Site icon Vistara News

ಸುರಂಗದಿಂದ 41 ಜನರ ರಕ್ಷಣೆಗೆ ‘ರ‍್ಯಾಟ್‌ ಹೋಲ್’‌ ಮೈನಿಂಗ್‌ ಪ್ಲಾನ್;‌ ಏನಿದು?

Uttarkashi Tunnel Rescue

Uttarkashi Tunnel Rescue: 12 rat-hole minings experts begin manual drilling

ಡೆಹ್ರಾಡೂನ್:‌ ಉತ್ತರಾಖಂಡದ ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರ (Uttarakhand Tunnel Collapse) ರಕ್ಷಣೆಗೆ ಭರದಿಂದ ಕಾರ್ಯಾಚರಣೆ ನಡೆಯುತ್ತಿದೆ. ಡ್ರಿಲ್ಲಿಂಗ್‌ ಯಂತ್ರಗಳ ಸಮಸ್ಯೆಯಿಂದಾಗಿ ಯಂತ್ರಗಳನ್ನು ಬಳಸದೆಯೇ ಮ್ಯಾನುವಲ್‌ (Manual Drilling) ಡ್ರಿಲ್ಲಿಂಗ್‌ ಕೈಗೊಳ್ಳಲಾಗುತ್ತಿದೆ. ಅದರಲ್ಲೂ, ರ‍್ಯಾಟ್‌ ಹೋಲ್‌ ಮೈನಿಂಗ್‌ (Rat Hole Mining) ಮೂಲಕ 41 ಜನರನ್ನು ರಕ್ಷಿಸಲು ಪ್ಲಾನ್‌ ರೂಪಿಸಲಾಗಿದೆ. ಸುಮಾರು 12 ತಜ್ಞರ ತಂಡವು ರ‍್ಯಾಟ್‌ ಹೋಲ್‌ ಮೈನಿಂಗ್‌ ಆರಂಭಿಸಿದೆ.

ರ‍್ಯಾಟ್‌ ಹೋಲ್‌ ಮೈನಿಂಗ್‌ ಎಂದರೆ, ಇಲಿಯಂತೆಯೇ ಚಿಕ್ಕದಾದ ರಂಧ್ರಗಳನ್ನು ಕೊರೆಯುವುದು. ಮನುಷ್ಯರು ಸುಲಭವಾಗಿ ಆ ರಂಧ್ರದಿಂದ ಹೊರಬರಲು ಈ ರೀತಿಯ ರಂಧ್ರಗಳನ್ನು ಕೊರೆಯುತ್ತಾರೆ. ಉತ್ತರಕಾಶಿ ಸುರಂಗದಲ್ಲಿ ಯಂತ್ರಗಳಿಂದಲೂ ಕೊರೆಯಲು ಸಾಧ್ಯವಾಗದ ಕಾರಣ ಈ ಪ್ಲಾನ್‌ ರೂಪಿಸಲಾಗಿದೆ. ಲಂಬವಾಗಿ 86 ಮೀಟರ್‌ ಕೊರೆಯುವ ಸವಾಲಿದ್ದು, ಈಗಾಗಲೇ 36 ಮೀಟರ್‌ ಕೊರೆಯಲಾಗಿದೆ. ಈಗ ಅಡ್ಡಲಾಗಿ ರ‍್ಯಾಟ್‌ ಹೋಲ್‌ ಮೈನಿಂಗ್‌ ತಂತ್ರದ ಮೂಲಕ ಕೊರೆಯುವ ಕೆಲಸ ಆರಂಭಿಸಲಾಗಿದೆ. ಈ ಪ್ಲಾನ್‌ ಯಶಸ್ವಿಯಾದರೂ ಕಾರ್ಮಿಕರ ರಕ್ಷಣೆಗೆ ಇನ್ನೂ 3 ದಿನ ಬೇಕಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Tunnel Collapse: ಸುರಂಗದಿಂದ 41 ಜನರನ್ನು ಹೊರಗೆ ಹೇಗೆ ತರುತ್ತಾರೆ? ಇಲ್ಲಿದೆ ಪ್ರಾತ್ಯಕ್ಷಿಕೆ ವಿಡಿಯೊ

ಉತ್ತರಕಾಶಿ ಜಿಲ್ಲೆಯ ಸಿಲ್‌ಕ್ಯಾರ ಹಾಗೂ ದಂಡಲ್‌ಗಾಂವ್‌ಗೆ ಸಂಪರ್ಕ ಕಲ್ಪಿಸಲು ಚಾರ್‌ ಧಾಮ್‌ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. 4.5 ಕಿಲೋ ಮೀಟರ್‌ ದೂರದ ಸುರಂಗ ನಿರ್ಮಾಣದ ವೇಳೆ ಸುಮಾರು 150 ಮೀಟರ್‌ ಉದ್ದದ ಸುರಂಗ ಕುಸಿದಿತ್ತು. ನವೆಂಬರ್‌ 12ರಂದು ಜಾವ 4 ಗಂಟೆ ಸುಮಾರಿಗೆ ಸುರಂಗ ಕುಸಿದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇಷ್ಟಾದರೂ ಕ್ಷಿಪ್ರವಾಗಿ ಕಾರ್ಮಿಕರನ್ನು ರಕ್ಷಣೆ ಮಾಡಲು ಆಗಿರಲಿಲ್ಲ.

ಇದನ್ನೂ ಓದಿ: ಸುರಂಗದಲ್ಲಿ ಸಿಲುಕಿದ ಕಾರ್ಮಿಕರಿಗೆ ಮೊದಲ ಬಾರಿಗೆ ವೆಜ್ ಪುಲಾವ್, ಮಟರ್ ಪನೀರ್ ಪೂರೈಕೆ!

ಉತ್ತರಕಾಶಿಯಿಂದ ಯಮುನೋತ್ರಿಗೆ 26 ಕಿಲೋಮೀಟರ್‌ ಸಂಚರಿಸುವುದನ್ನು ಕಡಿಮೆಗೊಳಿಸಲು ಸುರಂಗ ನಿರ್ಮಿಸಲಾಗುತ್ತಿದೆ. ಸುರಂಗ ಕುಸಿಯುತ್ತಲೇ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರು ಒಳಗೆ ಸಿಲುಕಿದ್ದರು. ಏಕಾಏಕಿ ಸುರಂಗ ಕುಸಿದ ಕಾರಣ ಒಬ್ಬ ಕಾರ್ಮಿಕರೂ ಹೊರಗೆ ಬರಲು ಸಾಧ್ಯವಾಗಿರಲಿಲ್ಲ. ಉತ್ತರಾಖಂಡ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ. ಭೂಕುಸಿತ, ಡ್ರಿಲ್ಲಿಂಗ್‌ ಯಂತ್ರಗಳು ಕೈಕೊಟ್ಟಿರುವುದು ಸೇರಿ ಹಲವು ಕಾರಣಗಳಿಂದಾಗಿ ಕಾರ್ಮಿಕರ ರಕ್ಷಣೆಯು ಕಷ್ಟವಾಗಿತ್ತು. ವಿದೇಶಿ ತಜ್ಞರನ್ನೂ ಜನರ ರಕ್ಷಣೆಗೆ ಕರೆಸಲಾಗಿತ್ತು. ಈಗ ಕೊನೆಗೆ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version