ಚೆನ್ನೈ: ಖ್ಯಾತ ಗಾಯಕಿ ವಾಣಿ ಜಯರಾಮ್ (Vani Jayaram Death) ಅವರ ನಿಧನದ ಕುರಿತು ಹಲವು ಅನುಮಾನ ವ್ಯಕ್ತವಾದ ಬೆನ್ನಲ್ಲೇ ಮರಣೋತ್ತರ ವರದಿ ಲಭ್ಯವಾಗಿದ್ದು, ಅವರ ಸಾವಿನ ನಿಖರ ಕಾರಣವನ್ನು ಪೊಲೀಸರು ತಿಳಿಸಿದ್ದಾರೆ. “ವಾಣಿ ಜಯರಾಮ್ ಅವರ ಸಾವಿನ ಕುರಿತು ಯಾವುದೇ ಅನುಮಾನವಿಲ್ಲ. ಆಕಸ್ಮಿಕವಾಗಿ ಬಿದ್ದು ಅವರು ನಿಧನರಾಗಿದ್ದಾರೆ” ಎಂದು ಹೇಳಿದ್ದಾರೆ.
“ವಾಣಿ ಜಯರಾಮ್ ಅವರು ಮನೆಯಲ್ಲಿ ಒಬ್ಬರೇ ಇದ್ದರು. ಹಾಗೆಯೇ, ಮನೆಯ ಬಾಗಿಲು ಹೊರಗಿನಿಂದ ಲಾಕ್ ಆಗಿತ್ತು. ಪೊಲೀಸರು ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದ್ದಾರೆ. ಮನೆಗೆ ಯಾರೂ ಪ್ರವೇಶಿಸಿದ ಕುರಿತು ದೃಶ್ಯದಲ್ಲಿ ಸೆರೆಯಾಗಿಲ್ಲ” ಎಂದು ಮಾಹಿತಿ ನೀಡಿದರು.
ಕನ್ನಡ ಸೇರಿ ೧೪ ಭಾಷೆಗಳಲ್ಲಿ ೧೦ ಸಾವಿರಕ್ಕೂ ಅಧಿಕ ಹಾಡು ಹಾಡಿದ ವಾಣಿ ಜಯರಾಮ್ ಅವರು ಕಳೆದ ಶನಿವಾರ ಮೃತಪಟ್ಟಿದ್ದಾರೆ. ನಿಗೂಢವಾಗಿ ಶವ ಪತ್ತೆಯಾದ ಕಾರಣ ಹಲವು ಶಂಕೆಗಳು ವ್ಯಕ್ತವಾಗಿದ್ದವು. ಈಗ ಪ್ರಾಥಮಿಕ ಮರಣೋತ್ತರ ವರದಿಯು ಸಾವಿನ ಬಗೆಗಿನ ಅನುಮಾನಗಳನ್ನು ದೂರವಾಗಿಸಿದೆ.
ಇದನ್ನೂ ಓದಿ: Vani Jairam Passes Away : ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಮ್ ಹಾಡಿರುವ ಜನಪ್ರಿಯ 25 ಕನ್ನಡ ಹಾಡುಗಳ ಪಟ್ಟಿ ಇಲ್ಲಿದೆ