ಮುಂಬೈ: ಇಂದು ಪ್ರೇಮಿಗಳ ದಿನ(Valentines Day). ಜಗತ್ತೇ ಪ್ರೀತಿಯಲ್ಲಿ ತುಂಬಿರುವ ದಿನವಿದು. ಪ್ರೇಮಿಗಳು ಪರಸ್ಪರ ಪ್ರೀತಿ ಹಂಚಿಕೊಳ್ಳುವ, ಹೇಳಿಕೊಳ್ಳುವ ವಿಶೇಷವಾದ ದಿನ. ಈ ಪ್ರೇಮಿಗಳ ದಿನಕ್ಕೆ ಪ್ರೇಮಿಗಳು ಔಟಿಂಗ್ ಹೋಗಿಯೋ, ಸಿನಿಮಾ ನೋಡಿಯೋ ಅಥವಾ ಪಾರ್ಟಿ ಮಾಡಿ ಕಳೆಯುತ್ತಾರೆ. ಸಿನಿಮಾ ನೋಡುವ ಆಸಕ್ತಿ ಇರುವ ಪ್ರೇಮಿಗಳು ಈ ದಿನ ಯಾವ ಸಿನಿಮಾ ನೋಡಬೇಕು ಎಂದು ಯೋಚಿಸುತ್ತಿದ್ದರೆ ನಿಮಗಾಗಿ ಇಲ್ಲಿದೆ ಮಾಹಿತಿ.
ಇದನ್ನೂ ಓದಿ: Valentine’s Week : ಪ್ರೇಮಿಗಳ ದಿನದ ಹಿಂದಿನ ಮಹತ್ವವೇನು? ಆಚರಿಸೋದು ಹೇಗೆ?
ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ(1995):
ಪ್ರೀತಿ ಎಂದ ಮೇಲೆ ಅಲ್ಲಿ ಡೈಲಾಗ್ ಇರಲೇಬೇಕು. ಈ ರೀತಿಯ ಪ್ರೀತಿಯ ಡೈಲಾಗ್ಗಳಿಗೆ ಪ್ರಸಿದ್ಧವಾಗಿದ್ದು ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ’ ಸಿನಿಮಾ. 1995ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ‘ಬಡೆ ಬಡೆ ದೇಶೋ ಮೇ ಐಸೆ ಚೋಟಿ ಚೋಟಿ ಬಾತೆ ಹೋತಿ ರೆಹ್ತಿ ಹೈ ಸೆನೋರಿಟಾ’, ‘ಜಾ ಸಿಮ್ರನ್ ಜೀ ಲೇ ಅಪ್ನಿ ಜಿಂದಗಿ’ ಅಂತಹ ಪ್ರಸಿದ್ಧ ಡೈಲಾಗ್ಗಳಿವೆ. ಆದಿತ್ಯಾ ಚೋಪ್ರಾ ನಿರ್ದೇಶನವಿರುವ ಈ ಸಿನಿಮಾದಲ್ಲಿ ಶಾರುಖ್ ಖಾನ್, ಕಾಜಲ್, ಅಮರೀಶ್ ಪುರಿ, ಫರೀದಾ ಜಲಾಲ್, ಅನುಪಮ್ ಖೇರ್ ಸೇರಿ ಅನೇಕರು ನಟಿಸಿದ್ದರು.
ಜಬ್ ವಿ ಮೆಟ್(2007)
ಇಮ್ತಿಯಾಜ್ ಅಲಿ ಅವರ ‘ಜಬ್ ವಿ ಮೆಟ್’ ಸಿನಿಮಾ ಪ್ರೇಮಿಗಳ ನೋಡಲೇಬೇಕಾದ ಸಿನಿಮಾಗಳಲ್ಲಿ ಒಂದು. ಇದರಲ್ಲಿನ ಗೀತ್ ಮತ್ತು ಆದಿತ್ಯ ಕಷ್ಯಪ್ ಪಾತ್ರಗಳು ಎಂದೆಂದಿಗೂ ನೆನಪಿನಲ್ಲಿಟ್ಟುಕೊಳ್ಳುವಂತಹದ್ದು. ಶಾಹಿದ್ ಕಪೂರ್, ಕರೀನಾ ಕಪೂರ್, ಸೌಮ್ಯ ತಂಡನ್ ಹಾಗೂ ಇನ್ನಿತರರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಸಿಲ್ಸಿಲಾ(1981)
ಸಿಲ್ಸಿಲಾ ಯಶ್ ಚೋಪ್ರಾ ನಿರ್ದೇಶನದ ಚಿತ್ರ. ಇದರಲ್ಲಿನ ‘ದೇಖಾ ಏಕ್ ಖ್ವಾಬ್’ ಹಾಡು ಹಲವರಿಗೆ ಇಂದಿಗೂ ಮೆಚ್ಚಿನ ಹಾಡು. ಬಾಲಿವುಡ್ ಬಿಗ್ ಬಿ ಅಮಿತಾಭಣ್ ಬಚ್ಚನ್ ನಟಿಸಿರುವ ಈ ಸಿನಿಮಾ ಪ್ರೇಮಿಗಳು ವೀಕ್ಷಿಸುವಂತಹ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಅಮಿತಾಭ್ ಜತೆಯಲ್ಲಿ ಜಯ ಬಚ್ಚನ್, ರೇಖಾ, ಶಶಿ ಕಪೂರ್, ಸಂಜೀವ್ ಕುಮಾರ್ ಸೇರಿ ಅನೇಕರು ಬಣ್ಣ ಹಚ್ಚಿದ್ದಾರೆ.
ಕುಚ್ ಕುಚ್ ಹೋತಾ ಹೈ(1998)
‘ಹಮ್ ಏಕ್ ಬಾರ್ ಜೀತೇ ಹೈ, ಏಕ್ ಬಾರ್ ಮರ್ತೆ ಹೈ, ಶಾದಿ ಬೀ ಏಕ್ ಬಾರ್ ಹೋತಿ ಹೈ, ಔರ್ ಪ್ಯಾರ್ ವೊ ಬೀ ಏಕ್ ಬಾರ್ ಹೋತಾ ಹೈ’ ಡೈಲಾಗ್ 90ರ ದಶಕದ ಪ್ರೇಮಿಗಳ ಅಚ್ಚುಮೆಚ್ಚಿನ ಡೈಲಾಗ್ ಎಂದೇ ಹೇಳಬಹುದು. ಇದು ಕುಚ್ ಕುಚ್ ಹೋತಾ ಹೈ ಸಿನಿಮಾದ ಡೈಲಾಗ್ ಆಗಿದೆ. ಕರಣ್ ಜೋಹರ್ ಅವರ ಈ ಸಿನಿಮಾದಲ್ಲಿ ತ್ರಿಕೋನ ಪ್ರೀತಿಯನ್ನು ಕಾಣಬಹುದು. ಶಾರುಖ್ ಖಾನ್, ಕಾಜಲ್, ರಾಣಿ ಮುಖರ್ಜಿ ಈ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಕಯ್ಮತ್ ಸೆ ಕಯ್ಮತ್ ತಕ್(1988)
ಕುಟುಂಬಗಳ ನಡುವೆ ವೈಮನಸ್ಸು ಇದ್ದರೂ ಲೆಕ್ಕಿಸದೆ ಪ್ರೀತಿ ಮಾಡುವ ರಾಜ್ ಮತ್ತು ರಶ್ಮಿಯ ಕಥೆ ಕಯ್ಮತ್ ಸೆ ಕಯ್ಮತ್ ತಕ್. ಮನ್ಸೂರ್ ಖಾನ್ ನಿರ್ದೇಶನವಿರುವ ಈ ಸಿನಿಮಾದಲ್ಲಿ ಆಮಿರ್ ಖಾನ್, ಜೂಹಿ ಚಾವ್ಲಾ, ಅಲೋಕ್ ನಾಥ್, ದಲೀತ್ ತಹೀಲ್ ನಟಿಸಿದ್ದಾರೆ.
ದಿ ಲಂಚ್ ಬಾಕ್ಸ್ (2013)
ಪ್ರೀತಿಯ ಬಗ್ಗೆ ನಂಬಿಕೆ ಹುಟ್ಟಬೇಕೆಂದರೆ ನೀವು ದಿ ಲಂಚ್ ಬಾಕ್ಸ್ ಸಿನಿಮಾ ನೋಡಬೇಕು. ರಿತೇಶ್ ಬಾತ್ರಾ ಅವರು ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾದಲ್ಲಿ ಒಂದು ಲಂಚ್ ಬಾಕ್ಸ್ ಅಸಾಮಾನ್ಯವಾದ ಸ್ನೇಹಕ್ಕೆ ಕಾರಣವಾಗುವ ಕಥೆಯನ್ನು ಇಲ್ಲಿ ಕಾಣಬಹುದು. ಈ ಸಿನಿಮಾದಲ್ಲಿ ಇರ್ಫಾನ್ ಖಾನ್ ಜತೆ ನಿಮ್ರತ್ ಕೌರ್ ಮತ್ತು ನವಾಜುದ್ದೀನ್ ಸಿದ್ದಿಕಿ ಅವರು ನಟಿಸಿದ್ದಾರೆ.
ಹಮ್ ದಿಲ್ ದೆ ಚುಕೆ ಸನಮ್(1999)
ನಂದಿನಿ ಮತ್ತು ಸಮೀರನ ನವಿರಾದ ಪ್ರೇಮ ಕಥೆ ಈ ಸಿನಿಮಾದಲ್ಲಿದೆ. ಪ್ರೀತಿಗೆ ಬರುವ ಅನೇಕ ಪರೀಕ್ಷೆಗಳು ಇಲ್ಲಿ ಕಥೆಯಗಿವೆ. ಪ್ರೀತಿ ಉಳಿಸಿಕೊಳ್ಳುವುದಕ್ಕಾಗಿ ಹೋರಾಡುತ್ತಿರುವ ಪ್ರೇಮಿಗಳು ನೋಡಲೇಬೇಕಾದ ಸಿನಿಮಾ ಇದು ಎಂದರೂ ತಪ್ಪಾಗದು. ಸಲ್ಮಾನ್ ಖಾನ್, ಐಶ್ವರ್ಯ ರೈ, ಅಜಯ್ ದೇವಗನ್ ಮತ್ತು ವಿಕ್ರಮ್ ಗೋಖಲೆ ಈ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.