ನವದೆಹಲಿ: ಸಿಲ್ಕ್ಯಾರಾ ಸುರಂಗದಲ್ಲಿ (Uttarkashi tunnel collapse) ಸಿಲುಕಿರುವ 41 ಕಾರ್ಮಿಕರ ರಕ್ಷಣೆಗೆ (Rescue Operation) ಕೊರೆಯಲಾಗುತ್ತಿದ್ದ ಹಾರಿಜಾಂಟಲ್ ಡ್ರಿಲಿಂಗ್‌ಗೆ (Horizontal Drilling) ಸಾಕಷ್ಟು ಅಡೆ ತಡೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ಲಂಬವಾಗಿ ಡ್ರಿಲಿಂಗ್ ಆರಂಭಿಸಲಾಗಿದೆ(Vertical Drilling). ಈ ಕಾರ್ಯವು ನವೆಂಬರ್ 30ರ ಹೊತ್ತಿಗೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ಒಟ್ಟಾರೆ ರಕ್ಷಣಾ ಕಾರ್ಯಾಚರಣೆಯು ಈಗ 16ನೇ ದಿನಕ್ಕೆ ಕಾಲಿಟ್ಟಿದೆ.
ಭಾನುವಾರ ಮಧ್ಯಾಹ್ನ ಸಿಲ್ಕ್ಯಾರಾದಲ್ಲಿ ಬೆಟ್ಟದ ತುದಿಯಿಂದ ಲಂಬವಾಗಿ ಡ್ರಿಲಿಂಗ್ ಕಾರ್ಯವನ್ನು ಪ್ರಾರಂಭಿಸಾಗಿದೆ. ಸಿಕ್ಕಿಬಿದ್ದ ಕಾರ್ಮಿಕರ ರಕ್ಷಣೆಗಾಗಿ ಬೆಟ್ಟದ ಸುಮಾರು 110 ಮೀಟರ್‌ಗಳನ್ನು ಅಗೆಯಬೇಕಾಗುತ್ತದೆ. ವೇಗದ ಕಾರ್ಯಾಚರಣೆಯಲ್ಲಿ ಯಂತ್ರವು ಈಗಾಗಲೇ 20 ಮೀಟರ್ ಬೆಟ್ಟವನ್ನು ಕೊರೆದಿದೆ, ಸುಮಾರು 86 ಮೀಟರ್ ಇನ್ನೂ ಉಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
पाइंप के अंदर ऑग़र मशीन 5 मीटर रह गया है काटने को,रेल निगम ने 8 इंच का वर्टिकल पाइप 75 मीटर तक पहुँचाया,लेकिन बारिश आने के कारण काम रूका कल होगा,रेस्क्यू के लिए 1 मीटर चौड़ी पाइप को वर्टिकल ड्रिल करके 20 मीटर तक डाल दिया है #Uttarkashi#UttarkashiRescue #UttarakhandTunnelRescue pic.twitter.com/6YAMtTQb5K
— Manoj Singh 🇮🇳 मनोज सिंह (@manojsingh066) November 26, 2023
ಸುರಂಗದೊಳಗೆ ಹಾರಿಜಾಂಟಲ್ ಡ್ರಿಲಿಂಗ್‌ಗಾಗಿ ಅಮೆರಿಕದ ಆಗರ್ ಯಂತ್ರ ವಿಫಲವಾದ ನಂತರ ಲಂಬವಾಗಿ ಕೊರೆಯುವ ಯಂತ್ರವನ್ನು ತಂದು ಕಾರ್ಯಾಚರಣೆಯನ್ನು ಮತ್ತೆ ಶುರು ಮಾಡಲಾಗಿದೆ.
ಲಂಬ ಡ್ರಿಲಿಂಗ್ ಕಾರ್ಯಾಚರಣೆಯ ಮೊದಲ 12 ಗಂಟೆಯಲ್ಲಿ 20 ಮೀಟರ್ ಕೊರೆಯಲು ಯಂತ್ರವು ಯಶಸ್ವಿಯಾಗಿದ್ದು, ಕೊರೆಯುವ ಕೆಲಸಕ್ಕೆ ವೇಗ ದೊರೆತಿದೆ. ಬೆಟ್ಟದ ಮೇಲಿನ ತುದಿಯಿಂದ ಡ್ರಿಲಿಂಗ್ ಮಾಡಲಾಗುತ್ತಿದೆ. ವರ್ಟಿಕಲ್ ಡ್ರಿಲ್ಲಿಂಗ್ ಮೆಷಿನ್ ಬೆಟ್ಟದ ತುದಿಯಿಂದ ವೇಗವಾಗಿ ಪ್ರಗತಿ ಸಾಧಿಸುತ್ತಿದ್ದರೆ, ಹೈದರಾಬಾದ್‌ನಿಂದ ತರಲಾದ ಪ್ಲಾಸ್ಮಾ ಯಂತ್ರವು ಸುರಂಗದ ಬದಿಯಲ್ಲಿರುವ ಪೈಪ್‌ನಿಂದ ಆಗರ್ ಯಂತ್ರವನ್ನು ಕತ್ತರಿಸಿ ಹೊರ ತೆಗೆಯುತ್ತಿದೆ.
ಕುಸಿದ ಸುರಂಕದಲ್ಲಿ ಸಿಲುಕಿರುವ ಕಾರ್ಮಿಕರಿಗೆ ತಾಜಾ ಬೇಯಿಸಿದ ಅಡುಗೆ, ನೀರು ಮತ್ತು ಔಷಧಗಳನ್ನು 6 ಇಂಚಿನ ಲೈಫ್‌ಲೈನ್ ಪೈಪ್ ಮೂಲಕ ಒದಗಿಸಲಾಗುತ್ತಿದೆ. ವರ್ಟಿಕಲ್ ಡ್ರಿಲಿಂಗ್ ಪೂರ್ಣಗೊಂಡ ನಂತರ ಸಿಕ್ಕಿಬಿದ್ದ 41 ಕಾರ್ಮಿಕರನ್ನು ಹೆಲಿಕಾಪ್ಟರ್ ಮತ್ತು ಸರಂಜಾಮು ಹಗ್ಗವನ್ನು ಬಳಸಿ ಕುಸಿದ ಸುರಂಗದಿಂದ ಹೊರಕ್ಕೆ ತರಲಾಗುತ್ತದೆ. ಪ್ರಸ್ತುತ ಕಾರ್ಯಾಚರಣೆಯ ಅಂತಿಮ ಹಂತದ ಕಾರ್ಯಾಚರಣೆಯೊಂದಿಗೆ ರಕ್ಷಣಾ ಕಾರ್ಯಾಚರಣೆಗಳು ಇನ್ನೂ 24 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Uttarkashi Tunnel collapse: ಕುಸಿದ ಸುರಂಗದೊಳಗೆ ಸಿಲುಕಿರುವ ಮೂವರು ಸೋದರರಿಗೆ ಹೊರಗೆ ನಡೆದ ದುರಂತದ ಅರಿವೇ ಇಲ್ಲ!