bನವದೆಹಲಿ: ತಮ್ಮ ತಂದೆ ಸಂಜಯ್ ಗಾಂಧಿ ವಿರುದ್ಧ ಟ್ವಿಟರ್‌ನಲ್ಲಿ ಅವಮಾನಕಾರಿಯಾಗಿ ಪೋಸ್ಟ್ ಮಾಡಿದ ವಾರಾಣಸಿ ವ್ಯಕ್ತಿಯ ವಿರದ್ಧ ಪುತ್ರ, ಬಿಜೆಪಿ ವರುಣ್ ಗಾಂಧಿ (Varun Gandhi) ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಶನಿವಾರ ಪಿಲಿಭಿತ್ ಕೋರ್ಟ್‌ಗೆ ಮೂರು ನ್ಯಾಾಯವಾದಿಗಳೊಂದಿಗೆ ಆಗಮಿಸಿದ ಸಂಸದ ವರುಣ್, ಅಡಿಷನಲ್ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅಭಿನವ್ ಅವರಿದ್ದ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದರು. ವರುಣ್ ಹೇಳಿಕೆಯನ್ನು ದಾಖಲಿಸಲು ಆದೇಶಿಸಿದ ಕೋರ್ಟ್, ಮುಂದಿನ ವಿಚಾರಣೆಯನ್ನು ಏಪ್ರಿಲ್ 25ಕ್ಕಿ ನಿಗದಿ ಮಾಡಿತು.
ದಿವಂಗತ ಸಂಜಯ್ ಗಾಂಧಿ ಅವರು ದೇಶದ ಗಣ್ಯಮಾನ್ಯ ರಾಜಕಾರಣಿಯಾಗಿದ್ದಾರು. ಈಗಲೂ ದೇಶಾದ್ಯಂತ ಅವರ ಬಗ್ಗೆ ಗೌರವವಿದೆ ಎಂದು ವರುಣ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ವಾರಾಣಸಿ ಜಿಲ್ಲೆಯ ಭೋಜ್ಬಿರ್ ನಿವಾಸಿ ವಿವೇಕ್ ಪಾಂಡೆ ಎಂಬಾತ ವ್ಯಕ್ತಿ 2023 ಮಾರ್ಚ್ 29ರಂದು ಟ್ವಿಟರ್ ಮೂಲಕ ಸಂಜಯ್ ಗಾಂಧಿ ವಿರುದ್ಧ ಅವಮಾನಕಾರಿ ಪೋಸ್ಟ್ ಮಾಡಿದ್ದಾರೆಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಸಂಜಯ್ ಗಾಂಧಿ ಅವರ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿರುವ ವ್ಯಕ್ತಿ ತನ್ನನ್ನು ತಾನು ನ್ಯಾಷನಲಿಸ್ಟ್ ಹಿಂದು ಸಂಘಟನೆ ಹಾಗೂ ಕಿಸಾನ್ ಮೋರ್ಚಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಂದು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಬಿಸ್ಲಾಪುರ ಪ್ರದೇಶದ ಬಿಸ್ಲಾಂಡಾಗೆ ಹೋದಾಗ ಜನರೇ ತಮಗೆ ಈ ಬಗ್ಗೆ ಮಾಹಿತಿ ನೀಡಿದ್ದಾರಂದು ವರಣ್ ತಿಳಿಸಿದ್ದಾರೆ.
ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿ ವಿರುದ್ಧ ಮಾನಹಾನಿ ಕೇಸ್; ತೀರ್ಪು ಕಾಯ್ದಿರಿಸಿದ ಕೋರ್ಟ್, ಏ.20ಕ್ಕೆ ಆದೇಶ
ನನ್ನ ತಂದೆ ಅಥವಾ ಯಾವುದೇ ಹಿರಿಯರ ಮೇಲೆ ಯಾರಾದರೂ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದರೆ, ನಾನು ಖಂಡಿತವಾಗಿಯೂ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ, ಇದರಿಂದ ಜನರು ಪಾಠ ಕಲಿಯಬಹುದು ಮತ್ತು ನ್ಯಾಯಾಲಯವು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ಅದನ್ನು ಸ್ವೀಕರಿಸಲಾಗುತ್ತದೆ ಎಂದು ಗಾಂಧಿ ಹೇಳಿದರು.