Site icon Vistara News

UNESCO List | ಯುನೆಸ್ಕೋ ವಿಶ್ವ ಪಾರಂಪರಿಕ ತಾತ್ಕಾಲಿಕ ಪಟ್ಟಿಗೆ ಮೋದಿ ಜನಿಸಿದ ವಡ್ನಗರ್ ಪಟ್ಟಣ!

Vadnagar @ PM Modi

ನವದೆಹಲಿ: ಭಾರತದ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯು ಮೊಧೇರಾದಲ್ಲಿರುವ ಸೂರ್ಯ ದೇವಾಲಯ, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮಸ್ಥಳವಾಗಿರುವ ಗುಜರಾತ್‌ನ ಐತಿಹಾಸಿಕ ವಡ್ನಗರ್ ಪಟ್ಟಣ ಮತ್ತು ತ್ರಿಪುರಾದ ಉನಕೋಟಿಯ ಶಿಲೆಯಲ್ಲಿ ಅರಳಿದ ಶಿಲ್ಪಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ತಾತ್ಕಾಲಿಕ (UNESCO List) ಪಟ್ಟಿಗೆ ಸೇರಿಸಿದೆ.

ಯುನೆಸ್ಕೋ ಪಾರಂಪರಿಕ ತಾತ್ಕಾಲಿಕ ಪಟ್ಟಿಯು ಪ್ರತಿ ರಾಜ್ಯ ತಮ್ಮ ತಾಣಗಳನ್ನು ನಾಮನಿರ್ದೇಶನ ಮಾಡಬಹುದು. ಈ ಹಿನ್ನೆಲೆಯಲ್ಲಿ ಭಾರತವು ತನ್ನ ತಾಣಗಳನ್ನು ನಾಮನಿರ್ದೇಶನ ಮಾಡಿದೆ. ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲು ಯಾವುದೇ ಸಾಂಸ್ಕೃತಿಕ, ನೈಸರ್ಗಿಕ ಅಥವಾ ಮಿಶ್ರ ಪರಂಪರೆಯ ತಾಣವನ್ನು ತಾತ್ಕಾಲಿಕ ಪಟ್ಟಿಗೆ ಸೇರ್ಪಡೆ ಮಾಡುವುದು ಅಗತ್ಯವಾಗಿರುತ್ತದೆ. ತಾತ್ಕಾಲಿಕ ಪಟ್ಟಿ ಸೇರಿದ ಮಾತ್ರಕ್ಕೆ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ನಾಮನಿರ್ದೇಶನ ಮಾಡಿದ ಸ್ಥಳಗಳು ಜಾಗ ಪಡೆಯುತ್ತವೆ ಎಂದೇನೂ ಇಲ್ಲ.

ಇದೇ ವೇಳೆ, ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲು ಪುರಾತತ್ವ ಇಲಾಖೆಯ ಮತ್ತಷ್ಟು ಸ್ಮಾರಕಗಳು ಮತ್ತು ಸ್ಥಳಗಳನ್ನು ಶೋಧಿಸುತ್ತಿರುವುದಕ್ಕೆ ಕೇಂದ್ರ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ಅವರು ಅಭಿನಂದಿಸಿದ್ದಾರೆ. ಈ ಮೂರು ಸ್ಥಳಗಳೊಂದಿಗೆ, ತಾತ್ಕಾಲಿಕ ಪಟ್ಟಿಯಲ್ಲಿ ಭಾರತದ 52 ಕ್ಷೇತ್ರಗಳು ಸೇಪರ್ಡೆಯಾದಂತಾಗಿವೆ. ಕಳೆದ ವರ್ಷವೂ ಭಾರತವು 6 ಸ್ಥಳಗಳನ್ನು ಈ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆ ಮಾಡಿತ್ತು.

ಇದನ್ನೂ ಓದಿ | G20 Presidency | ಭಾರತದ ಜಿ20 ಕಾರುಬಾರು ಶುರು, ವಾರ ಕಾಲ ಬೆಳಗಲಿವೆ 100 ಪಾರಂಪರಿಕ ತಾಣಗಳು!

Exit mobile version