಪರಿಹರಿಸಲು ವಿಶೇಷ ಆಹಾರ ಯೋಜನೆಯನ್ನು ರೂಪಿಸಲು ಅಧಿಕಾರಿಗಳು ವೈದ್ಯಕೀಯ ತಜ್ಞರನ್ನು ಸಂಪರ್ಕಿಸಿದ್ದಾರೆ ಎಂದು ಮಾಧ್ಯಮಗಳ ವರದಿ ಮಾಡಿವೆ.

ಕಾರ್ಮಿಕರಿಗೆ ಘನ ಆಹಾರ ಮತ್ತು ನೀರು ಪೂರೈಸಲು ಸುರಂಗ ಮೂಲಕವೇ 57 ಮೀಟರ್ ಲೈಫ್‌ಲೈನ್ ಪೈಪ್ ಅನ್ನು ಅಳವಡಿಸಲಾಗಿದೆ. ಸುರಂಗದೊಳಗೆ 20 ಕೆಜಿ ಮತ್ತು 50 ಕೆಜಿ ತೂಕದ ಡಿಆರ್‌ಡಿಒ 2 ರೋಬೋಟ್‌ಗನ್ನು ಕಳುಹಿಸಿಕೊಟ್ಟಿದೆ. ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಮಾತನಾಡಿ, ರಕ್ಷಣಾ ಕಾರ್ಯಾಚರಣೆ ಮಾಹಿತಿ ಪಡೆದುಕೊಂಡಿದ್ದಾರೆ.

ಈ ವೇಳೆ, ಸಿಎಂ ಧಾಮಿ ಅವರು ಪ್ರಧಾನಿ ಮೋದಿ ಅವರಿಗೆ ರಕ್ಷಣಾ ಕಾರ್ಯಾಚರಣೆಯ ವಿವರ ಮಾಹಿತಿಯನ್ನು ನೀಡಿದರು. ಅಲ್ಲದೇ ಸುರಂಗದೊಳಗೆ ಸಿಲುಕಿರುವ ಎಲ್ಲ ಕಾರ್ಮಿಕರು ಸುರಕ್ಷಿತವಾಗಿದ್ದಾರೆಂದು ಎಂದು ತಿಳಿಸಿದ್ದರು. ಅಗತ್ಯ ಪೌಷ್ಟಿಕಾಂಶ ಮತ್ತು ನೀರನ್ನು ನಿರಂತರವಾಗಿ ಪೂರೈಸಲಾಗುತ್ತಿದೆ ಎಂದು ವಿವರಿಸಿದ್ದರು.

ಅಂತಾರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಅವರು ರಕ್ಷಣಾ ಪ್ರಯತ್ನಗಳನ್ನು ಪರಿಶೀಲಿಸಲು ವಿಪತ್ತು ಸ್ಥಳಕ್ಕೆ ಆಗಮಿಸಿದ್ದಾರೆ. ಅವರು ಡಿಕ್ಸ್ ಜಿನೀವಾ ಮೂಲದ ಇಂಟರ್‌ನ್ಯಾಶನಲ್ ಟನೆಲಿಂಗ್ ಮತ್ತು ಅಂಡರ್‌ಗ್ರೌಂಡ್ ಸ್ಪೇಸ್ ಅಸೋಸಿಯೇಷನ್‌ನ ಮುಖ್ಯಸ್ಥರಾಗಿದ್ದಾರೆ.

ಈ ಸುದ್ದಿಯನ್ನೂ ಓದಿ: ಕೆಟ್ಟ ನಿಂತ ಡ್ರಿಲ್ಲಿಂಗ್ ಯಂತ್ರ! ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಸ್ಥಗಿತ

Exit mobile version