ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar CM Nitish Kumar) ಅವರು ಬುಧವಾರ ದಿಲ್ಲಿಯ ‘ಸದೈವ ಅಟಲ್’ ಸ್ಮಾರಕದಲ್ಲಿ, 5ನೇ ಪುಣ್ಯ ತಿಥಿ (Vajpayee Death anniversary) ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ಜೆಡಿಯು (JDU Leader) ನಾಯಕರಾಗಿರುವ ನಿತೀಶ್ ಕುಮಾರ್ ಅವರು ವಾಜಪೇಯಿ ಸಂಪುಟದಲ್ಲಿ (Vajpayee Cabinet Minister) ಸಚಿವರಾಗಿ ಕೆಲಸ ಮಾಡಿದ್ದರು. ತಮ್ಮ ಮಾಜಿ ಸ್ನೇಹಿತರು (ಎನ್‌ಡಿಎ ನಾಯಕರು- NDA Leaders) ಜತೆಯಲ್ಲೇ ವಾಜಪೇಯಿ ಸಮಾಧಿಗೆ ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು.
ಇದೇ ವೇಳೆ, ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನೂ ಬಿಹಾರ ಸಿಎಂ ನಿತೀಶ್ ಕುಮಾರ್ ತಿಳಿಸಿದ್ದಾರೆ. ದಿನಾಂತ್ಯಕ್ಕೆ ಕೇಜ್ರಿವಾಲ್ ಅವರನ್ನು ನಿತೀಶ್ ಕುಮಾರ್ ಅವರು ಭೇಟಿ ಮಾಡುವ ಸಾಧ್ಯತೆಗಳಿವೆ.
ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು ಗೌರವ ಸಲ್ಲಿಕೆ
ಮಾಜಿ ಪ್ರಧಾನಿ, ‘ಭಾರತ ರತ್ನ’ ಅಟಲ್ ಬಿಹಾರಿ ವಾಜಪೇಯಿ (Former PM Atal Bihari Vajpayee) ಅವರ ಪುಣ್ಯ ಸ್ಮರಣೆಯಲ್ಲಿ ಪ್ರಧಾನಿ ನೇರಂದ್ರ ಮೋದಿ(PM Narendra Modi), ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಸೇರಿ ಎನ್‌ಡಿಎ ನಾಯಕರು ಪಾಲ್ಗೊಂಡಿದ್ದರು. ವಾಜಪೇಯಿ ಅವರ 5ನೇ ಪುಣ್ಯತಿಥಿಯನ್ನು ಬುಧವಾರ ಆಚರಿಸಲಾಯಿತು(Vajpayee Death anniversary:).
ಉಪರಾಷ್ಟ್ರಪತಿ ಜಗದೀಪ್ ಧನಕರ್, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ರಾಜ್ಯಸಭಾ ಡೆಪ್ಯುಟಿ ಚೇರ್ಮನ್ ಹರಿವಂಶ್, ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, ಅಪ್ನಾದಳ ನಾಯಕಿ ಅನುಪ್ರಿಯಾ ಪಟೇಲ್ ಹಾಗೂ ಎಚ್‌ಎಎಂನ ಜಿತನ್ ರಾಮ್ ಮಾಂಜ್ಹಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಮಾಧಿಗೆ ಗೌರವ ಸಲ್ಲಿಸಿದರು. ಈ ವೇಳೆ, ವಾಜಪೇಯಿ ಅವರ ದತ್ತು ಪುತ್ರಿ ನಮಿತಾ ಕೌಲ್ ಭಟ್ಟಾಚಾರ್ಯ ಅವರು ಸೈದವ್ ಅಟಲ್ ಸ್ಮಾರಕದಲ್ಲಿ ಪುಷ್ಪ ನಮನ ಸಲ್ಲಿಸಿದರು.
ಅಟಲ್ ಪುಣ್ಯ ತಿಥಿಯಂದು ಅವರಿಗೆ ಗೌರವ ಸಲ್ಲಿಸುತ್ತಿರುವ 140 ಕೋಟಿ ಭಾರತೀಯರಲ್ಲಿ ನಾನು ಇದ್ದೇನೆ. ಅವರ ನಾಯಕತ್ವದಿಂದ ಭಾರತ್ಕಕೆ ಹೆಚ್ಚಿನ ಪ್ರಯೋಜನ ದೊರೆತಿದೆ. ನಮ್ಮ ದೇಶದ ಪ್ರಗತಿಯನ್ನು ಹೆಚ್ಚಿಸುವಲ್ಲಿ ಮತ್ತು ದೇಶವನ್ನು 21ನೇ ಶತಮಾನಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Vajpayee Death anniversary: ಮಾಜಿ ಪ್ರಧಾನಿ ವಾಜಪೇಯಿ ಪುಣ್ಯ ತಿಥಿ; ರಾಷ್ಟ್ರಪತಿ, ಪಿಎಂ ಸೇರಿ ಹಲವರಿಂದ ಗೌರವ ಸಲ್ಲಿಕೆ
ಅವಧಿ ಪೂರೈಸಿದ ಕಾಂಗ್ರೆಸ್ಸೇತರ ಮೊದಲ ಪಿಎಂ
1924 ಡಿಸೆಂಬರ್ 25ರಂದು ಗ್ವಾಲಿಯರ್‌ನಲ್ಲಿ ವಾಜಪೇಯಿ ಅವರು ಜನಿಸಿದರು. ಪ್ರಧಾನಿಯಾಗಿ ಐದು ವರ್ಷಗಳನ್ನು ಪೂರೈಸಿದ ಮೊದಲ ಕಾಂಗ್ರೆಸ್ಸೇತರ ಎಂಬ ಕೀರ್ತಿ ಅವರಿಗಿದೆ. ವಾಜಪೇಯಿ ಅವರು ಮೊದಲಿಗೆ 1996 ಮೇ 16ರಿಂದ 1996 ಜೂನ್ 1ರ ವರೆಗೆ ಪ್ರಧಾನಿಯಾಗಿದ್ದರು. ಮತ್ತೆ 1998 ಮಾರ್ಚ್ 19ರಿಂದ 2004 ಮೇ 24ರವರೆಗೆ ಪ್ರಧಾನಿಯಾಗಿದ್ದರು. ಪ್ರಧಾನಿ ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಅವರು ಅವರು 1977ರಿಂದ 1979ರವರೆಗೆ ವಿದೇಶಾಂಗ ಸಚಿವರಾಗಿಯೂ ಕೆಲಸ ಮಾಡಿದ್ದರು.
2015ರಲ್ಲಿ ವಾಜಪೇಯಿಗೆ ಭಾರತ ರತ್ನ ಪ್ರಶಸ್ತಿ
2014ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರವು ಅಧಿಕಾರಕ್ಕೇರಿತು. ಬಳಿಕ 2015ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಲಾಯಿತು. ಅಲ್ಲದೇ, ವಾಜಪೇಯಿ ಅವರ ಜನ್ಮ ದಿನವನ್ನು ಉತ್ತಮ ಆಡಳಿತ ದಿನವನ್ನಾಗಿ ಭಾರತದಲ್ಲಿ ಆಚರಿಸಲಾಗುತ್ತದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.