Site icon Vistara News

Vedanta | ಗುಜರಾತ್‌ನಲ್ಲಿ ಬರಲಿದೆ ವೇದಾಂತದ ಮೆಗಾ ಸೆಮಿಕಂಡಕ್ಟರ್‌ ಉತ್ಪಾದನಾ ಘಟಕ

vedanta

ಅಹಮದಾಬಾದ್:‌ ವೇದಾಂತ ಲಿಮಿಟೆಡ್‌ ಗುಜರಾತ್‌ನಲ್ಲಿ ತನ್ನ ಬೃಹತ್‌ ಸೆಮಿಕಂಡಕ್ಟರ್‌ ಘಟಕ ಯೋಜನೆಯನ್ನು ಅನುಷ್ಠಾನಗೊಳಿಸಲು ನಿರ್ಧರಿಸಿದೆ. ಸೆಮಿಕಂಡಕ್ಟರ್‌ ಚಿಪ್‌ಗಳನ್ನು (Vedanta) ಈ ಬೃಹತ್‌ ಘಟಕ ತಯಾರಿಸಲಿದೆ.

ತೈವಾನ್‌ನ ಫಾಕ್ಸ್‌ಕಾನ್‌ ಜತೆ ಸಹಭಾಗಿತ್ವದದಲ್ಲಿ ಅಸ್ತಿತ್ವಕ್ಕೆ ಬರಲಿರುವ ಈ ಘಟಕಕ್ಕೆ ವೇದಾಂತ ಅಂದಾಜು 20 ಶತಕೋಟಿ ಡಾಲರ್‌ ( 1.58 ಲಕ್ಷ ಕೋಟಿ ರೂ.) ಬಂಡವಾಳ ಹೂಡಿಕೆ ಮಾಡಲಿದೆ.

ವೇದಾಂತ ಸಮೂಹವು ನೂತನ ಸೆಮಿಕಂಡಕ್ಟರ್‌ ಘಟಕ ಸ್ಥಾಪನೆ ಯೋಜನೆಗೆ ಸಂಬಂಧಿಸಿ ಹಣಕಾಸು ಮತ್ತು ಹಣಕಾಸೇತರ ಸಬ್ಸಿಡಿ ಯೋಜನೆಗಳನ್ನು ಗಳಿಸಿದೆ. ಬಂಡವಾಳ ವೆಚ್ಚಕ್ಕೆ ಸಬ್ಸಿಡಿ,‌ ಗುಜರಾತ್‌ನಿಂದ ಅಗ್ಗದ ವಿದ್ಯುತ್ ಸೌಲಭ್ಯ ಸಿಗಲಿದೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಕರ್ನಾಟಕ ಸೇರಿದಂತೆ ನಾನಾ ರಾಜ್ಯಗಳಲ್ಲಿ ಹೂಡಿಕೆಗೆ ವೇದಾಂತ-ಫಾಕ್ಸ್‌ಕಾನ್‌ ಪರಿಶೀಲನೆ ನಡೆಸಿತ್ತು.

ವೇದಾಂತ ಕಂಪನಿಯು 1,000 ಎಕರೆ ಜಾಗವನ್ನು 99 ವರ್ಷಗಳಿಗೆ ಉಚಿತವಾಗಿ ಲೀಸ್‌ಗೆ ಕೋರಿದೆ. ನೀರು ಮತ್ತು ವಿದ್ಯುತ್‌ ಅನ್ನು 20 ವರ್ಷಗಳ ಅವಧಿಗೆ ರಿಯಾಯಿತಿ ದರದಲ್ಲಿ ನಿರೀಕ್ಷಿಸಿದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣ ಕೂಡ ವೇದಾಂತ-ಫಾಕ್ಸ್‌ಕಾನ್‌ ಯೋಜನೆಯನ್ನು ಆಕರ್ಷಿಸಲು ಯತ್ನಿಸಿತ್ತು.

ಮೈಸೂರಿನಲ್ಲಿ ಸೆಮಿಕಂಡಕ್ಟರ್‌ ಘಟಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹಾಗೂ ಐಎಸ್‌ಎಂಸಿ ಅನಲಾಗ್‌ ಫ್ಯಾಬ್‌ ಪ್ರೈವೇಟ್‌ ಲಿಮಿಟೆಡ್‌ ಜತೆಗೆ ಈ ಹಿಂದೆ ಒಪ್ಪಂದ ನಡೆದಿದೆ. ಮೈಸೂರಿನ ಘಟಕಕ್ಕೆ 22,900 ಕೋಟಿ ರೂ. ಹೂಡಿಕೆಯಾಗಲಿದೆ. ಇದರೊಂದಿಗೆ ದೇಶದದಲ್ಲಿ ಎರಡು ಬೃಹತ್‌ ಸೆಮಿಕಂಡಕ್ಟರ್‌ ಘಟಕ ನಿರ್ಮಾಣವಾಗಲಿದೆ.

Exit mobile version